ETV Bharat / state

ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆ ನೀಡುವಂತೆ ಎಐಯುಟಿಯುಸಿ ಆಗ್ರಹ

author img

By

Published : Oct 3, 2020, 8:23 PM IST

ಅಸಂಘಟಿತ ವಲಯದ ಕಾರ್ಮಿಕರ ಜೀವನ ಹಾಗೂ ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕೆಂದು ಒತ್ತಾಯಿಸಿ ಎಐಯುಟಿಯುಸಿ ಸದಸ್ಯರು ಪ್ರತಿಭಟನೆ ನಡೆಸಿದರು.

Protest
Protest

ಬಳ್ಳಾರಿ : ಅಸಂಘಟಿತ ವಲಯದ ಕಾರ್ಮಿಕರ ಜೀವನ ಹಾಗೂ ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕೆಂದು ಎಐಯುಟಿಯುಸಿ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.‌ ದೇಶದ ಶೇ.90 ರಷ್ಟಿರುವ ಈ ಅಸಂಘಟಿತ ವಲಯದ ಕಾರ್ಮಿಕರ ಸ್ಥಿತಿಗತಿಗಳು ಅತ್ಯಂತ ಹೀನಾಯವಾಗಿದೆ. ಅತ್ಯಂತ ಕಡಿಮೆ ವೇತನದಲ್ಲಿ ದುಡಿಯುವ, ಅನಿಶ್ಚಿತ ಕೆಲಸದಿಂದ ಅಭದ್ರತೆ ಎದುರಿಸುವ, ಸೇವಾ ಅಸುರಕ್ಷತೆಗಳನ್ನು ಎದುರಿಸುವ ಕೆಲಸದ ಸ್ಥಳಗಳಲ್ಲಿ ಉದ್ಯೋಗದಾತರಿಂದ ದೌರ್ಜನ್ಯ, ಕಿರುಕುಳಗಳನ್ನು ಎದುರಿಸುವ ಸಾಮಾಜಿಕ ಭದ್ರತೆಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಜೀವನ ಹಾಗೂ ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕು ಎಂದಯ ಎಐಯುಟಿಯುಸಿ ಆಗ್ರಹಿಸಿದೆ.

ಗ್ರಾಮೀಣ ಕೃಷಿ ಹಾಗೂ ಇತರ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಮನೆಗೆಲಸ ಕಾರ್ಮಿಕರು, ಅಂಗಡಿ - ಮುಂಗಟ್ಟುಗಳಲ್ಲಿ ಕೆಲಸ ಮಾಡುವವರು, ಆಟೋ ಇನ್ನಿತರ ಲಘುವಾಹನ ಚಾಲಕರು ಇತ್ಯಾದಿ ನೂರಾರು ರೀತಿಯ ಶ್ರಮಗಳನ್ನು ಮಾಡುತ್ತಿರುವ ಈ ಅಪಾರ ಸಂಖ್ಯೆಯ ದುಡಿಯುವ ಜನರು ದೇಶದ ಜಿಡಿಪಿಗೆ ಅರ್ಧದಷ್ಟು ಪಾಲು ಕೊಡುವವರಾಗಿದ್ದಾರೆ. ಇವರ ಜೀವನ ಹಾಗೂ ಸಾಮಾಜಿಕ ಭದ್ರತೆಗಾಗಿ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಮಿಕ ಸಂಘಟನೆಗಳು ಎತ್ತುತ್ತಿರುವ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಡೆಗಣಿಸುತ್ತಾ ಬಂದಿವೆ.

ಆದ್ದರಿಂದ ಕೇಂದ್ರೀಯ ಎಐಯುಟಿಯುಸಿನ ಅಖಿಲ ಭಾರತ ಸಮಿತಿಯು ಪ್ರತಿಭಟನಾ ಸಪ್ತಾಹಗೆ ಕರೆ ನೀಡಿದೆ. ಗ್ರಾಮೀಣ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ, ಉದ್ಯೋಗಖಾತರಿ ಕಾರ್ಮಿಕರಿಗೆ ಕನಿಷ್ಠ 600 ರೂ ಕೂಲಿ, ಮನೆಗೆಲಸ, ಅಂಗಡಿ ಮುಂಗಟ್ಟುಗಳ ಕಾರ್ಮಿಕರಿಗೆ ಕನಿಷ್ಠ ವೇತನ, ಗುತ್ತಿಗೆ ಕಾರ್ಮಿಕರಿಗೆ ಜೀವನಯೋಗ್ಯ ವೇತನ, ಆಟೋ ,ಲಘು ವಾಹನ ಚಾಲಕರಿಗೆ ಸಾಮಾಜಿಕ ಭದ್ರತೆ, ಎಲ್ಲ ಕಾರ್ಮಿಕರಿಗೆ ಉಚಿತ ಆರೋಗ್ಯ ವಿಮೆ, ವಸತಿ ಸೌಕರ್ಯಗಳನ್ನು ಖಾತ್ರಿಪಡಿಸುವಂತೆ ಎಐಯುಟಿಯುಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದೆ.

ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರುಗಳಾದ ಆರ್.ಸೋಮಶೇಖರ್ ಗೌಡ, ಎ.ದೇವದಾಸ್, ಪಿ.ಶರ್ಮಾಸ್ ಮತ್ತು ಕಟ್ಟಡ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.