ETV Bharat / state

ಗಣಿನಗರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಒಲವು- ಸಚಿವ ಆನಂದಸಿಂಗ್ - airport

ಒಂದೆಡೆ ರೈತರ ಭೂಮಿ ಪರಭಾರೆ ಮಾಡೋ ವಿಚಾರವಾಗಿ ಅತೀವ ವಿರೋಧ ವ್ಯಕ್ತಪಡಿಸಿ ಕಳೆದ ಸಮ್ಮಿಶ್ರ ಸರ್ಕಾರದಿಂದಲೇ ಹೊರಬಂದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು, ಇದೀಗ ರೈತ ವಿರೋಧಿ ಕಾರ್ಯಕ್ಕೆ ಮುಂದಾಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ..

bellary airport news
ಸಚಿವ ಆನಂದಸಿಂಗ್ ಹೇಳಿಕೆ
author img

By

Published : Sep 7, 2020, 6:07 PM IST

ಬಳ್ಳಾರಿ : ಗಣಿನಗರಿಯ ವಿವಾದಿತ ಚಾಗನೂರು-ಸಿರವಾರ ಗ್ರಾಮಗಳ ಸ್ಥಳದಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣದ ಕುರಿತಾದ ಚರ್ಚೆ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ವಿವಾದಿತ ಭೂಮಿಯಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕಾ? ಬೇಡವೋ ಎಂಬ ಚರ್ಚೆಯೂ ಕೂಡ ನಡೆದಿದೆ. ಆದರೆ, ವಾಸ್ತವವಾಗಿ ರಾಜ್ಯ ಸರ್ಕಾರ ಮಾತ್ರ ವಿವಾದಿತ ಚಾಗನೂರು-ಸಿರವಾರ ಭೂಮಿಯಲ್ಲೇ ಈ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಒಲವು ತೋರಿದೆಯಂತೆ.

ವಿಮಾನ ನಿಲ್ದಾಣ ನಿರ್ಮಾಣ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಪ್ರತಿಕ್ರಿಯೆ

ಹೀಗಾಗಿ, ಕಳೆದ ಬಾರಿಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಚಾಗನೂರು-ಸಿರವಾರ ರೈತರಿಂದ ವಿರೋಧ ವ್ಯಕ್ತವಾಗಿತ್ತು.‌ ಈಗ ಮತ್ತೆ ಅದು ಮುನ್ನಲೆಗೆ ಬಂದಿದೆ. ಆದ್ರೆ, ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು, ಇದು ಚರ್ಚೆಯಷ್ಟೇ ಎಂದು ವಿಷಯಾಂತರ ಮಾಡದೇ ಒಳ ಒಳಗೆ ಈ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಅನುದಾನದ ಕೊರತೆ ಎದುರಾದ್ರೆ ಜಿಲ್ಲಾ ಖನಿಜ ನಿಧಿಯಿಂದಲೂ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಒಂದೆಡೆ ರೈತರ ಭೂಮಿ ಪರಭಾರೆ ಮಾಡೋ ವಿಚಾರವಾಗಿ ಅತೀವ ವಿರೋಧ ವ್ಯಕ್ತಪಡಿಸಿ ಕಳೆದ ಸಮ್ಮಿಶ್ರ ಸರ್ಕಾರದಿಂದಲೇ ಹೊರಬಂದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು, ಇದೀಗ ರೈತ ವಿರೋಧಿ ಕಾರ್ಯಕ್ಕೆ ಮುಂದಾಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಈ ಸಂಬಂಧ ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಗಣಿನಾಡಿನಲಿ ಉದ್ದೇಶಿತ ಚಾಗನೂರು- ಸಿರವಾರ ಗ್ರಾಮದಲ್ಲಿ ವಿಮಾನ ನಿಲ್ದಾಣ ಮಾಡೋ ವಿಚಾರವು ರಾಜ್ಯ ಸರ್ಕಾರದ ಮುಂದಿದೆ.‌

ಕೇವಲ ಐದು ಕೋಟಿ ಅನುದಾನ ಮಾತ್ರ ಮೀಸಲಿದೆ.‌ ಅಲ್ಲಿಯ ರೈತರ ಮನವೊಲಿಕೆ ಮಾಡೋ ಮುಖೇನ ಈ ವಿಮಾನ ನಿಲ್ದಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಲಿದೆ.‌ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಚರ್ಚಿಸಲಾಗಿದೆ.‌ ಸದ್ಯದ ಮಟ್ಟಿಗೆ ರಾಜ್ಯ ಸರ್ಕಾರ ವಿಮಾನ ನಿಲ್ದಾಣ ನಿರ್ಮಾಣ ಮಾಡೋ ಚಿಂತನೆಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಆನಂದಸಿಂಗ್ ತಿಳಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.