ಬಳ್ಳಾರಿ: ಜಿಲ್ಲೆಯಲ್ಲಿ ಹೊಸದಾಗಿ 89 ಕೊರೊನಾ ಪಾಸಿಟಿವ್ ಕೇಸ್ಗಳು ವರದಿಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 1019ಕ್ಕೆ ಏರಿಕೆಯಾಗಿದೆ.
ಇಲ್ಲಿಯವರೆಗೆ ಅಂದಾಜು 436 ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆ ನೌಕರರಿಗೆ ಈ ಮಹಾಮಾರಿ ಕೊರೊನಾ ಸೋಂಕಿರೋದು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1019ಕ್ಕೇರಿಕೆಯಾಗಿದ್ದು, 475 ಮಂದಿ ಗುಣಮುಖರಾಗಿದ್ದಾರೆ. 33 ಮಂದಿ ಸಾವನ್ನಪ್ಪಿದ್ದಾರೆ. 511 ಸಕ್ರಿಯ ಪ್ರಕರಣಗಳಿವೆ.