ETV Bharat / state

ಸರ್ಕಾರ ನೀಡಿದ ಹಣ ಫಲಾನುಭವಿಗಳ ಸಾಲದ ಮೊತ್ತಕ್ಕೆ ಜಮಾ ಆರೋಪ: ಬ್ಯಾಂಕ್​ಗೆ ತಹಶೀಲ್ದಾರ್ ಭೇಟಿ

ಮಹಾಮಾರಿ ಕೊರೊನಾ ಹಿನ್ನೆಲೆ ಕೇಂದ್ರ ಸರ್ಕಾರ ಜನ್​ಧನ್ ಖಾತೆಗೆ ಹಣ ಜಮಾ ಮಾಡಿದ್ದು, ಫಲಾನುಭವಿಗಳ ಸಾಲದ ಮೊತ್ತಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆ ಮೋಕಾ ಕಾರ್ಪೋರೇಷನ್ ಬ್ಯಾಂಕ್​​ಗೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Allegation of depositing government money into beneficiary loan amount
ಸರ್ಕಾರ ನೀಡಿದ ಹಣ ಫಲಾನುಭವಿಗಳ ಸಾಲದ ಮೊತ್ತಕ್ಕೆ ಜಮಾ ಮಾಡುತ್ತಿದ್ದಾರೆಂಬ ಆರೋಪ: ತಹಶೀಲ್ದಾರ್ ಭೇಟಿ
author img

By

Published : Apr 18, 2020, 1:50 PM IST

ಬಳ್ಳಾರಿ: ಕೋವಿಡ್-19 ಹಿನ್ನೆಲೆ ಜನ್​​ಧನ್ ಖಾತೆಗೆ ಕೇಂದ್ರ ಸರ್ಕಾರ ಹಣ ಜಮಾ ಮಾಡಿದ್ದು, ಹಣವನ್ನು ಫಲಾನುಭವಿಗಳ ಸಾಲದ ಮೊತ್ತಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಮೋಕಾ ಕಾರ್ಪೋರೇಷನ್ ಬ್ಯಾಂಕ್​​ಗೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊರೊನಾ ಹಿನ್ನೆಲೆ ಜನ್​ಧನ್ ಖಾತೆಗೆ ಕೇಂದ್ರ ಸರ್ಕಾರ ಹಣ ಜಮಾ ಮಾಡಿದ್ದು, ಅದು ಯಾವುದೇ ಕಾರಣಕ್ಕೂ ವಾಪಸ್ ಹೋಗುವುದಿಲ್ಲ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಹಣ ಪಡೆದುಕೊಳ್ಳಬೇಕು ಎಂದು ಬಳ್ಳಾರಿ ತಹಶೀಲ್ದಾರ್ ನಾಗರಾಜ ಸೂಚಿಸಿದರು.

ಸ್ಥಳಕ್ಕಾಗಮಿಸಿದ ತಹಶೀಲ್ದಾರ್​ ತಾಲೂಕಿನ ಮೋಕಾ ಗ್ರಾಮದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್​ನಲ್ಲಿ ಜನರು ಹಣ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವುದನ್ನು ಪರಿಶೀಲಿಸಿದರು. ಅಂತರ ಪಾಲಿಸದವರಿಗೆ ಕೊರೊನಾ ಕುರಿತು ತಿಳಿಹೇಳಿ, ಸಾಮಾಜಿಕ ಅಂತರ ಪಾಲಿಸುವಂತೆ ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.