ಹೊಸಪೇಟೆ: ಹಂಪಿಯ ಉದ್ಧಾನ ವೀರಭದ್ರಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ 2.17 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ.
2019ರ ಆಗಸ್ಟ್ 2 ರಂದು ದೇವಾಲಯದಲ್ಲಿ ಹುಂಡಿಯನ್ನು ಅಳವಡಿಸಲಾಗಿತ್ತು. ಒಂದು ವರ್ಷದಲ್ಲಿ 2.17 ಲಕ್ಷ ರೂ. ಭಕ್ತರ ಕಾಣಿಕೆ ಸಂಗ್ರಹವಾಗಿದೆ. ಕೊರೊನಾ ಹಿನ್ನೆಲೆ ಘೋಷಣೆಯಾದ ಲಾಕ್ ಡೌನ್ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭಕ್ತರಿಗೆ ಅವಕಾಶವನ್ನು ಕಲ್ಪಿಸಿರಲಿಲ್ಲ. ಆದರೂ ಸಹ ದೇವಸ್ಥಾನದ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿದೆ. ಈ ವೇಳೆ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕ ಹನುಮಂತಪ್ಪ, ಕೆನರಾ ಬ್ಯಾಂಕ್ ನ ವಿಜಯನಾರಾಯಣ ಇನ್ನಿತರರಿದ್ದರು.