ಬಳ್ಳಾರಿ: ಬಿಜೆಪಿ ಯುವ ಮೋರ್ಚಾದಿಂದ ಇಲ್ಲಿನ ಸತ್ಯ ನಾರಾಯಣ ಪೇಟೆಯಲ್ಲಿರುವ ಉದ್ಯಾನದಲ್ಲಿಂದು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 96 ವರ್ಷದ ಜನ್ಮದಿನವನ್ನು ಆಚರಿಸಲಾಯಿತು.
ಉದ್ಯಾನದ ಮಧ್ಯಭಾಗದಲ್ಲಿ ವಾಜಪೇಯಿ ಅವರ ಬೃಹತ್ ಭಾವಚಿತ್ರವನ್ನು ಸ್ಥಾಪಿಸಿದ್ದು, ಶಾಸಕ ಸೋಮಶೇಖರ ರೆಡ್ಡಿ ಪುಷ್ಪನಮನ ಸಲ್ಲಿಸಿದ್ರು. ಬಳಿಕ, ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಗಾಲಿ ಸೋಮಶೇಖರರೆಡ್ಡಿ, ಈ ರಕ್ತದಾನ ಮಾಡುವವರ ಕಾಲಿಗೆ ಎರಗಿ ನಮಸ್ಕರಿಸುವೆ ಎಂದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಸ್.ಮಲ್ಲನಗೌಡರು, ಶ್ರೀನಿವಾಸ ಮೋತ್ಕರ್, ಶಾಸಕರ ಆಪ್ತ ಸಹಾಯಕ ವೀರಶೇಖರರೆಡ್ಡಿ, ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ, ಬಿಜೆಪಿ ರೈತಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಗಣಪಾಲ ಐನಾಥರೆಡ್ಡಿ ಈ ವೇಳೆ ಹಾಜರಿದ್ದರು.
ಓದಿ: ವಾಜಪೇಯಿಗೆ ರಾಷ್ಟ್ರಪತಿ, ಪ್ರಧಾನಿ ನಮನ: ಭಜನೆ ಮೂಲಕ ಅಜಾತಶತ್ರುವಿನ ಸ್ಮರಣೆ