ETV Bharat / state

ಕಾಡು ಪ್ರಾಣಿ ದಾಳಿಯಿಂದ 26 ಕುರಿಗಳ ಸಾವು - wild animals attack

ಹೊಸಪೇಟೆ ಸುತ್ತಮುತ್ತ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಇಲ್ಲಿನ ಅಯ್ಯನಹಳ್ಳಿ ಬಳಿ ಕುರಿ ಮರಿಗಳ ಮೇಲೆ ದಾಳಿ ಮಾಡಿರುವ ಕಾಡು ಪ್ರಾಣಿ 26 ಮರಿಗಳನ್ನು ಸಾಯಿಸಿದೆ.

Attack on lambs from a wild animal: 26 sheep deaths...
ಕಾಡು ಪ್ರಾಣಿಯಿಂದ ಕುರಿಮರಿಗಳ ಮೇಲೆ ದಾಳಿ : 26 ಕುರಿಗಳ ಸಾವು
author img

By

Published : Apr 23, 2020, 10:19 PM IST

ಹೊಸಪೇಟೆ/ಬಳ್ಳಾರಿ: ತಾಲೂಕಿನ ಅಯ್ಯನಹಳ್ಳಿ ಗ್ರಾಮದ ಹೊರವಲಯದಲ್ಲಿನ ಜಮೀನೊಂದರಲ್ಲಿ ಸಿಂದೋಗಿ ಸೋಮಣ್ಣ ಮತ್ತು ನಕ್ರಾಳ ಮರಿಬಸಪ್ಪ ಎಂಬುವರಿಗೆ ಸೇರಿದ 26 ಕುರಿಗಳ ಮೇಲೆ ಕಾಡುಪ್ರಾಣಿ ದಾಳಿ ಮಾಡಿ ಸಾಯಿಸಿರುವ ಘಟನೆ ನಡೆದಿದೆ.

ಎಂದಿನಂತೆ ಹಟ್ಟಿಯೊಳಗೆ ಮಲಗಿದ್ದ ಕುರಿಮರಿಗಳ ಮೇಲೆ ಕಾಡು ಪ್ರಾಣಿ ದಾಳಿ ನಡೆಸಿದೆ. ಈ ಹಿನ್ನೆಲೆ 26 ಕುರಿ ಮರಿಗಳು ಸಾವನ್ನಪ್ಪಿದ್ದು, 14 ಕುರಿಗಳ ಸ್ಥಿತಿ ಗಂಭೀರವಾಗಿದೆ.

ಘಟನಾ ಸ್ಥಳಕ್ಕೆ ಹೊಸಪೇಟೆ ಪ್ರಭಾರಿ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಬೆಣ್ಣೆ ಬಸವರಾಜ ಭೇಟಿ ನೀಡಿ, ಸಾವನ್ನಪ್ಪಿರುವ ಕುರಿಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಡಣಾಪುರ ಪಶುವೈದ್ಯ ಗುರುಬಸವರಾಜ, ಪಶುಪರೀಕ್ಷಕ ವೀರೇಶ ಮರಣೋತ್ತರ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಸತ್ತ ಕುರಿಮರಿಗಳ ವರದಿಯನ್ನು ಸರ್ಕಾರಕ್ಕೆ ಕಳಿಸಿದ್ದು, ಪರಿಹಾರವನ್ನು ಸಂಬಂಧಿಸಿದ ಇಲಾಖೆಯಿಂದ ನೀಡಲಾಗುತ್ತದೆ ಎಂದು ಬೆಣ್ಣೆ ಬಸವರಾಜ ತಿಳಿಸಿದ್ದಾರೆ. ಡಣಾಪುರ ಜಿ.ಪಂ ಸದಸ್ಯೆ ರೇಖಾ ಪ್ರಕಾಶ್​, ಕುರಿ ಮಾಲೀಕರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ವಿತರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.