ಬಳ್ಳಾರಿ: ಉಭಯ ಜಿಲ್ಲೆಗಳಲ್ಲಿ ಕೊರೊನಾ ಸಂಖ್ಯೆಯೂ ಜೊತೆ ಕೋವಿಡ್ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಈಗ ಜನರಲ್ಲಿ ಆತಂಕ ಮನೆ ಮಾಡಿದೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶುಕ್ರವಾರ 695 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಆರು ಜನರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. 45,172 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದರೇ, ಮೃತರ ಸಂಖ್ಯೆ 637 ಕ್ಕೆ ಏರಿಕೆಯಾಗಿದೆ.
ಕೊರೊನಾದಿಂದ 39 ಜನರು ಡಿಸ್ಟಾರ್ಜ್ ಆಗಿದ್ದು, ಒಟ್ಟು 4,522 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಬಳ್ಳಾರಿ 341, ಸಂಡೂರು 48, ಸಿರುಗುಪ್ಪ 32, ಹೊಸಪೇಟೆ 123, ಎಚ್.ಬಿ.ಹಳ್ಳಿ 42, ಹರಪನಹಳ್ಳಿ 36, ಹಡಗಲಿ 51 ಮತ್ತು ಹೊರ ರಾಜ್ಯದಿಂದ ಬಂದ 5 ಜನರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.