ಹೊಸಪೇಟೆ (ಬಳ್ಳಾರಿ): ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಮಿತಾಭ್ ಕಾಂತ್ ಅವರು ತಮ್ಮ ಕುಟುಂಬ ಸಮೇತ ಇಂದು ಹಂಪಿಗೆ ಭೇಟಿ ನೀಡಿದರು.
ವಿಜಯವಿಠ್ಠಲ ದೇವಸ್ಥಾನದಲ್ಲಿನ ಕಲ್ಲಿನ ತೇರನ್ನು ಕಂಡು ಅಮಿತಾಬ್ ಕಾಂತ್ ಅವರು ಹರ್ಷ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ವಿರೂಪಾಕ್ಷೇಶ್ವರ ವಿಗ್ರಹಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ಪಂಪಾಂಬಿಕೆ ಹಾಗೂ ಭುವನೇಶ್ವರಿ ದೇವಿಯ ದರ್ಶನವನ್ನು ಪಡೆದರು.
ಸಾಸುವೆ ಕಾಳು, ಕಡಲೆಕಾಳು, ಉಗ್ರನರಸಿಂಹ, ಉದ್ದಾನ ವೀರಭದ್ರ, ಮಹಾನವಮಿ ದಿಬ್ಬ, ರಾಣಿಸ್ನಾನಗೃಹ, ಲೋಟಸ್ ಮಹಲ್, ಕಮಲಾಪುರದ ವಸ್ತು ಸಂಗ್ರಹಾಲಯ, ಆನೆ ಹಾಗೂ ಒಂಟೆ ಸಾಲು ಸಾಲು ಸ್ಮಾರಕಗಳನ್ನು ನೋಡಿದರು.