ETV Bharat / state

ನಮಗೆ ಮತ ಹಾಕಿ, ಸೌಲಭ್ಯ ನೀಡೋದು ನಮ್ಮ ಕರ್ತವ್ಯ- ಉಗ್ರಪ್ಪ... ಕಿರುಬೆರಳು ತೋರಿ ಗಮನ ಸೆಳೆದ ಡಿಕೆಶಿ - kannada news

ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಬಳ್ಳಾರಿಯಿಂದ ವಿ.ಎಸ್. ಉಗ್ರಪ್ಪ ತಮ್ಮ ಅಪಾರ ಕಾರ್ಯಕರ್ತರು ಮತ್ತು ಅಭಿಮಾನಿ ಬಳಗದೊಂದಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಮೈತ್ರಿ ಅಭ್ಯರ್ಥಿ ಉಗ್ರಪ್ಪ
author img

By

Published : Apr 2, 2019, 6:07 PM IST

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅಪಾರ ಕಾರ್ಯಕರ್ತರೊಂದಿಗೆ ಬೃಹತ್ ರೋಡ್​ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಉಗ್ರಪ್ಪ ಅವರಿಗೆ ಪವರ್​ ಮಿನಿಸ್ಟರ್​ ಸಾಥ್​ ನೀಡಿದರು. ಬಳಿಕ ಮಾತನಾಡಿದ ಉಗ್ರಪ್ಪ ದೇಶ ಸಮಗ್ರ ಅಭಿವೃದ್ದಿ ಕಾಣಬೇಕೆಂದರೆ ಸರಕಾರ ಬದಲಾಗಬೇಕು ಎಂದು ಪ್ರತಿಪಾದಿಸಿದರು.

ನಗರದ ಕನಕದುರ್ಗಮ್ಮ ದೇಗುಲದಲಕ್ಕೆ ಭೇಟಿ ನೀಡಿದ ಉಗ್ರಪ್ಪ ಮತ್ತು ಪತ್ನಿ ಮಂಜುಳಮ್ಮ, ಕನಕದುರ್ಗಮ್ಮ ದೇವಿಗೆ ವಿಶೇಷಪೂಜೆ ಸಲ್ಲಿಸಿದರು. ದೇಗುಲದ ಆವರಣದಿಂದ ತೆರೆದ ವಾಹನದಲ್ಲಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಮೈತ್ರಿ ಅಭ್ಯರ್ಥಿ ಉಗ್ರಪ್ಪ

ರೋಡ್ ಶೋ ವಾಹನವು ತಹಶೀಲ್ದಾರ್​ ಕಚೇರಿಯ ಎದುರಿಗೆ ಆಗಮಿಸುತ್ತಿದ್ದಂತೆಯೇ ಒಳಪ್ರವೇಶಿಸಲು ಕಾರ್ಯಕರ್ತರು ಮುಂದಾದರು. ಇದರಿಂದ ಕೆಲಕಾಲ ನೂಕುನುಗ್ಗಲು ಸಹ ಏರ್ಪಟ್ಟಿತ್ತು. ಇದರಿಂದ ಪೊಲೀಸರು ಕೈ ಅಭ್ಯರ್ಥಿ ಉಗ್ರಪ್ಪ ಅವರೊಂದಿಗೆ ಐವರು ಮಾತ್ರ ಕಚೇರಿ ಒಳಗೆ ಪ್ರವೇಶಿಸಲು ಅನುಮತಿ ನೀಡಿದರು.

ಕಿರುಬೆರಳು ತೋರಿಸಿದ ಸಚಿವ ಡಿಕೆಶಿ
ಸಚಿವ ಡಿ.ಕೆ. ಶಿವಕುಮಾರ ಅವರು ಕಿರುಬೆರಳು ತೋರುವ ಮೂಲಕ ವಿಶೇಷ ಗಮನ ಸೆಳೆದರು. ವಿಕ್ಟರಿ ನಮ್ಮದಲ್ಲ. ಅದೇನಿದ್ರೂ ಬಿಎಸ್​​ವೈ ಅವರದ್ದು. ಎನ್ನುತ್ತಲೇ ಕಿರುಬೆರಳು ತೋರಿಸಿ ಗಮನ ಸೆಳೆದರು.

