ETV Bharat / state

ಪಶು ಸಂಗೋಪನಾ ಇಲಾಖೆ ಡಿ ದರ್ಜೆ ನೌಕರನಿಂದ ಹಣಕ್ಕೆ ಔಷಧಿ ಮಾರಾಟ ಆರೋಪ

author img

By

Published : Jun 18, 2020, 3:59 PM IST

ಬಳ್ಳಾರಿಯ ಪಶು ಆಸ್ಪತ್ರೆಯೊಂದರಲ್ಲಿ ಪಿಪಿಆರ್ ಔಷಧಿಯನ್ನು ಉಚಿತವಾಗಿ ನೀಡದೆ ಮನಸೋ ಇಚ್ಛೆ ಹಣಕ್ಕಾಗಿ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

cfsdd
ಪಶು ಸಂಗೋಪನೆ ಇಲಾಖೆ ಡಿ ದರ್ಜೆ ನೌಕರನಿಂದ ಔಷಧಿ ಅಕ್ರಮ ಮಾರಾಟ

ಬಳ್ಳಾರಿ: ಪಶು ಸಂಗೋಪನಾ ಇಲಾಖೆ ಆವರಣದಲ್ಲಿರುವ ಪಶು ಆಸ್ಪತ್ರೆಯಲ್ಲಿ ಪಿಪಿಆರ್ ಔಷಧಿಯನ್ನ ಉಚಿತವಾಗಿ ನೀಡಬೇಕಿತ್ತು. ಆದರೆ ಡಿ ದರ್ಜೆ ನೌಕರನೊಬ್ಬ ಮನಸೋ ಇಚ್ಛೆ ಹಣಕ್ಕೆ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ.

ಪಶು ಸಂಗೋಪನೆ ಇಲಾಖೆ ಡಿ ದರ್ಜೆ ನೌಕರನಿಂದ ಔಷಧಿ ಅಕ್ರಮ ಮಾರಾಟ ಆರೋಪ

ವ್ಯಾಕ್ಸಿನ್​ಅನ್ನು ತನ್ನ ಗಾಡಿಯ ಡಿಕ್ಕಿಯಲ್ಲಿಟ್ಟುಕೊಂಡು ಕೊಂಡೊಯ್ಯುತ್ತಿದ್ದ. ಆಗ ಸಿರುಗುಪ್ಪ ತಾಲೂಕಿನ ತೆಕ್ಕಲ ಕೋಟೆ‌ಯ ಇಬ್ಬರು ಕುರಿಗಾಹಿಗಳು ಆತನ ಬಳಿ ವ್ಯಾಕ್ಸಿನ್​ ಬೇಕೆಂದು ಕೇಳಿದ್ದಾರೆ. ಆಗ ನೌಕರ 200 ರೂಪಾಯಿಯಂತೆ ಮಾರಾಟ ಮಾಡುತ್ತೇನೆ ಎಂದಾಗ ಕುರಿಗಾಹಿಗಳು 100 ರೂಪಾಯಿಗೆ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪದ ಡಿ ದರ್ಜೆ ನೌಕರ ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದೆ.

ಮಳೆಗಾಲದಲ್ಲಿ ಕುರಿಗಳಿಗೆ ಪಿಪಿಆರ್ ವ್ಯಾಕ್ಸಿನ್ ಹಾಕಲೇಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪಶು ಆಸ್ಪತ್ರೆಯಲ್ಲಿ ವ್ಯಾಕ್ಸಿನ್​ ಉಚಿತವಾಗಿ ಸಿಗುತ್ತದೆ ಎಂದು ಬರುವ ಕುರಿಗಾಹಿಗಳಿಂದ ಇಲ್ಲಿನ ನೌಕರರು ಹಣಕ್ಕೆ ಬೇಡಿಕೆ ಇಡುತ್ತಿರುವುದು ವಿಪರ್ಯಸವೇ ಸರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.