ETV Bharat / state

104 ಮಾದರಿಯ ಸಂಚಾರಿ ವೈದ್ಯಕೀಯ ವಾಹನಗಳ ಸೌಲಭ್ಯದ ಯೋಜನೆ ತರಲು ಸೋಮಶೇಖರ ರೆಡ್ಡಿ ಮನವಿ - ಸಂಚಾರಿ ವೈದ್ಯಕೀಯ ವಾಹನ

ನೆರೆಯ ಆಂಧ್ರ ಪ್ರದೇಶದಲ್ಲಿ ಈಗಾಗಲೇ 104 ಮಾದರಿಯ ಸಂಚಾರಿ ವೈದ್ಯಕೀಯ ವಾಹನಗಳ ಸೌಲಭ್ಯ ಚಾಲ್ತಿಯಲ್ಲಿದ್ದು, ಅದೇ ಮಾದರಿಯಲ್ಲೇ ಕರ್ನಾಟಕದಲ್ಲೂ ಈ 104 ಮಾದರಿಯ ವೈದ್ಯಕೀಯ ಸೌಲಭ್ಯದ ವಾಹನಗಳನ್ನು ತರಬೇಕು ಎಂದು ಶಾಸಕ ಸೋಮಶೇಖರ ರೆಡ್ಡಿ, ಸಚಿವ ಶ್ರೀರಾಮುಲುಗೆ ಮನವಿ ಮಾಡಿದ್ದಾರೆ.

ಸೋಮಶೇಖರ ರೆಡ್ಡಿ
author img

By

Published : Sep 5, 2019, 10:44 AM IST

ಬಳ್ಳಾರಿ: 108 ಆಂಬ್ಯುಲೆನ್ಸ್ ವಾಹನದ ಮಾದರಿಯಲ್ಲೇ 104 ಮಾದರಿಯ ಸಂಚಾರಿ ವೈದ್ಯಕೀಯ ವಾಹನಗಳ ಯೋಜನೆ ಜಾರಿಯಾಗಲಿ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಮನವಿ ಮಾಡಿದ್ದಾರೆ.

ರೋಟಾ ವೈರಸ್ ಲಸಿಕೆ ಕಾರ್ಯಕ್ರಮ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬಳ್ಳಾರಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ರೋಟಾ ವೈರಸ್ ಲಸಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆರೆಯ ಆಂಧ್ರ ಪ್ರದೇಶದಲ್ಲಿ ಈಗಾಗಲೇ 104 ಮಾದರಿಯ ಸಂಚಾರಿ ವೈದ್ಯಕೀಯ ವಾಹನಗಳ ಸೌಲಭ್ಯ ಚಾಲ್ತಿಯಲ್ಲಿದೆ. ಅದೇ ಮಾದರಿಯಲ್ಲೇ ಕರ್ನಾಟಕದಲ್ಲೂ ಈ 104 ಮಾದರಿಯ ವೈದ್ಯಕೀಯ ಸೌಲಭ್ಯದ ವಾಹನಗಳನ್ನು ತರಬೇಕು ಎಂದರು.

ಯಾವ ರೀತಿಯಾಗಿ 108 ಆಂಬ್ಯುಲೆನ್ಸ್ ವಾಹನಗಳು ಹಳ್ಳಿ ಹಳ್ಳಿ ಸಂಚರಿಸಿ, ತುರ್ತು ವೈದ್ಯಕೀಯ ಚಿಕಿತ್ಸೆಗೆ ನೆರವಾಗುತ್ತಿದೆಯೋ ಅದೇ ಮಾದರಿಯಲ್ಲೇ ಈ ವೈದ್ಯಕೀಯ ಸೌಲಭ್ಯದ ವಾಹನಗಳು ನೆರವಾಗಲಿವೆ. ಅಲ್ಲದೇ, ಈ ಸಂಚಾರಿ ವೈದ್ಯಕೀಯ ವಾಹನಗಳಲ್ಲಿ ಅಗತ್ಯ ವೈದ್ಯರು, ಸ್ಟಾಪ್​​ ನರ್ಸ್​ಗಳನ್ನೂ ನಿಯೋಜಿಸಿ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸುವಂತೆ ನೋಡಿಕೊಳ್ಳಬೇಕು. ಕೂಡಲೇ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಈ ಮಾದರಿಯ ವಾಹನಗಳ ಸೌಲಭ್ಯವನ್ನು ಅನುಷ್ಠಾನಗೊಳಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಲ್ಲಿ ಶಾಸಕ ಸೋಮಶೇಖರ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.