ಉಗ್ರಪ್ಪ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಡಿಕೆಶಿ, ಬಳ್ಳಾರಿ ಜಿಲ್ಲೆಯ ಮತದಾರರ ಬಗ್ಗೆ ನನಗೆ ಅಪಾರವಾದ ನಂಬಿಕೆಯಿದೆ. ಬಡತನ, ಶ್ರೀಮಂತಿಕೆ ನಡುವೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ, ಅದರ ಸಂಪೂರ್ಣ ನಿರ್ಮೂಲನೆಗೆ ನಾವೆಲ್ಲ ಶ್ರಮಿಸಬೇಕಿದೆ ಎಂದರು.

ಗಣೇಶ್​ ಜಾಮೀನು ನಮ್ಮ ಕೈಯಲ್ಲಿಲ್ಲ: ಪವರ್​ ಮಿನಿಸ್ಟರ್​

ಬಿಜೆಪಿಗರು ಅಧಿಕಾರ ದುರುಪಯೋಗ ಮಾಡಿಕೊಳ್ಳಲಿ. ನಮಗೆ ಹಣ ಬೇಡ ಜನ ಬೇಕು ಎಂದ ಡಿ.ಕೆ. ಶಿವಕುಮಾರ್​ ಗಣೇಶ್ ಜಾಮೀನು ನಮ್ಮ ಕೈಯಲಿಲ್ಲ. ಬಳ್ಳಾರಿ ಕೂಡ ನನ್ನ ಆದ್ಯತೆ ಆಗಿದೆ. ನಾಗೇಂದ್ರ ನಮ್ಮ ಜೊತೆಯಲ್ಲೇ ಇರ್ತಾರೆ ಎಂದು ಸಚಿವ ಡಿ.ಕೆ‌.ಶಿವಕುಮಾರ ಹೇಳಿದರು.

ಬಳ್ಳಾರಿ ಜನ ಪ್ರಬುದ್ಧರು: ಉಗ್ರಪ್ಪ

ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಮಾತನಾಡಿ, ಬಳ್ಳಾರಿ ಜನ ಪ್ರಬುದ್ಧರು ವಿಚಾರವಂತರು. ಅವರು ಕೊನೆ ಕ್ಷಣದವರೆಗೂ ನನ್ನ ಜೊತೆನೇ ಇರ್ತಾರೆ. ಈ ದೇಶದ ಆಡಳಿತ ಹಾಗೂ ನಾಯಕತ್ವ ಬದಲಾಗಬೇಕು. ಇದು ಪ್ರಜಾಪ್ರಭುತ್ವದ ಹಬ್ಬ. ಮತವನ್ನು ಜವಾಬ್ದಾರಿಯುತವಾಗಿ ಚಲಾಯಿಸಿ. ಬಳ್ಳಾರಿ ಅಭಿವೃದ್ಧಿ ಆಗಬೇಕು. ಅದಕ್ಕಾಗಿ ಎಲ್ಲರೂ ಸಹಕಾರ ನೀಡಿದ್ದಾರೆ. ಉದ್ಯೋಗ ಸಮಸ್ಯೆ, ನೀರು, ವಿದ್ಯುತ್ ಸಮಸ್ಯೆ, ಮೂಲಭೂತ ಸೌಕರ್ಯ ಒದಗಿಸುವ ಗುರಿ ನಮ್ಮದು ಎಂದರು.

ಮದ್ಯದ ಅಮಲಿನಲ್ಲಿ ಕೆಳಗೆ ಬಿದ್ದ ಕಾರ್ಯಕರ್ತ
ಕನಕ ದುರ್ಗಮ್ಮ ದೇಗುಲದ ಆವರಣದಲ್ಲಿ ವಿಪರೀತ ಮದ್ಯ ಸೇವಿಸಿದ ಕಾರ್ಯಕರ್ತನೊಬ್ಬ ಕೆಳಗೆ ಬಿದ್ದು ನರಳಾಡಿದ ದೃಶ್ಯ ಕಂಡು ಬಂತು.

