ETV Bharat / state

ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ: ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ ಎಂದ ಸಚಿವರು

ಬಳ್ಳಾರಿ ಜಿಲ್ಲೆ ವಿಭಜನೆ ಬಳಿಕ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಆನಂದ್ ​ಸಿಂಗ್​, ನೂತನ ವಿಜಯನಗರ ಜಿಲ್ಲೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರನ್ನು ಆಹ್ವಾನಿಸಲಾಗುತ್ತದೆ. ಅದಕ್ಕಾಗಿ ಅವಕಾಶ ಇದ್ದು, ಒಂದು ತಿಂಗಳ ಅವಧಿ ಇದೆ. ನಾಲ್ಕೈದು ದಿನದಲ್ಲಿ ಕಾಲ್ ಮಾಡಲಾಗುತ್ತದೆ. ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತಗೊಂಡು ಈ ನಿರ್ಧಾರ ಮಾಡಿದ್ದೇವೆಯೇ ಹೊರತು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

minister anand singh and dcm lakshman savadi pressmeet
ಸುದ್ದಿಗೋಷ್ಟಿ
author img

By

Published : Nov 29, 2020, 1:29 PM IST

ಬಳ್ಳಾರಿ : ಜಿಲ್ಲೆಯ ವಿಭಜನೆಯ ನಂತರ ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ, ಉಸ್ತುವಾರಿ ಸಚಿವ ಆನಂದ್ ಸಿಂಗ್ ಮೊದಲ ಜಂಟಿ ಮಾಧ್ಯಮಗೋಷ್ಟಿ ನಡೆಸಿದ್ರು.

ಆಕ್ಷೇಪಣೆ ಸಲ್ಲಿಕೆಗೆ ಸಾರ್ವಜನಿಕರಿಗೆ ಅವಕಾಶವಿದೆ ಎಂದ ಸಚಿವರು
ಈ ವೇಳೆ ಡಿಸಿಎಂ ಸವದಿ ಮಾತನಾಡಿ, ಹಳ್ಳಿಯಿಂದ ದಿಲ್ಲಿಯವರೆಗೆ ಪಕ್ಷ ಗಟ್ಟಿಗೊಳಿಸಿದ್ದೇವೆ, ರಾಜ್ಯದಲ್ಲಿ 6 ತಂಡಗಳನ್ನು ಮಾಡಿ ಎಲ್ಲಾ ಕಡೆ ಸಂಚಾರ ಮಾಡುತ್ತಿದ್ದೇವೆ. ಗ್ರಾ.ಪಂ. ಗಳಲ್ಲಿ ಶೇ. 80 ರಷ್ಟು ಜನ ಬಿಜೆಪಿಯಿಂದ ಆಯ್ಕೆಯಾಗಬೇಕು ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದರು‌. ಪಕ್ಷದೊಳಗೆ ಭಿನ್ನಮತ ಇಲ್ಲ, ಒಗ್ಗಟ್ಟಿನ ಕೊರತೆ ಕಂಡಿಲ್ಲ, ಗಾಳಿ ಸುದ್ದಿಗಳಿಗೆ ರೆಕ್ಕೆ ಪುಕ್ಕ ಕಟ್ಟಲಾಗುತ್ತಿದೆ ಅಷ್ಟೇ. 2023 ರ ಚುನಾವಣೆಯವರೆಗೆ ಬಿಎಸ್​​ವೈ ಅವರೇ ಸಿಎಂ ಆಗಿರ್ತಾರೆ, ಇದ್ರಲ್ಲಿ ಯಾವುದೇ ಅನುಮಾನವಿಲ್ಲ. ಗಾಳಿ ಸುದ್ದಿಗಳಿಗೆ ಕಿವಿಗೊಡೋದು ಬೇಡ ಅಂತ ಡಿಸಿಎಂ ಸವದಿ ಹೇಳಿದ್ರು.
ಪಬ್ಲಿಕ್ ಹಿಯರಿಂಗ್​ಗೆ ಅವಕಾಶ ಇದೆ: ವಿಜಯನಗರ ಜಿಲ್ಲೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಆಹ್ವಾನಿಸಲಾಗುತ್ತದೆ. ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಅವಧಿ ಇದೆ. ನಾಲ್ಕೈದು ದಿನದಲ್ಲಿ ಕಾಲ್ ಮಾಡಲಾಗುತ್ತದೆ. ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತಗೊಂಡು ಈ ನಿರ್ಧಾರ ಮಾಡಿದ್ದೇವೆಯೇ ಹೊರತು ರಾಜಕೀಯ ಉದ್ದೇಶ ಇಲ್ಲ ಅಂತ ಆನಂದ್​ ಸಿಂಗ್​ ಸ್ಪಷ್ಟಪಡಿಸಿದರು.

ಇದೇ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರ ಆತ್ಮಹತ್ಯೆ ಯತ್ನ ಅವರ ವೈಯಕ್ತಿಕ ವಿಚಾರ ಎಂದು ಪ್ರತಿಕ್ರಿಯಿಸಿದ್ರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.