ETV Bharat / state

ನಿಮ್ಮನ್ನು ರಕ್ಷಣೆ ಮಾಡೋಕೆ ನಾವೇ ಉಳಿಯುವ ವಿಶ್ವಾಸವಿಲ್ಲ: ಆನಂದ್​​ ಸಿಂಗ್

author img

By

Published : May 18, 2021, 10:53 AM IST

Updated : May 18, 2021, 11:28 AM IST

ಎರಡನೇ ಅಲೆ ಕೋವಿಡ್​ ಉಲ್ಭಣಗೊಳ್ಳುತ್ತಿದೆ. ನಿಮ್ಮನ್ನು ರಕ್ಷಣೆ ಮಾಡೋಕೆ ನಾಳೆ ನಾವೇ ಉಳಿಯುತ್ತೇವೆ ಎನ್ನುವ ಗ್ಯಾರೆಂಟಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್​​ ಸಿಂಗ್ ಹೇಳಿದರು.

anand sigh
ಸಚಿವ ಆನಂದ್​​ ಸಿಂಗ್

ಬಳ್ಳಾರಿ: ಗಣಿನಾಡು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಕಡಿವಾಣ ಬೀಳದೆ ಇರೋದರಿಂದ ಮೇ. 19 (ಬುಧವಾರ) ಬೆಳಗ್ಗೆ 10 ಗಂಟೆಯಿಂದ ಮುಂದಿನ ಐದು‌ ದಿನಗಳ ಕಾಲ ಕಂಪ್ಲೀಟ್ ಲಾಕ್​ಡೌನ್​ಗೆ ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್​​ ಸಿಂಗ್ ಹೇಳಿದ್ದಾರೆ.

ಸಚಿವ ಆನಂದ್​​ ಸಿಂಗ್

ನಗರದಲ್ಲಿ ಮಾತನಾಡಿದ ಅವರು, ಇಂದು (ಮೇ. 18) ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಲಿದ್ದಾರೆ. ಕೊರೊನಾ ಸೋಂಕು ಮಿತಿ ಮೀರುತ್ತಿದೆ. ನಿಮ್ಮನ್ನು ರಕ್ಷಣೆ ಮಾಡೋಕೆ ನಾಳೆ ನಾವೇ ಉಳಿಯುತ್ತೇವೆ ಎನ್ನುವ ಗ್ಯಾರೆಂಟಿ ಇಲ್ಲ ಎಂದ್ರು.

ಹೀಗಾಗಿ, ಉಭಯ ಜಿಲ್ಲೆಗಳ‌ ಜನತೆ ಲಾಕ್​​ಡೌನ್​ಗೆ ಸಹಕಾರ ನೀಡಬೇಕು. ರೈತರಿಗೆ ಯಾವ ರೀತಿ ರಿಯಾಯಿತಿ ಕೊಡಬೇಕು ಎಂಬುದರ ಕುರಿತು ಆದೇಶ ಹೊರಡಿಸಲಾಗುವುದು ಎಂದರು.

ಇದನ್ನೂ ಓದಿ: 3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಿದ್ಧವಾಗಬೇಕು: ಸಚಿವ ಈಶ್ವರಪ್ಪ

ಸಿಎಂ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು, ಕೊರೊನಾ ಕಂಟ್ರೋಲ್‌ಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಐದು ದಿನದೊಳಗೆ ಸೋಂಕಿಗೆ ಕಡಿವಾಣ ಬೀಳದಿದ್ದರೆ ಮತ್ತೆ ಲಾಕ್​ಡೌನ್ ವಿಸ್ತರಿಸಲು ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು.

Last Updated : May 18, 2021, 11:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.