Intro:ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರ ಅಭೂತಪೂರ್ವ ರೋಡ್ ಷೋ..
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಅಭೂತಪೂರ್ವ ರೋಡ್
ಷೋ ನಡೆಯಿತು.
ಬಳ್ಳಾರಿ ಕನಕದುರ್ಗಮ್ಮ ದೇಗುಲದಲ್ಲಿಂದು ಕನಕದುರ್ಗಮ್ಮ ದೇವಿಗೆ ವಿಶೇಷಪೂಜೆ ಸಲ್ಲಿಸಿದರು. ಅವರ ಪತ್ನಿ ಮಂಜುಳಮ್ಮ ಅವರೊಂದಿಗೆ ಆಗಮಿಸಿ, ದೇವಿಗೆ ವಿಶೇಷಪೂಜೆ ಸಲ್ಲಿಸಿದರು.
ಕನಕದುರ್ಗಮ್ಮ ದೇಗುಲದ ಆವರಣದಿಂದ ತೆರೆದ ವಾಹನದಲ್ಲಿ ರೋಡ್ ಷೋ ನಡೆಸಿ ಕನಕದುರ್ಗಮ್ಮ ಕೆಳಸೇತುವೆ, ಡಬಲ್ ರಸ್ತೆ, ಗಡಿಗಿ ಚನ್ನಪ್ಪ ವೃತ್ತ, ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ರೋಡ್ ಷೋ ನಡೆಸಿದರು.
ನೂಕುನುಗ್ಗಲು: ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ರೋಡ್ ಷೋ ವಾಹನವು ತಹಶೀಲ್ದಾರ ಕಚೇರಿಯ ಎದುರಿಗೆ ಆಗಮಿಸುತ್ತಿದ್ದಂತೆಯೇ ಒಳಪ್ರವೇಶಿಸಲು ತಾಮುಂದು.. ನಾಮುಂದು ಎಂಬಂತೆ ನೂಕುನುಗ್ಗಲು ಕೆಲಕಾಲ ಏರ್ಪಟ್ಟಿತ್ತು.
ಬಳಿಕ, ಪೊಲೀಸರ ಮನವಿ ಮೇರೆಗೆ ಕೇವಲ ಅಭ್ಯರ್ಥಿ ಉಗ್ರಪ್ಪ ಅವರೊಂದಿಗೆ ಐವರು ಒಳಗಡೆ ಬರುವಂತೆ ಸೂಚನೆ ನೀಡಿದ್ರು. ಆದ್ರೂ ಕೂಡ ಸಚಿವರಾದ ಡಿ.ಕೆ.ಶಿವಕುಮಾರ, ಈ.ತುಕರಾಂ, ಪಿ.ಟಿ.ಪರಮೇಶ್ವರ ನಾಯ್ಕ, ಶಾಸಕರಾದ ಭೀಮನಾಯ್ಕ, ಬಿ.ಎಸ್.ಆನಂದಸಿಂಗ್, ನಾಗೇಂದ್ರ ಸೇರಿ ಇತರೆ ನಾಯಕರು ಆಗಮಿಸಿದರು.
ಕಿರುಬೆರಳು ತೋರಿದ ಸಚಿವ ಡಿಕೆಶಿ: ಸಚಿವ ಡಿ.ಕೆ.ಶಿವಕುಮಾರ ಅವರು ಕಿರುಬೆರಳು ತೋರುವ ಮೂಲಕ ವಿಶೇಷ ಗಮನ ಸೆಳೆ ದರು. ವಿಕ್ಟರಿ ನಮ್ಮದ್ದಲ್ಲ. ಅದೇನಿದ್ರೂ ಬಿಎಸ್ ವೈ ಅವರದ್ದು. ಎನ್ನುತ್ತಲೇ ಕಿರುಬೆರಳು ತೋರುತ್ತಲೇ ಮುನ್ನಡೆದರು.

