ETV Bharat / state

ವಿಮ್ಸ್​​ನಲ್ಲಿ ವ್ಹೀಲ್ ಚೇರ್ ನೀಡದ್ದಕ್ಕೆ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ- ವಿಡಿಯೋ - ಮಗಳನ್ನು ಹೊತ್ತು ಸಾಗಿದ ತಂದೆ ವಿಡಿಯೋ ವೈರಲ್​

ವಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಿಂದ ಮತ್ತೊಂದು ಘಟಕಕ್ಕೆ ರೋಗಿಯನ್ನು ಸಾಗಿಸಲು ವ್ಹೀಲ್ ಚೇರ್ ನೀಡದ ಕಾರಣ ರೋಗಿಯ ತಂದೆ ತನ್ನ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ವಿಡಿಯೋ ತುಣುಕೊಂದು ಸಾಮಾಜಿಕ‌ ಜಾಲತಾಣಗಳಲ್ಲಿ‌ ಇದೀಗ ಹರಿದಾಡುತ್ತಿದೆ.

A father carrying a daughter video is viral
ಮಗಳನ್ನೇ ಹೆಗಲ ಮೇಲೆ ಹೊತ್ತೊಯ್ದ ತಂದೆ
author img

By

Published : Jan 22, 2020, 4:58 PM IST

ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯ ತುರ್ತು ನಿಗಾ ಘಟಕದಿಂದ ಮತ್ತೊಂದು ಘಟಕಕ್ಕೆ ರೋಗಿಯನ್ನು ಸಾಗಿಸಲು ವ್ಹೀಲ್ ಚೇರ್ ನೀಡದ ಕಾರಣ ರೋಗಿಯ ತಂದೆ ತನ್ನ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಹುಷಾರಿಲ್ಲದ ಮಗಳನ್ನು ಹೊತ್ತು ಸಾಗಿದ ತಂದೆ ವಿಡಿಯೋ ವೈರಲ್​

ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಮಾಬಾಷಾ ಎಂಬುವರು ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗಿದ್ದ ತನ್ನ ಮಗಳು ಶ್ರೀಂಥಾಜ್ ಅವರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಆ್ಯಂಬುಲೆನ್ಸ್ ವಾಹನದಲ್ಲಿ‌ ಇಂದು ವಿಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಆ ವಾಹನವು ತುರ್ತು ನಿಗಾಘಟಕದ ಮುಂದೆ ಇಳಿಸಿ ಮುಂದೆ ಹೋಗಿದೆ. ತಮ್ಮ ಮಗಳ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆ ನೀಡುವ ಘಟಕ ಇದಲ್ಲ.‌ ನೀವು ಬೇರೊಂದು ಘಟಕಕ್ಕೆ ತೆರಳಿ ಎಂದು ಅಲ್ಲಿನ ಸಿಬ್ಬಂದಿ ಸೂಚಿಸಿದ್ದರು.‌ ಮಗಳಿಗೆ ಏನಾದ್ರೂ ಅವಘಡ ಸಂಭವಿಸುತ್ತೆ ಎಂಬ ಭಯದಿಂದ ಆಕೆಯ ತಂದೆಯು ವ್ಹೀಲ್ ಚೇರ್ ನೀಡುವಂತೆ ಕೋರಿದ್ದ. ‌ಇದು ನಮ್ಮ ಘಟಕದ್ದು. ನೀವು ಹೋಗುವ ಘಟಕಕ್ಕೆ ಮಾಹಿತಿ‌ ತಿಳಿಸಿ ವ್ಹೀಲ್ ಚೇರ್ ತರುವಂತೆ ತಿಳಿಸಿ ಬಾ ಎಂದು ಅಲ್ಲಿನ ಸಿಬ್ಬಂದಿ ರೋಗಿಯ ತಂದೆಗೆ ತಾಕೀತು‌ ಮಾಡಿದ್ದರು ಎನ್ನಲಾಗ್ತಿದೆ.

ಅದಕ್ಕೆ ಗಾಬರಿಗೊಂಡ ಆ ವ್ಯಕ್ತಿ ಆ ವಾರ್ಡು ಇರುವಲ್ಲಿಗೆ ತಾನೇ ಹೆಗಲ‌ ಮೇಲೆ ಅಸ್ವಸ್ಥ ಮಗಳನ್ನು ಹೊತ್ತುಕೊಂಡು ಹೋಗಿದ್ದಾನೆ. ಈ ವಿಡಿಯೋ ತುಣುಕೊಂದು ಸಾಮಾಜಿಕ‌ ಜಾಲತಾಣಗಳಲ್ಲಿ‌ ಇದೀಗ ಹರಿದಾಡುತ್ತಿದೆ.

