ETV Bharat / state

13 ವರ್ಷದ ಬಾಲಕಿಗೆ ಮದುವೆ: ತಂದೆ ಸೇರಿ 9 ಮಂದಿ ಬಂಧನ - Bellary Child Marriage News

ಬಾಲಕಿಯ ತಂದೆ, ಮದುವೆಯಾದ ಯುವಕ ಸೇರಿದಂತೆ ಬಾಲ್ಯವಿವಾಹಕ್ಕೆ ಕಾರಣರಾದ 9 ಜನರ ವಿರುದ್ಧ ಮೂರು ದಿನಗಳ ಹಿಂದೆ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಶರಣಮ್ಮ ತಿಳಿಸಿದ್ದಾರೆ.

ಬಾಲಕಿಗೆ ಮದುವೆ
ಬಾಲಕಿಗೆ ಮದುವೆ
author img

By

Published : Dec 11, 2020, 7:31 PM IST

ಬಳ್ಳಾರಿ: ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರದಲ್ಲಿ 13 ವರ್ಷದ ಬಾಲಕಿಯ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಪ್ರಾಪ್ತೆಯ ತಂದೆ, ಮದುವೆಯಾದ ಯುವಕ ಸೇರಿದಂತೆ ಬಾಲ್ಯವಿವಾಹಕ್ಕೆ ಕಾರಣರಾದ 9 ಜನರ ವಿರುದ್ಧ ಮೂರು ದಿನಗಳ ಹಿಂದೆ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಶರಣಮ್ಮ ತಿಳಿಸಿದ್ದಾರೆ.

ಓದಿ: ರಾಯಚೂರಲ್ಲಿ ಸಾರಿಗೆ ಸೇವೆ ಬಂದ್: ಖಾಸಗಿ ವಾಹನಗಳಿಂದ ಡಬಲ್ ಹಣ ವಸೂಲಿ

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಾರುಗೇರಿಯ ಸಂತೋಷ ಎಂಬಾತನೊಂದಿಗೆ ಕಳೆದ ಮೇ 23ರಂದು ತಾಲೂಕಿನ ಜಿ.ಕೊಡಿಹಳ್ಳಿ ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಬಾಲಕಿಯ ಮದುವೆ ನಡೆದಿತ್ತು. ಇತ್ತೀಚೆಗೆ ಇದು ಬಾಲ್ಯವಿವಾಹ ಪ್ರಕರಣ ಎಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ಘಟನೆಗೆ ಕಾರಣರಾದವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.