ETV Bharat / state

ಬ್ರಿಟನ್​ನಿಂದ ಬಳ್ಳಾರಿಗೆ ಆಗಮಿಸಿದ 15 ಮಂದಿ : ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆ

ಕೊರೊನಾ ಸೋಂಕು ಹೊಸ ಸ್ವರೂಪ ಪಡೆದುಕೊಂಡಿದ್ದು, ಗಣಿನಾಡು ಬಳ್ಳಾರಿಗೆ 15 ಜನ ಬ್ರಿಟನ್​ನಿಂದ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ಬಳ್ಳಾರಿ
ಬಳ್ಳಾರಿ
author img

By

Published : Dec 23, 2020, 11:02 AM IST

ಬಳ್ಳಾರಿ: ಕೊರೊನಾ ಸೋಂಕು ಹೊಸ ಸ್ವರೂಪ ಪಡೆದುಕೊಂಡಿದ್ದು, ಈ ಭೀತಿಯಿಂದ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ಡಿಸೆಂಬರ್ 15 ರಿಂದ 22ರವರೆಗೆ ಬ್ರಿಟನ್ ದೇಶದಿಂದ ಜಿಲ್ಲೆಗೆ ಬಂದಿರುವ 15 ಮಂದಿಯನ್ನು ಕೋಂ ಕ್ವಾರಂಟೈನ್​ ಮಾಡಲಾಗಿದೆ. ಅಷ್ಟೇ ಅಲ್ಲದೆ, ಎಲ್ಲರ ಗಂಟಲು ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗೆಂದು ಆರೋಗ್ಯಾಧಿಕಾರಿಗಳು ಸಂಗ್ರಹಿಸಿ ಕೊಂಡೊಯ್ದಿದ್ದಾರೆ.

ಇದನ್ನು ಓದಿ: ಕೊರೊನಾ ರೂಪಾಂತರ ಭೀತಿ : ಶಾಲೆ ಆರಂಭದ ಬಗ್ಗೆ ಸಚಿವರ ಸಭೆ

ಬಳ್ಳಾರಿಯ 6ಜನ, ಹೊಸಪೇಟೆಯ 4ಮಂದಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಸಂಡೂರಿನ ತಲಾ ಒಬ್ಬರು ಸೇರಿದಂತೆ ಜಿಲ್ಲೆಗೆ ಒಟ್ಟು 15 ಜನರು ಬ್ರಿಟನ್​ನಿಂದ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸಲು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ನೇತೃತ್ವದಲ್ಲಿ ಇಂದು ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್​ ಮೂಲಕ ಮೀಟಿಂಗ್​ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.