ETV Bharat / state

ಹಳೇ ದ್ವೇಷ: 2 ಎಕರೆ ಮೆಣಸಿನಕಾಯಿ ಬೆಳೆ ನಾಶ ಮಾಡಿದ ದುಷ್ಕರ್ಮಿಗಳು

ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ನಾಶ ಮಾಡಿದ ದುರ್ಘಟನೆ ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗ್ತಿದೆ.

2 acres of chilli crop Destroy  in Bellary
ಹಳೇ ದ್ವೇಷ.. 2 ಎಕರೆ ಮೆಣಸಿನಕಾಯಿ ಬೆಳೆ ನಾಶ ಮಾಡಿದ ದುಷ್ಕರ್ಮಿಗಳು
author img

By

Published : Oct 29, 2020, 1:34 PM IST

ಬಳ್ಳಾರಿ: ಹಳೇ ದ್ವೇಷಕ್ಕೆ ಎರಡು ಎಕರೆ ಪ್ರದೇಶದಲ್ಲಿದ್ದ ಮೆಣಸಿನಕಾಯಿ ಬೆಳೆ ನಾಶ ಮಾಡಿದ ದುರ್ಘಟನೆ ಗಣಿನಾಡಿನಲ್ಲಿ ನಡೆದಿದೆ.

ಹಳೇ ದ್ವೇಷ: 2 ಎಕರೆ ಮೆಣಸಿನಕಾಯಿ ಬೆಳೆ ನಾಶ ಮಾಡಿದ ದುಷ್ಕರ್ಮಿಗಳು

ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ಘಟನೆ ನಡೆದಿದೆ. ಕರಡಿ ಗುಡ್ಡಂ ಶ್ರೀನಿವಾಸುಲು ಎಂಬುವರು ಗುತ್ತಿಗೆ ಆಧಾರದಲ್ಲಿ ಕಳೆದ ಮೂರು ವರ್ಷದಿಂದ ಕೃಷಿ ಮಾಡುತ್ತಿದ್ದರು. ಎರಡು ವರ್ಷವೂ ಉತ್ತಮ ಬೆಳೆ ಬಾರದೆ ನಷ್ಟ ಅನುಭವಿಸಿದ್ದರು. ಈ ಬಾರಿ ಉತ್ತಮ ಬೆಳೆ ಬಂದಿದ್ದು, ಬೆಳೆಗೆ ಮಾಡಿದ ಸಾಲ ತೀರುತ್ತದೆ ಎಂಬ ಆಶಾಭಾವನೆಯಿಂದ ಇದ್ದರು. ಆದರೆ ಉತ್ತಮ ಇಳುವರಿ ಹೊತ್ತಿನಲ್ಲಿದ್ದ ಬೆಳೆಯನ್ನು ನಾಶ ಮಾಡಿದ್ದು, ರೈತನಿಗೆ ಆಘಾತ ಉಂಟಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಆತಂಕ್ಕೀಡಾಗಿದ್ದಾರೆ.

ಕ್ವಿಂಟಾಲ್​ಗೆ 17 ಸಾವಿರದಂತೆ ಬೇಡಿಕೆ ಇದೆ. ಅಂದಾಜು 40 ಕ್ವಿಂಟಾಲ್ ಮೆಣಸು ಕೈಗೆ ಬರ್ತಿತ್ತು. ಅಂದಾಜು 6 ಲಕ್ಷ ರೂ. ಮೌಲ್ಯದ ಬೆಳೆ ಹಾಳು ಮಾಡಲಾಗಿದೆ. ಈಗಾಗಲೇ ಸಾಲ ಮಾಡಿ 3 ಲಕ್ಷ ಖರ್ಚು ಮಾಡಿದ್ದೆ ಎಂದು ರೈತ ಅಳಲು ತೋಡಿಕೊಂಡಿದ್ದಾನೆ.

ಈ ಸಂಬಂಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.