ETV Bharat / state

6 ವರ್ಷಗಳಿಂದ ವಿರಸ.. ವಿಚ್ಛೇದನಕ್ಕೆ ಮುಂದಾಗಿದ್ದ ಒಂದೇ ಕುಟುಂಬದ 2 ಜೋಡಿಗಳ ಬಾಳಲ್ಲಿ ಲೋಕ ಅದಾಲತ್​ನಿಂದ ಮೂಡಿತು ಸಮರಸ

ಸತತ 6 ವರ್ಷಗಳಿಂದ ದೂರವಿದ್ದ ದಂಪತಿಗಳು ಲೋಕ ಅದಾಲತ್​ನಲ್ಲಿ ಒಂದಾಗಿದ್ದಾರೆ.

ಲೋಕ ಅದಾಲತ್​ನಲ್ಲಿ ಒಂದಾದ ದಂಪತಿಗಳು
ಲೋಕ ಅದಾಲತ್​ನಲ್ಲಿ ಒಂದಾದ ದಂಪತಿಗಳು
author img

By

Published : Jul 9, 2023, 7:04 PM IST

ವಿಜಯನಗರ : ದಾಂಪತ್ಯ ಜೀವನದಲ್ಲಿ ಬಿರುಕು ಬಂದು ವಿಚ್ಛೇದನ ಪಡೆಯುವ ಸಲುವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ಒಂದೇ ಕುಟುಂಬದ ಎರಡು ಜೋಡಿಗಳು ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾದ ಪ್ರಸಂಗ ನಡೆದಿದೆ. ಅಶ್ವಿನಿ - ಶ್ರೀಧರ್ ಕೆರೂರ್ ಮತ್ತು ನಂದಿನಿ - ಶಶಿಧರ್ ಕೆರೂರ್ ಮತ್ತೆ ಒಂದಾದ ದಂಪತಿಗಳು.

ಹೊಸಪೇಟೆ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇಂತಹ ಅಪರೂಪದ ಘಟನೆಯೊಂದು ನಡೆದಿದೆ. ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳನ್ನು ಒಂದೇ ಕುಟುಂಬದ ಇಬ್ಬರು ಸಹೋದರರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ದಾಂಪತ್ಯದಲ್ಲಿ ಕಲಹ ಏರ್ಪಟ್ಟು, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಸತತ 6 ವರ್ಷಗಳ ಬಳಿಕ ಅದೇ ನ್ಯಾಯಾಲಯ ಎರಡು ಜೋಡಿಗಳನ್ನು ಮತ್ತೆ ಒಂದಾಗಿಸಿದೆ.

ಇದನ್ನೂ ಓದಿ : ಒಲಿದ ಜೀವ ಜೊತೆಯಲಿರಲು..: ಲೋಕ ಅದಾಲತ್‍ನಲ್ಲಿ ಮನಸ್ತಾಪ ಮರೆತು ಮತ್ತೆ ಒಂದಾದ 33 ಜೋಡಿ

ಜಿಲ್ಲೆಯ ಹೂವಿನ ಹಡಗಲಿಯ ಜಾತಪ್ಪ ಕೋಗಳಿ ಮತ್ತು ಕೊಟ್ರಮ್ಮ ದಂಪತಿಗಳ ಇಬ್ಬರು ಪುತ್ರಿಯರಾದ ಅಶ್ವಿನಿ ಮತ್ತು ನಂದಿನಿ ಎಂಬುವವರನ್ನು ಹುಬ್ಬಳ್ಳಿ ಮೂಲದ ಸಿದ್ದಬಸಪ್ಪ ಕೆರೂರು- ಕಮಲಾಪಕ್ಷಮ್ಮ ದಂಪತಿಗಳ ಮಕ್ಕಳಾದ ಶ್ರೀಧರ್ ಕೆರೂರ್, ಶಶಿಧರ್ ಕೆರೂರ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕುಟುಂಬಗಳಲ್ಲಿ ಸಣ್ಣಪುಟ್ಟ ವಿಚಾರಗಳಿಂದ ಜಗಳ ಮಾಡಿಕೊಂಡು ಅದೇ ಮನಸ್ತಾಪಗಳನ್ನೇ ದೊಡ್ಡದು ಮಾಡಿಕೊಂಡು ಸಂಸಾರದಿಂದ ದೂರಾಗಲು ಮುಂದಾಗಿ ವಿಚ್ಛೇದನ ಬೇಕು ಎಂದು ಸತತ 6 ವರ್ಷಗಳ ಕಾಲ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಈ ದಂಪತಿಗಳನ್ನು ಅದೇ ನ್ಯಾಯಾಲಯ ಒಂದು ಮಾಡಿದೆ.

1850 ಪ್ರಕರಣ ಇತ್ಯರ್ಥ : ನಗರದ ನ್ಯಾಯಾಲಯದ ಆವರಣಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಬರೋಬ್ಬರಿ ಒಂದೇ ದಿನ ಒಟ್ಟು 1850 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸುಮಾರು 6 ಕೋಟಿ ರೂ.ಗೂ ಹೆಚ್ಚು ಮೊತ್ತದ ಸಾಲ ವಸೂಲಾತಿಯಾಗಿದೆ. ಬಾಕಿ ಇದ್ದ ರಾಜಿ ಮಾಡಿಕೊಳ್ಳಬಹುದಾದ ನಾನಾ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ಜಿಲ್ಲಾ ನ್ಯಾಯಾಧೀಶ ಅಬ್ದುಲ್ ರೆಹಮಾನ್ ಎ. ನಂದಗಡಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೇಮಲತಾ ಹುಲ್ಲೂರು, ಪ್ರಧಾನ ಸಿವಿಲ್ ನ್ಯಾಯಾಧೀಶ ಕಿಷನ್ ಬಿ. ಮಾಡಲಗಿ ಉಪಸ್ಥಿತರಿದ್ದರು.

ಮೈಸೂರಿನಲ್ಲೂ ಒಂದಾದ 33 ಜೋಡಿಗಳು : ಸಂಸಾರದಿಂದ ದೂರಾಗಲು ಮುಂದಾಗಿದ್ದ 33 ಜೋಡಿಗಳು ಇದೀಗ ಮುನಿಸು ಮರೆತು ಒಂದಾಗಿದ್ದಾರೆ. ಜಿಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿ ಮತ್ತೆ ಜೊತೆಯಾಗಿ ಹೆಜ್ಜೆ ಹಾಕುವ ಮನಸ್ಸು ಮಾಡಿದರು. ವರ್ಷಾನುಗಟ್ಟಲೆ ಒಬ್ಬರ ಮುಖ ಮತ್ತೊಬ್ಬರು ನೋಡದವರು ಅದಾಲತ್‍ನಲ್ಲಿ ಮುಖಾಮುಖಿಯಾಗಿ ಜೀವನದ ದೋಣಿಯಲ್ಲಿ ಒಟ್ಟಿಗೆ ಸಾಗುವ ಶಪಥ ಕೈಗೊಂಡಿದ್ದಾರೆ.

ಇದನ್ನೂ ಓದಿ : ಬೇರೆಯಾಗಿದ್ದ ಎರಡು ಜೋಡಿಗಳು ನ್ಯಾಯಾಲಯದಲ್ಲಿ ಮತ್ತೆ ಒಂದಾದವು...!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.