ETV Bharat / state

ಗಾಜಿನ ಗೋಲಿ ನುಂಗಿ ಒಂದು ವರ್ಷದ ಮಗು ದುರ್ಮರಣ - ಗಾಜಿನ ಗೋಲಿ ನುಂಗಿ ಒಂದು ವರ್ಷದ ಮಗು ದುರ್ಮರಣ

ಆಟವಾಡುತ್ತಿದ್ದ ಸಂದರ್ಭದಲ್ಲಿ ಗಾಜಿನ ಗೋಲಿ‌ ನುಂಗಿ ಒಂದು ವರ್ಷ ಎರಡು ತಿಂಗಳ ಮಗುವೊಂದು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದಲ್ಲಿ ನಡೆದಿದೆ.

baby death in Vijayanagar
baby death in Vijayanagar
author img

By

Published : Jul 13, 2021, 11:24 PM IST

ಹೊಸಪೇಟೆ (ವಿಜಯನಗರ): ಆಟವಾಡುತ್ತಿದ್ದಾಗ ಗಾಜಿನ ಗೋಲಿ‌ ನುಂಗಿರುವ ಪರಿಣಾಮ ಒಂದು ವರ್ಷ ಎರಡು ತಿಂಗಳ ಮಗುವೊಂದು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದಲ್ಲಿ ನಡೆದಿದೆ.

ಮನವೀರ್ ಮೃತಪಟ್ಟಿರುವ ಮಗು. ಮನೆಯ ಮುಂದಿನ ಜಾಗದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗೋಲಿ‌ ಬಾಯಲ್ಲಿ ಹಾಕಿಕೊಂಡು ಅದನ್ನ ನುಂಗಿದೆ. ಮಗುವಿನ ಗಂಟಲಿನಲ್ಲಿ ಗೋಲಿ ಇರುವುದು ಕಂಡು ಬರುತ್ತಿದ್ದಂತೆ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆ ವೇಳೆಗೆ ಮಗು ಮೃತಪಟ್ಟಿದೆ. ಮಗು ಗೋಲಿ ನುಂಗಿರುವುದನ್ನ ಆತನ ಜತೆಗಿದ್ದ ಮತ್ತೋರ್ವ ಬಾಲಕ ಗುರುತಿಸಿದ್ದನು.

ಇದನ್ನೂ ಓದಿರಿ: ಮಂಡ್ಯದಿಂದಲೇ ರಾಜಕೀಯದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಾರಂತೆ ಮೋಹಕ ತಾರೆ

ಹರೀಶ್ ಎಂಬುವರ ಪುತ್ರ ಮನವೀರ್​ ಪ್ರತಿದಿನ ಮನೆಯಂಗಳದಲ್ಲಿ ಗಾಜಿನ ಗೋಲಿಯಿಂದ ಇತರೆ ಮಕ್ಕಳೊಂದಿಗೆ ಆಟವಾಡುತ್ತಿತ್ತು. ಇಂದು ಸಂಜೆ ಕೂಡ ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ಗೋಲಿ ಬಾಯಲ್ಲಿ ಹಾಕಿಕೊಂಡು ಕ್ಷಣದಲ್ಲಿ ನುಂಗಿ ಬಿಟ್ಟಿದ್ದಾನೆ. ಮಗು ಗೋಲಿ ನುಂಗಿದನ್ನ ಗಮನಿಸಿದ ಜೊತೆಗಿದ್ದ ಬಾಲಕ ಪಾಲಕರಿಗೆ ಹೇಳಿದ್ದು, ಪಾಲಕರು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಗು ಮನವೀರ್ ಸಾವನ್ನಪ್ಪಿದೆ. ಇನ್ನು ಮಗುವನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.