ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ದೌಲತ್ಪುರ ಗ್ರಾಮದ ರುದ್ರಭೂಮಿಯೊಂದರ ಹಳೆಯ ಪಹಣಿ ದೃಢೀಕೃತ ಪ್ರತಿಯನ್ನ ವಿತರಣೆ ಮಾಡೋ ಸಲುವಾಗಿ ಹಣದ ಬೇಡಿಕೆ ಇಟ್ಟಿದ್ದ ಆರೋಪದಡಿ ನೌಕರನಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ತಹಶೀಲ್ದಾರ್ ಕಚೇರಿಯ 'ಡಿ' ದರ್ಜೆಯ ನೌಕರನಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ (ವಿಶೇಷ) ನ್ಯಾಯಾಲಯವು 4 ವರ್ಷಗಳ ಜೈಲುವಾಸದ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಸಂಡೂರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರೂ ಹಾಗೂ ರೆಕಾರ್ಡ್ ಕೀಪರ್ ಆಗಿರುವ ಕೆ.ಶ್ರೀನಿವಾಸ ಅವರ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯನ್ನ ಫೆಬ್ರವರಿ 12ರಂದು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ನ್ಯಾಯಾಧೀಶರಾದ ಪುಷ್ಪಾಂಜಲಿ ದೇವಿ ಅವರು, 20,000 ರೂ. ದಂಡ ಶುಲ್ಕ ಹಾಗೂ ವರ್ಷದ ಅವಧಿಗೆ ಕಠಿಣ ಶಿಕ್ಷೆ ಮತ್ತು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದ್ದಾರೆ.
ಏನಿದು ಪ್ರಕರಣ:
ಜಿಲ್ಲೆಯ ಸಂಡೂರು ತಾಲೂಕಿನ ದೌಲತ್ ಪುರ ಗ್ರಾಮದ ಸರ್ವೇ ನಂಬರ್ 332ರ ರುದ್ರಭೂಮಿಯ ಹಳೆಯ ಪಹಣಿಗಳ ದೃಢೀಕೃತ ಪ್ರತಿಯನ್ನ ನೀಡುವಂತೆ ಕೋರಿ ಸಂಡೂರು ಪಟ್ಟಣದ ಪಿಂಜಾರ್ ಓಣಿಯ ನಿವಾಸಿ ಟಿ.ನರಸಿಂಹ ಎಂಬುವರು, ಡಿ ದರ್ಜೆ ನೌಕರರಾದ ಕೆ. ಶ್ರೀನಿವಾಸಗೆ 2014 ರ ಮೇ 22ರಂದು ಅರ್ಜಿಯನ್ನ ಸಲ್ಲಿಸಿದ್ರು. ಆ ದಾಖಲಾತಿ ನೀಡುವ ಸಲುವಾಗಿ ಅಂದಾಜು 500 ರೂ.ಗಳ ಲಂಚದ ಬೇಡಿಕೆ ಇಟ್ಟಿರುತ್ತಾನೆ.
ಆ ಮೊತ್ತದ ಹಣವನ್ನ ಲಂಚದ ರೂಪದಲ್ಲಿ ಸ್ವೀಕರಿಸುತ್ತಿರುವ ವೇಳೆಗೆ ಬಳ್ಳಾರಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಗುರಣ್ಣ ಎಸ್.ಹೆಬ್ಬಾಳ್ ನೇತೃತ್ವದ ತಂಡ ದಾಳಿ ಕಾರ್ಯಾಚರಣೆ ನಡೆಸಿ ಕಲಂ 13(1)(ಡಿ) ಆಧಾರ 13(2) ಭ್ರಷ್ಟಾಚಾರ, ಪ್ರತಿಬಂಧಕ ಕಾಯ್ದೆ 1988 ರ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡಿರುತ್ತಾರೆ. ಸೂಕ್ತ ತನಿಖೆ ನಡೆಸಿ 2014ರ ಡಿಸೆಂಬರ್ 05 ರಂದು ಬಳ್ಳಾರಿ ಘನ ಪ್ರಧಾನ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನ ಸಲ್ಲಿಸಿದ್ದು, ಸದರಿ ನ್ಯಾಯಾಲಯವು ವಿಶೇಷ ಮೊಕದ್ದಮೆ ಸಂ. 147/2014 ರಂದು ನೀಡಿದ್ದು ಇರುತ್ತದೆ. ನಂತರ ಈ ಪ್ರಕರಣವು ಸದರಿ ಘನ ಪ್ರಧಾನ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ, ಬಳ್ಳಾರಿ ರವರ ಮುಂದೆ ವಿಚಾರಣೆ ನಡೆದು, 2021ರ ಫೆಬ್ರವರಿ 12 ರಂದು ನ್ಯಾಯಾಧೀಶೆ ಪುಷ್ಪಾಂಜಲಿದೇವಿ ಅವರು ವಿಚಾರಣೆ ನಡೆಸಿರುತ್ತಾರೆ.
ಸದರಿ ಪ್ರಕರಣವನ್ನ ಬಳ್ಳಾರಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎನ್.ಸತೀಶ, ಫೈರವಿ ಅಧಿಕಾರಿಯಾಗಿದ್ದು, ಸರ್ಕಾರಿ ವಿಶೇಷ ಅಭಿಯೋಜಕರಾಗಿ ಬಿ.ವಿ, ಬಸವರಾಜ ಅವರು ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಇದನ್ನೂ ಓದಿ:ಬಿಹಾರದಲ್ಲಿ ಕಂಪಿಸಿದ ಭೂಮಿ