Intro:104 ಮಾದರಿಯ ಸಂಚಾರಿ ವೈದ್ಯಕೀಯ ವಾಹನಗಳ ಸೌಲಭ್ಯದ ಯೋಜನೆ ಜಾರಿಯಾಗಲಿ: ಶಾಸಕ ರೆಡ್ಡಿ ಮನವಿ
ಬಳ್ಳಾರಿ: 108 ಅಂಬ್ಯುಲೆನ್ಸ್ ವಾಹನದ ಮಾದರಿಯಲ್ಲೇ 104 ಮಾದರಿಯ ಸಂಚಾರಿ ವೈದ್ಯಕೀಯ ವಾಹನಗಳ ಯೋಜನೆ ಜಾರಿಯಾಗಲಿ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮ ಶೇಖರರೆಡ್ಡಿ ಅವರು ಮನವಿ ಮಾಡಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬಳ್ಳಾರಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ರೋಟಾ ವೈರಸ್ ಲಸಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನೆರೆಯ ಆಂಧ್ರಪ್ರದೇಶದಲ್ಲಿ ಈಗಾಗಲೇ 104 ಮಾದರಿಯ ಸಂಚಾರಿ ವೈದ್ಯಕೀಯ ವಾಹನಗಳ ಸೌಲಭ್ಯ ಚಾಲ್ತಿಯಲ್ಲಿದ್ದು, ಅದೇ ಮಾದರಿಯಲ್ಲೇ ಕರ್ನಾಟಕದಲ್ಲೂ ಈ 104 ಮಾದರಿಯ ವೈದ್ಯಕೀಯ ಸೌಲಭ್ಯದ ವಾಹನಗಳನ್ನು ಜಾರಿಗೊಳಿಸಬೇಕು ಎಂದರು.
ಯಾವ ರೀತಿಯಾಗಿ 108 ಅಂಬ್ಯುಲೆನ್ಸ್ ವಾಹನಗಳು ಹಳ್ಳಿಹಳ್ಳಿ ಸಂಚರಿಸಿ, ತುರ್ತು ವೈದ್ಯಕೀಯ ಚಿಕಿತ್ಸೆಗೆ ನೆರವಾಗುತ್ತಿದೆಯೋ ಅದೇ ಮಾದರಿಯಲ್ಲೇ ಈ ವೈದ್ಯಕೀಯ ಸೌಲಭ್ಯದ ವಾಹನಗಳು ನೆರವಾಗಲಿವೆ. ಅಲ್ಲದೇ, ಈ ಸಂಚಾರಿ ವೈದ್ಯಕೀಯ ವಾಹನಗಳಲ್ಲಿ ಅಗತ್ಯ ವೈದ್ಯರು, ಸ್ಟಾಫ್ ನರ್ಸ್ಗಳನ್ನೂ ನಿಯೋಜಿಸಿ ಹಳ್ಳಿಹಳ್ಳಿಗಳಲ್ಲಿ ಸಂಚರಿಸುವಂತೆ ನೋಡಿಕೊಳ್ಳಬೇಕು. ಆ ಸಂಚಾರಿ ವೈದ್ಯಕೀಯ ವಾಹನಗಳಲ್ಲಿ ಕಿವಿ, ಕಣ್ಣು ಇನ್ನಿತರೆ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಯನ್ನು ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕೂಡಲೇ ರಾಜ್ಯ ಸರ್ಕಾರ ದೊಂದಿಗೆ ಚರ್ಚಿಸಿ ಈ ಮಾದರಿಯ ವಾಹನಗಳ ಸೌಲಭ್ಯವನ್ನು ಅನುಷ್ಠಾನಗೊಳಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಲ್ಲಿ ಶಾಸಕ ರೆಡ್ಡಿ ಯವರು ಮನವಿ ಮಾಡಿಕೊಂಡಿದ್ದಾರೆ.

Body:ಈ ಜಿಲ್ಲೆಯಿಂದಲೇ ಉಸ್ತುವಾರಿಯಾಗಲಿ, ಮುಖ್ಯಮಂತ್ರಿ ಯಾಗಲಿ: ಸಚಿವ ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಿಂದ ಪ್ರತಿನಿಧಿಸಿದರೂ ಅವರು ಈ ಜಿಲ್ಲೆಯವ್ರೇ. ಮುಂಬರುವ ದಿನಗಳಲ್ಲಿ ಈ ಜಿಲ್ಲೆಯಿಂದಲೇ ಅವರು ಪ್ರತಿನಿಧಿಸಲಿ. ಇಲ್ಲಿಂದಲೇ ಮಂತ್ರಿಯಾಗಲಿ, ಮುಖ್ಯಮಂತ್ರಿ ಯಾಗಲಿ ಎಂದು ಶಾಸಕ ರೆಡ್ಡಿ ಹಾರೈಸಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಮತ್ತಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವ ಮುಖೇನ ಅವರು
ಮತ್ತಷ್ಟು ಜನಾನುರಾಗಿ ಮಂತ್ರಿಯಾಗಿ ಹೊರಹೊಮ್ಮಲಿ ಎಂದು ಕೋರಿದ್ದಾರೆ ಅವರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ. ಗಮನಿಸಿರಿ.
KN_BLY_1_MLA_SOMASHEKAR_REDY_SPEECH_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.