ಬಳ್ಳಾರಿ: ವಿದ್ಯುತ್ ಅವಘಡದಲ್ಲಿ ನಾಲ್ಕು ಹಸುಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಹೂವಿನಹಡಗಲಿ ತಾಲೂಕಿನ ನಾಗತಿ ಬಸಾಪುರ ಗ್ರಾಮದಲ್ಲಿ ನಡೆದಿದೆ.
ನಾಗತಿ ಬಸಾಪುರ ಗ್ರಾಮದ ಪ್ರಕಾಶ ಎಂಬುವರಿಗೆ ಸೇರಿದ ನಾಲ್ಕು ಹಸುಗಳು ವಿದ್ಯುತ್ ಅವಘಡದಲ್ಲಿ ಮೃತಪಟ್ಟಿವೆ. ಗ್ರಾಮದಲ್ಲಿ ವಿಪರೀತ ಮಳೆ ಸುರಿದು ವಿದ್ಯುತ್ ವ್ಯತ್ಯಯವಾಗಿ ವಾಹಕದ ಮೂಲಕ ಅಧಿಕ ವಿದ್ಯುತ್ ಹರಿದಿದೆ. ಪರಿಣಾಮ ಕೊಟ್ಟಿಗೆಯಲ್ಲಿದ್ದ ಹಸುಗಳು ಸಾವಿಗೀಡಾಗಿವೆ.
ಸುತ್ತಮುತ್ತಲ ಮನೆಗಳಲ್ಲೂ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಜನರ ಕೂಗಾಟ ಕೇಳಿದ ತಕ್ಷಣ ಪ್ರಕಾಶ ಮನೆಯಲ್ಲಿದ್ದರು ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಸುಗಳ ಸಾವಿನಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಪ್ರಕಾಶ ಅವರ ಕುಟುಂಬದವರು ನೋವು ತೋಡಿಕೊಂಡಿದ್ದಾರೆ.