ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶನಿವಾರ 406 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ.
42,745ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದರೆ, ಮೃತರ ಸಂಖ್ಯೆ 622 ತಲುಪಿದೆ. ಈವರೆಗೆ 39,675 ಜನರು ಡಿಸ್ಚಾರ್ಜ್ ಆಗಿದ್ದು, 2,302 ಸಕ್ರಿಯ ಪ್ರಕರಣಗಳಿವೆ.
406 ಕೊರೊನಾ ಪ್ರಕರಣಗಳಲ್ಲಿ ಬಳ್ಳಾರಿ- 227, ಸಂಡೂರು- 47, ಸಿರುಗುಪ್ಪ- 29, ಹೊಸಪೇಟೆ- 49, ಎಚ್.ಬಿ.ಹಳ್ಳಿ- 11, ಹರಪನಹಳ್ಳಿ- 07, ಹಡಗಲಿ- 19 ಮತ್ತು ಹೊರ ರಾಜ್ಯದಿಂದ ಬಂದ ಇಬ್ಬರು, ಹೊರ ಜಿಲ್ಲೆಯಿಂದ ಆರು ಜನರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.