ಹೊಸಪೇಟೆ : ವಿಜಯನಗರ ಜಿಲ್ಲೆಗೆ ನೂತನ ಡಿಸಿಯಾಗಿ ಅನಿರುದ್ದ್ ಶ್ರವಣ್ ಬರಲಿದ್ದಾರೆ. ಆದರೆ, ಇನ್ನೂ ಅಧಿಕೃತ ಆದೇಶವಾಗಿಲ್ಲ. ಈ ಹಿಂದೆ ಅವರು ಬಳ್ಳಾರಿ ಉಪವಿಭಾಗಾಧಿಕಾರಿಗಳಾಗಿ ಕೆಲಸ ಮಾಡಿದ್ದರು. ಎಸ್ಪಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಯಾರು ಬರುತ್ತಾರೆ ಎಂಬುದು ಫೈನಲ್ ಆಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಶಾಸಕ ಸೋಮಶೇಖರ್ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸೋಮಶೇಖರ ರೆಡ್ಡಿ ಹಿರಿಯರು, ಅವರು ಏಕವಚನದಲ್ಲಿ ಮಾತನಾಡಲಿ. ನಮ್ಮ ಅಣ್ಣ ಮಾತಾಡದಿದ್ದರೇ, ಮತ್ಯಾರು ಮಾತನಾಡಬೇಕು. ತಮ್ಮನ ಮೇಲೆ ಏಕವಚನದಲ್ಲಿ ಮಾತನಾಡದೇ ಯಾರ ಜೊತೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದಿದ್ದಾರೆ.
ವಿದ್ಯಾನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 1 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಡಾ.ಬಾಬು ಜಗಜೀವನರಾಂ ಭವನದ ನೂತನ ಕಟ್ಟಡವನ್ನು ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಉದ್ಘಾಟಿಸಿದರು.
ಭವನವನ್ನು ಸಮುದಾಯದ ಕಾರ್ಯಕ್ರಮಗಳಿಗೆ ಉಪಯೋಗ ಮಾಡಿಕೊಳ್ಳಿ. ಮುಂದಿನ ದಿನಗಳಲ್ಲಿ ಈ ಭವನದ ಪಕ್ಕ ಅಂಬೇಡ್ಕರ್ ಭವನವನ್ನು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.
ಇದನ್ನೂ ಓದಿ: ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಮೇಳ..!