ETV Bharat / state

'ದೇವರ ಆಶೀರ್ವಾದದಿಂದ ಮುಂದಿನ ತಿಂಗಳು ಅಧಿಕೃತವಾಗಿ ನೂತನ ಜಿಲ್ಲೆ ಘೋಷಣೆಯಾಗಬೇಕಿದೆ' - Anand singh recations

ಹೊಸಪೇಟೆಯಲ್ಲಿ ಸಚಿವ ಆನಂ‌ದ್​ ಸಿಂಗ್​ ನೂತನ ವಿಜಯನಗರ ಜಿಲ್ಲೆಯ ರಚನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದು ಹಲವು ವರ್ಷಗಳ ನಂತರ ಇಲ್ಲಿಯ ಹೋರಾಟಗಾರರಿಗೆ ಸಿಕ್ಕ ಜಯ ಎಂದಿದ್ದಾರೆ.

A new district will soon be formed; Anand singh
ಸಚಿವ ಆನಂ‌ದ ಸಿಂಗ್
author img

By

Published : Dec 17, 2020, 8:26 PM IST

Updated : Dec 17, 2020, 8:50 PM IST

ಹೊಸಪೇಟೆ: ಹಲವು ವರ್ಷಗಳ ನಂತರ ವಿಜಯನಗರ ಜಿಲ್ಲೆಯಾಗುತ್ತಿದೆ. ಜಿಲ್ಲಾ ಹೋರಾಟಗಾರರ ಕನಸು ನನಸಾಗಿದೆ. ಜಿಲ್ಲೆ ರಚನೆಯಲ್ಲಿ ನನ್ನದು ಅಳಿಲು ಸೇವೆ ಎಂದು ಸಚಿವ ಆನಂ‌ದ್​ ಸಿಂಗ್ ಹೇಳಿದರು.

ಇದನ್ನೂ ಓದಿ : ಬಳ್ಳಾರಿ ಜಿಲ್ಲೆ ವಿಭಜನೆಗೆ ಅಪಸ್ವರ: ಸಿಎಂ ಭೇಟಿಯಾದ ಸಚಿವ ಆನಂದ್ ಸಿಂಗ್

ನಗರದ ಜೋಳದರಾಶಿ ಗುಡ್ಡದಲ್ಲಿ 2019-20 ಸಾಲಿನಲ್ಲಿ ಜಿಲ್ಲಾ ಖನಿಜ‌ ನಿಧಿ ಯೋಜನೆಯಡಿಯಲ್ಲಿ ಮಂಜೂರಾದ 1 ಕೋಟಿ ರೂ. ವೆಚ್ಚದ ಮೂಲಭೂತ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಚಿವ ಆನಂ‌ದ ಸಿಂಗ್

ವಿಜಯನಗರ ರಚನೆಗೆ ಪರ-ವಿರೋಧಗಳು ಇವೆ. ಅದಕ್ಕಾಗಿ ಒಂದು ತಿಂಗಳು‌‌ ಕಾಲ ಅವಕಾಶ ನೀಡಲಾಗಿದೆ. ಬಳಿಕ ಜಿಲ್ಲೆ ರಚನೆಯಾಗಲಿದೆ. ಪಂಪಾ ವಿರೂಪಾಕ್ಷೇಶ್ವರ ಹಾಗೂ ಭುವನೇಶ್ವರಿ ದೇವಿಯ ಆಶೀರ್ವಾದದಿಂದ ಸಮಸ್ಯೆ ಇಲ್ಲದ ಹಾಗೆ ಜನವರಿ ತಿಂಗಳಿನಲ್ಲಿ ಅಧಿಕೃತವಾಗಿ ಜಿಲ್ಲೆ ಘೋಷಣೆಯಾಗುವ ವಿಶ್ವಾಸವಿದೆ ಎಂದರು.

Last Updated : Dec 17, 2020, 8:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.