Body:ಮದ್ಯದ ಅಮಲಿನಲ್ಲಿ ಕೆಳಗೆ ಬಿದ್ದ ಕಾರ್ಯಕರ್ತ: ಕನಕ ದುರ್ಗಮ್ಮ ದೇಗುಲದ ಆವರಣದಲ್ಲಿ ವಿಪರೀತ ಮದ್ಯ ಸೇವಿಸಿದ ಕಾರ್ಯಕರ್ತರೊಬ್ಬರು ಕೆಳಗೆಬಿದ್ದು ನರಳಾಡಿ
ದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯ ಮತದಾರರ ಬಗ್ಗೆ ನನಗೆ ಅಪಾರವಾದ ನಂಬಿಕೆಯಿದೆ. ಬಡತನ, ಶ್ರೀಮಂತಿಕೆಯ
ನಡುವೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ, ಅದರ ಸಂಪೂರ್ಣ ನಿರ್ಮೂಲನೆಗೆ ನಾವೆಲ್ಲ ಶ್ರಮಿಸಬೇಕಿದೆ ಎಂದರು.
ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಪರ ಅಲೆ ಇದೆ. ಈ ಮೆರವಣಿಗೆಯಲ್ಲಿ ಸಿಕ್ಕ ಜನಬೆಂಬಲವೇ ಇದಕೆ ಸಾಕ್ಷಿ.
ಬಳ್ಳಾರಿ ಜನ ಪ್ರಬುದ್ಧರು ವಿಚಾರವಂತರು. ಅವರು ಕೊನೆ ಕ್ಷಣದವರೆಗೂ ನನ್ನ ಜೊತೆನೇ ಇರ್ತಾರೆ. ಮತ್ತೊಮ್ಮೆ ಗೆದ್ದು ಬರ್ತೇನೆ. ಕಳೆದ ಬಾರಿಗಿಂತ ಹೆಚ್ವಿನ ಬಹುಮತದಿಂದ ಮತ್ತೆ ಗೆಲ್ತೇನಿ. ನಿಮ್ಮ ಮನೆ ಮಗನಾಗಿ ಇರ್ತೀನಿ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಮಾತನಾಡಿ, ಈಗ ಮತ್ತೊಂದು ಎಲೆಕ್ಷನ್ ಎದುರಾಗಿದೆ. ಮತ್ತೆ ನಿಮ್ಮ ಮುಂದೆ ನಿಂತಿದ್ದೇನೆ.
ಈ ದೇಶದ ಆಡಳಿತ ಹಾಗೂ ನಾಯಕತ್ವ ಬದಲಾಗಬೇಕು.
ಇದು ಪ್ರಜಾಪ್ರಭುತ್ವದ ಹಬ್ಬ. ಮತವನ್ನು ಜವಾಬ್ದಾರಿಯುತ ವಾಗಿ ಕೊಡಬೇಕು.
ಬಳ್ಳಾರಿ ಅಭಿವೃದ್ಧಿ ಆಗಬೇಕು. ಅದಕ್ಕಾಗಿ ಎಲ್ಲರೂ ಸಹಕಾರ ನೀಡಿದ್ದಾರೆ. ಯುವಜನರ ಉದ್ಯೋಗ ಸಮಸ್ಯೆ ಒಳ್ಳೆ ನೀರು ವಿದ್ಯುತ್ ಸಮಸ್ಯೆ ಮೂಲಭೂತ ಸೌಕರ್ಯ ಒದಗಿಸುವ ಗುರಿ ನಮ್ಮದು ಎಂದರು.
ನಾವು ಶಾಂತಿ ಮೂಲಕ ಒಳ್ಳೆ ಆಡಳಿತ ಕೊಡ್ತೀವಿ. ಕಳೆದ ಬೈಎಲೆಕ್ಷನ್ ನಲ್ಲಿ ಮುಂದಿನದೂ ಸೇರಿ ವೋಟ್ ಕೇಳಿದ್ದೇವೆ. ನಮ್ಮ ಪಕ್ಷ ಹಾಗೂ ಸಂಘ ಸಂಸ್ಥೆಗಳು. ನಮಗೆ ಹಣ ಬೇಕಾಗಿಲ್ಲ. ಕೇಂದ್ರ ಸರ್ಕಾರ ಇದೆ ಅಂತ ಅವರು ಬೇಕಾದ್ರೆ ಅದನ್ನ ದುರುಪಯೋಗ ಮಾಡಿಕೊಳ್ಳಲಿ. ನಮಗೆ ಹಣ ಬೇಡ ಜನ ಬೇಕು. ಗಣೇಶ್ ಜಾಮೀನು ನಮ್ಮ ಕೈಯಲಿಲ್ಲ. ಬಳ್ಳಾರಿ ಕೂಡ ನನ್ನ ಆದ್ಯತೆ ಆಗಿದೆ. ನಾಗೇಂದ್ರ ನಮ್ಮ ಜೊತೆಯಲ್ಲೇ ಇರ್ತಾರೆ ಎಂದು ಸಚಿವ ಡಿ.ಕೆ‌.ಶಿವಕುಮಾರ ಹೇಳಿದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಲಾಗಿದೆ.

R_KN_BEL_04_020419_CONGRESS_CANDIDATE_NOMINATION_FILLED
ETV Bharat Logo

Copyright © 2025 Ushodaya Enterprises Pvt. Ltd., All Rights Reserved.