ETV Bharat / state

ಬಳ್ಳಾರಿ: ಜಲಶುದ್ಧೀಕರಣ ಘಟಕದಲ್ಲಿ ಅಡಗಿದ್ದ ಮೊಸಳೆ ಸೆರೆ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಜಲಶುದ್ಧೀಕರಣ ಘಟಕದಲ್ಲಿದ್ದ ಮೊಸಳೆಯೊಂದನ್ನು ವೇಷಗಾರರ ಮಲ್ಲಯ್ಯ ನಿನ್ನೆ ಸೆರೆಹಿಡಿದು ತುಂಗಭದ್ರ ನದಿಗೆ ಬಿಟ್ಟು ಬಂದಿದ್ದಾರೆ.

crocodile
crocodile
author img

By

Published : Oct 21, 2021, 11:03 AM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ನಗರದ ಆದೋನಿ ರಸ್ತೆಯ ಜಲಶುದ್ಧೀಕರಣ ಘಟಕದಲ್ಲಿ ಮೊಸಳೆಯೊಂದನ್ನು ಸೆರೆ ಹಿಡಿಯಲಾಗಿದೆ.

ಕಳೆದ ತಿಂಗಳು ಬಸ್ ನಿಲ್ದಾಣದ ಹಿಂಭಾಗದ ಮೋರಿಯೊಂದರಲ್ಲಿ ಮೊಸಳೆ ಕಂಡು ಬಂದಿತ್ತು. ನಗರದಲ್ಲಿ ಕಂಡುಬಂದಿದ್ದ ಮೊಸಳೆ ಇದೀಗ ತುಂಗಭದ್ರ ನದಿ ಸೇರಿದ್ದು ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ಬಳ್ಳಾರಿಯಲ್ಲಿ ಮೊಸಳೆ ಸೆರೆ ಹಿಡಿದ ವೇಷಗಾರರ ಮಲ್ಲಯ್ಯ

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಬರಿಗೈಯಿಂದಲೇ ಮೊಸಳೆ ಹಿಡಿಯುವ ವೇಷಗಾರರ ಮಲ್ಲಯ್ಯ ಈ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಲ್ಲಯ್ಯ ಅವರು ಈಗಾಗಲೇ ಅನೇಕ ಮೊಸಳೆಗಳನ್ನು ಸೆರೆಹಿಡಿದಿದ್ದು, ಮೊಸಳೆಗಳು ಕಂಡು ಬಂದಲ್ಲಿ ದೂರವಾಣಿ ಸಂಖ್ಯೆ 9964524414 ಕ್ಕೆ ಸಂಪರ್ಕಿಸಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.