Intro:(EXCULISVE NEWS)

ವಿಮ್ಸ್ ನಲ್ಲಿ ವ್ಹೀಲ್ ಚೇರ್ ನೀಡದ ಕಾರಣ ಮಗಳನ್ನೇ ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿಯ ವಿಡಿಯೊ ವೈರಲ್!
ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯ ತುರ್ತು ನಿಗಾಘಟಕದಿಂದ ಮತ್ತೊಂದು ಘಟಕಕ್ಕೆ ರೋಗಿಯನ್ನು ಸಾಗಿಸಲು ವ್ಹೀಲ್ ಚೇರ್ ನೀಡದ ಕಾರಣ ರೋಗಿಯ ತಂದೆ ಮಗಳನ್ನೇ ಹೆಗಲ ಮೇಲೆ ಹೊತ್ತೊಯ್ದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಮಾಬಾಷಾ ಎಂಬುವರು ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗಿದ್ದ ತನ್ನ ಮಗಳಾದ ಶ್ರೀಂಥಾಜ್ ಅವರಿಗೆ ಚಿಕಿತ್ಸೆ
ಕೊಡಿಸುವ ಸಲುವಾಗಿ ಆ್ಯಂಬುಲೆನ್ಸ್ ವಾಹನದಲ್ಲಿ‌ ಈ ದಿನ
ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು‌ ಬಂದಿದ್ದಾರೆ. ಆ ವಾಹನವು ತುರ್ತು ನಿಗಾಘಟಕಕ್ಕೆ ಇಳಿಸಿ ಮುಂದೆ ಹೋಗಿದೆ. ತಮ್ಮ ಮಗಳ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆ ನೀಡುವ ಘಟಕ ಇದಲ್ಲ.‌ ನೀನು ಬೇರೊಂದು ಘಟಕಕ್ಕೆ ತೆರಳುವಂತೆ ಸೂಚಿಸಿದ್ದಾರೆ.‌ ಮಗಳಿಗೆ ಏನಾದ್ರೂ ಅವಘಡ ಸಂಭವಿಸುತ್ತೆ ಎಂಬ ಭಯಬ್ರಾಂತನಾಗಿದ್ದ ತಂದೆಯು ವ್ಹೀಲ್ ಚೇರ್ ನೀಡುವಂತೆ ಕೋರಿದ್ದಾರೆ. ‌ಇದು ನಮ್ಮ ಘಟಕದ್ದು. ನೀನು‌ ಹೋಗುವ ಘಟಕಕ್ಕೆ ಮಾಹಿತಿ‌ ತಿಳಿಸಿ ವ್ಹೀಲ್ ಚೇರ್ ತರುವಂತೆ ತಿಳಿಸಿ ಬಾ ಎಂದು ಸಿಬ್ಬಂದಿ ಅಲ್ಲಿದ್ದ ರೋಗಿಯ ತಂದೆಗೆ ತಾಕೀತು‌ ಮಾಡಿದ್ದಾರೆ.
Body:ಅದಕ್ಕೆ ಗಾಬರಿಗೊಂಡ ಆತನು ಆ ವಾರ್ಡು ಎಲ್ಲಿ ಅಯಿತೆ ಏನೋ. ನಾನೇ ಹೆಗಲ‌ ಮೇಲೆ ಹೊತ್ತು ಕೊಂಡು ಹೋಗೋದಾಗಿ ತಿಳಿಸಿ, ಮಗಳನ್ನ‌ ತನ್ನ‌ ಹೆಗಲಮೇಲೆ ಹೊತ್ತುಕೊಂಡು‌ ವಿಮ್ಸ್ ಆಸ್ಪತ್ರೆಯ ಸಾರ್ವಜನಿಕ ಸ್ಥಳದಲ್ಲೇ ಹೊತ್ತೊಯ್ದ ದೃಶ್ಯವಂತೂ‌ ನೋಡುಗರ ಮಮ್ಮಲ ಮರಗಿತು.
ಈ‌ ಕುರಿತಾದ ವಿಡಿಯೊ ತುಣುಕೊಂದು ಸಾಮಾಜಿಕ‌ ಜಾಲತಾಣ ಗಳಲ್ಲಿ‌ ಹರಿದಾಡುತ್ತಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_VIMS_HSPTL_VIDEO_WIRAL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.