ETV Bharat / state

ಎಚ್‌ಎಲ್‌ಸಿ ಕಾಲುವೆಗೆ ಉರುಳಿದ ಆಟೋ: ಮತ್ತೆರಡು ಮೃತದೇಹ ಮತ್ತೆ, ಸಾವಿನ ಸಂಖ್ಯೆ 5ಕ್ಕೇರಿಕೆ

ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆಟೋ ಎಚ್‌ಎಲ್‌ಸಿ ಕಾಲುವೆಗೆ ಪಲ್ಟಿಯಾದ ಘಟನೆಗೆ ಸಂಬಂಧಿಸಿದಂತೆ ಮತ್ತೆರಡು ಮೃತದೇಹ ಪತ್ತೆಯಾಗಿದೆ. ಈ ಮೂಲಕ ಒಟ್ಟು 5 ಶವ ಪತ್ತೆಯಾದಂತಾಗಿದೆ. ಒಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ.

hcl canal
ಎಚ್‌ಎಲ್‌ಸಿ ಕಾಲುವೆಗೆ ಉರುಳಿದ ಆಟೋ
author img

By

Published : Sep 16, 2022, 9:58 AM IST

Updated : Sep 16, 2022, 11:54 AM IST

ಬಳ್ಳಾರಿ: ಕೊಳಗಲ್​ ಗ್ರಾಮದ ಕೃಷಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಆಟೋವೊಂದು ಎಚ್‌ಎಲ್‌ಸಿ ಕಾಲುವೆಗೆ ಉರುಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ನಾಗರತ್ನಮ್ಮ (18) ಮತ್ತು ಮಲ್ಲಮ್ಮ (30) ಎಂಬುವರ ಶವ ಪತ್ತೆಯಾಗಿದೆ. ಇನ್ನೊಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಎಚ್‌ಎಲ್‌ಸಿ ಕಾಲುವೆಗೆ ಉರುಳಿದ ಆಟೋ

ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಿಂದ ಕೃಷ್ಣಾನಗರಕ್ಕೆ ಆಟೋದಲ್ಲಿ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಕಾಲುವೆಗೆ ಉರುಳಿ ಬಿದ್ದಿತ್ತು. ದುರಂತದಲ್ಲಿ ಐವರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಮೂವರು ಕಾರ್ಮಿಕರ ಮೃತದೇಹ ಪತ್ತೆಯಾಗಿತ್ತು. ಘಟನೆ ನಡೆದ ಸ್ಥಳದಿಂದ 12 ಕಿ.ಮೀ.ದೂರದ ಬಂಡಿಹಟ್ಟಿ ಬಳಿ ನಾಗರತ್ನಮ್ಮ ಎಂಬುವರ ಮೃತದೇಹ‌ ನಿನ್ನೆ ಸಿಕ್ಕಿತ್ತು. ಇಂದು ಬೆಳಗ್ಗೆ ಉಂತಕಲ್ ಸಮೀಪ ಮಲ್ಲಮ್ಮ ದೇಹ ಪತ್ತೆಯಾಗಿದೆ. ಲಕ್ಷ್ಮಿ ಎಂಬವರಿಗಾಗಿ ಹುಡುಕಾಟ ಮುಂದುವರೆದಿದೆ.

ಇದನ್ನೂ ಓದಿ: HLC ಕಾಲುವೆಗೆ ಉರುಳಿ ಬಿದ್ದ ಆಟೋ: ಮೂವರು ಸಾವು, ಹಲವರು ನಾಪತ್ತೆ, ಐದು ಜನರ ರಕ್ಷಣೆ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಪೊಲೀಸರು ಆಗಮಿಸಿ ಮೃತದೇಹವನ್ನು ವಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಮುಂದುವರೆಸಿದ್ದಾರೆ.

Last Updated : Sep 16, 2022, 11:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.