ಬಳ್ಳಾರಿ: ಕೋವಿಡ್ ಎರಡನೇ ಅಲೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶನಿವಾರ ಮತ್ತಷ್ಟು ಹೊಸ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದ್ದು, 3 ಮಂದಿ ಮೃತಪಟ್ಟಿದ್ದಾರೆ.
ಈ ಮೂಲಕ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 45,903ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 640 ತಲುಪಿದೆ. ಉಳಿದಂತೆ 203 ಮಂದಿ ಚೇತರಿಸಿಕೊಂಡಿದ್ದಾರೆ. 5,047 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ: ಲಾಕ್‌ಡೌನ್ ಭೀತಿಯಿಂದ ಮತ್ತೆ ಕಾರ್ಮಿಕರ ವಲಸೆ?; ಕಳೆದ ಬಾರಿ ರಾಜ್ಯದಿಂದ ಗುಳೇ ಹೋದವರೆಷ್ಟು?
ಬಳ್ಳಾರಿ- 370, ಸಂಡೂರು-130, ಸಿರುಗುಪ್ಪ-44, ಹೊಸಪೇಟೆ-74, ಎಚ್.ಬಿ.ಹಳ್ಳಿ-29, ಹರಪನಹಳ್ಳಿ-43, ಹಡಗಲಿ-30 ಮತ್ತು ಹೊರ ರಾಜ್ಯದಿಂದ ಬಂದ 3 ಮಂದಿ, ಹೊರ ಜಿಲ್ಲೆಯಿಂದ ಬಂದ ಒಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.