ETV Bharat / state

ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇವಲಾಲ್ ಹೆಸರಿಡಲು ಆಗ್ರಹ... - ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಚಂದ್ರನಾಯ್ಕ

ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಹೆಸರನ್ನ ನಾಮಕರಣ ಮಾಡಬೇಕೆಂದು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.

akila-karnataka-banjara-seva-sangha-protest-in-front-of-dc-office-in-ballari
ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇವಲಾಲ್ ಹೆಸರಿಡಲು ಆಗ್ರಹ
author img

By

Published : Nov 30, 2019, 3:28 AM IST

ಬಳ್ಳಾರಿ: ಕಲಬುರಗಿಯ ವಿಮಾನ ನಿಲ್ದಾಣದ ಬಳಿಯಿದ್ದ ಸೇವಾಲಾಲ್ - ಮರಿಯಮ್ಮದೇವಿ ಮಂದಿರ ಧ್ವಂಸಗೊಳಿಸಿದವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಹಾಗೂ ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಹೆಸರನ್ನ ನಾಮಕರಣ ಮಾಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಬಂಜಾರ ಸಮುದಾಯದವರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

ಇದಕ್ಕೂ ಮುನ್ನ ಇಲ್ಲಿನ ಬೆಳಗಲ್ ಕ್ರಾಸ್​ನಿಂದ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಬಂದು, ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ರು.

ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇವಲಾಲ್ ಹೆಸರಿಡಲು ಆಗ್ರಹ.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಂಜಾರ ಸಮುದಾಯದ ಬಡಜನರು 750 ಎಕರೆ ಜಮೀನು ನೀಡಿದ್ದು, ಮನೆ ಮತ್ತು ಕೃಷಿ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಭೂಮಿಯನ್ನು ಅತಿ ಕಡಿಮೆ ದರದಲ್ಲಿ ಖರೀದಿ ಮಾಡಿದ್ದು, ಆಗಿನ ಜಿಲ್ಲಾಧಿಕಾರಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಹೆಸರು ನಾಮಕರಣ ಮಾಡುವುದಾಗಿ ಹೇಳಿ, ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ನಿಲ್ದಾಣದಲ್ಲಿದ್ದ ಮಂದಿರವನ್ನು ಧ್ವಂಸಗೊಳಿಸಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಚಂದ್ರನಾಯ್ಕ ಆರೋಪಿಸಿದ್ದಾರೆ.

ಮಂದಿರ ಧ್ವಂಸಗೊಳಿಸಿದ ಅಧಿಕಾರಿಗಳು ಮತ್ತು ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ಶಿಕ್ಷಿಸಬೇಕು. ಜೊತೆಗೆ ಅದೇ ಸ್ಥಳದಲ್ಲಿ ಸೇವಾಲಾಲ್-ಮರಿಯಮ್ಮ ಮಂದಿರ ನಿರ್ಮಾಣ ಮಾಡಿ, ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು. ರಾಜ್ಯ ಸರ್ಕಾರ ಈ ಕುರಿತು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

Intro:ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇವಲಾಲ್ ಹೆಸರಿಡಲು ಆಗ್ರಹ
ಬಳ್ಳಾರಿ: ಕಲಬುರಗಿಯ ವಿಮಾನ ನಿಲ್ದಾಣದ ಬಳಿಯಿದ್ದ
ಸೇವಾಲಾಲ್ - ಮರಿಯಮ್ಮದೇವಿ ಮಂದಿರ ಧ್ವಂಸಗೊಳಿಸಿದವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಹಾಗೂ ವಿಮನ ನಿಲ್ದಾಣಕ್ಕೆ ಸೇವಾಲಾಲ್ ಹೆಸರನ್ನ ನಾಮಕರಣ ಮಾಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಬಂಜಾರ ಸಮುದಾಯದವರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಧರಣಿ ನಡೆಸಿದರು.
ಇದಕ್ಕೂ ಮುನ್ನ ಇಲ್ಲಿನ ಬೆಳಗಲ್ ಕ್ರಾಸ್ ನಿಂದ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಬಂದು, ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ರು.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಂಜಾರ ಸಮುದಾಯದ ಬಡಜನರು 750 ಎಕರೆ ಜಮೀನು ನೀಡಿದ್ದು, ಮನೆ ಮತ್ತು ಕೃಷಿ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. Body:ಭೂಮಿಯನ್ನು ಅತಿ ಕಡಿಮೆ ದರದಲ್ಲಿ ಖರೀದಿ ಮಾಡಿದ್ದು, ಆಗಿನ ಜಿಲ್ಲಾಧಿಕಾರಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಹೆಸರು ನಾಮಕರಣ ಮಾಡುವುದಾಗಿ ಹೇಳಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳು ನಿಲ್ದಾಣದಲ್ಲಿದ್ದ ಮಂದಿರವನ್ನು ಧ್ವಂಸಗೊಳಿಸಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಚಂದ್ರಾನಾಯ್ಕ ಆರೋಪಿಸಿದ್ರು.
ಮಂದಿರ ಧ್ವಂಸಗೊಳಿಸಿದ ಅಧಿಕಾರಿಗಳು ಮತ್ತು ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ಶಿಕ್ಷಿಸಬೇಕು. ಜೊತೆಗೆ ಅದೇ ಸ್ಥಳದಲ್ಲಿ ಸೇವಾಲಾಲ್-ಮರಿಯಮ್ಮ ಮಂದಿರ ನಿರ್ಮಾಣ ಮಾಡಿ,
ಸಂತ ಸೇವಾಲಾಲ್ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು. ರಾಜ್ಯ ಸರ್ಕಾರ ಈ ಕುರಿತು ಕೂಡಲೇ ಸೂಕ್ತಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ರು.
ಸಮುದಾಯದ ಮುಖಂಡರಾದ ಕೃಷ್ಣನಾಯ್ಕ, ಶಂಕ್ರನಾಯ್ಕ, ದೇವಾನಾಯ್ಕ, ಮೇಗುನಾಯ್ಕ, ಶೆಟ್ಟಿನಾಯ್ಕ, ಕೃಷ್ಣ, ಸ್ವಾಮಿನಾಯ್ಕ, ಪಾಟೀಲ್ ರಾಮಾನಾಯ್ಕ, ಶಾಂತಿಬಾಯಿ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_SEVA_LALA_PROTEST_VSL_7203310

KN_BLY_4g_SEVA_LALA_PROTEST_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.