ETV Bharat / state

ಆನಂದ್ ಸಿಂಗ್ ಪುತ್ರಿಯ ಅದ್ಧೂರಿ ಆರತಕ್ಷತೆ: ಗಣ್ಯರ ಸಮಾಗಮ

ಸಚಿವ ಆನಂದ್ ಸಿಂಗ್ ಅವರ ಪುತ್ರಿ ವೈಷ್ಣವಿ ಸಿಂಗ್ ಮತ್ತು ಯಶರಾಜ್ ಸಿಂಗ್ ಅವರ ಆರಕ್ಷತೆ ಸಮಾರಂಭ ವಿಜಯನಗರದ ಬಟ್ರಹಳ್ಳಿ ಶ್ರೀ ಆಂಜನೇಯ ದೇವಸ್ಥಾನದ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು.

Etv Bharat
ಆನಂದ್ ಸಿಂಗ್ ಪುತ್ರಿಯ ಅದ್ಧೂರಿ ಆರತಕ್ಷತೆ
author img

By

Published : Dec 10, 2022, 7:44 AM IST

ವಿಜಯನಗರ: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಪುತ್ರಿ ವೈಷ್ಣವಿ ಸಿಂಗ್ ಮತ್ತು ಯಶರಾಜ್ ಸಿಂಗ್ ಅವರ ಆರಕ್ಷತೆ ಸಮಾರಂಭ ನಗರದ ಬಟ್ರಹಳ್ಳಿ ಶ್ರೀ ಆಂಜನೇಯ ದೇವಸ್ಥಾನದ ಮೈದಾನದಲ್ಲಿ ಶುಕ್ರವಾರ ರಾತ್ರಿನಡೆಯಿತು.

ಜೈಪುರ ಕೋಟೆ ಮಾದರಿಯ ಅದ್ಧೂರಿ ಸೆಟ್‌ನಲ್ಲಿ ಝಗಮಗಿಸುವ ವಿದ್ಯುತ್ ಬೆಳಕಿನ ನಡುವೆ ನಡೆದ ಆರಕ್ಷತೆ ಸಮಾರಂಭದಲ್ಲಿ ವೈಷ್ಣವಿ ಸಿಂಗ್ ಮತ್ತು ಯಶರಾಜ್ ಸಿಂಗ್ ಅವರು ರಾಜರಾಣಿಯರಂತೆ ಕಂಗೊಳಿಸಿದರು. ವೇದಿಕೆ ದ್ವಾರದ ಎರಡು ಬದಿಯಲ್ಲಿ ರಾಜನರ್ತಕಿಯರು ಅದ್ಧೂರಿ ಸ್ವಾಗತ ಕೋರಿದರು. ಆಗಸದೆತ್ತರದ ಭವ್ಯ ವೇದಿಕೆಯತ್ತ ವಿವಿಧ ಸಾಂಸ್ಕೃತಿಕ ವೈಭವ ಸಾರುವ ಮೆರವಣೆಗೆಯ ಜೊತೆಗೆ ನವ ಜೋಡಿ ಹೆಚ್ಚೆಗಳನ್ನಿಡುತ್ತ ಸಾಗುತ್ತಿರುವುದು ನೋಡುಗರ ಗಮನ ಸೆಳೆಯಿತು.

ಈ ಅದ್ಧೂರಿ ಸಮಾರಂಭದಲ್ಲಿ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳು ಸೇರಿ ಸಾವಿರಾರು ಜನರು ಆಗಮಿಸಿ ನವ ಜೋಡಿಗೆ ಶುಭ ಕೋರಿದರು. ಆನಂದ ಸಿಂಗ್ ಪತ್ನಿ, ಲಕ್ಷ್ಮೀಸಿಂಗ್, ತಾಯಿ ಸುನೀತಾ ಬಾಯಿ, ಪುತ್ರ ಸಿದ್ದಾರ್ಥ್ ಸಿಂಗ್, ಪುತ್ರಿ ಯಶ್ವಸಿ ಸಿಂಗ್, ಸಹೋದರ ಈಶ್ವರ್ ಸಿಂಗ್, ಗೋಪಾಲ ಸಿಂಗ್, ಪ್ರವೀಣ್ ಸಿಂಗ್, ವಿನೋದ್ ಸಿಂಗ್, ಸಂತೋಷ್ ಸಿಂಗ್, ಸಂದೀಪ್ ಸಿಂಗ್, ಧಮೇಂದ್ರ ಸಿಂಗ್ ಸೇರಿದಂತೆ ಕುಟುಂಬದ ಸದಸ್ಯರು ಅಥಿತಿಗಳನ್ನು ಪ್ರೀತಿಯಿಂದ ಬರ ಮಾಡಿಕೊಂಡರು.

ಸಾಗರೋಪಾದಿಯಲ್ಲಿ ಜನರು ಆಗಮಿಸಿ, ವಧುವರರಿಗೆ ಶುಭ ಹಾರೈಸಿದರು. ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಭಾಗವಹಿಸಿ, ಶುಭಹಾರೈಸಿದರು.

ಇದನ್ನೂ ಓದಿ:ಜಗತ್ತಿನೆದುರು ಭಾರತದ ಮಹತ್ವ ತೋರಿಸುವ ಕಾಲವಿದು: ರಾಜ್ಯಪಾಲ ಗೆಹ್ಲೋಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.