ಬೆಳಗಾವಿ: ನಗರದ ರಾಷ್ಟ್ರೀಯ ಮಿಲಿಟರಿ ಶಾಲಾ ಮೈದಾನದಲ್ಲಿ ನಡೆಯುವ ಸೈನಿಕ ಭರ್ತಿ ರ್ಯಾಲಿಯಲ್ಲಿ ದೈಹಿಕ ಪರೀಕ್ಷೆ ಎದುರಿಸಲು ಬಂದ ಯುವಕರಿಗೆ ಜಿಲ್ಲಾಡಳಿ ಕನಿಷ್ಠ ವಸತಿ ಸೌಲಭ್ಯವನ್ನೂ ನೀಡದ ಕಾರಣ, ಯುವಕರು ಕಳೆದ ರಾತ್ರಿ ರಸ್ತೆ ಬದಿ ಮಲಗಿ ಕಾಲ ಕಳೆಯುವಂತಾಗಿತ್ತು.
ಈ ರ್ಯಾಲಿ ಇಂದಿನಿಂದ ಆರಂಭವಾಗಿ ನವೆಂಬರ್ 9ರ ವರೆಗೆ ಒಟ್ಟು 11 ದಿನಗಳ ಕಾಲ,ಮಹಾರ್ ಬಟಾಲಿಯನ್, ಪ್ಯಾರಾ ಬಟಾಲಿಯನ್ ಮತ್ತು ಮದ್ರಾಸ್ ಬಟಾಲಿಯನ್ ಅಡಿಯಲ್ಲಿ ನಡೆಯಲಿದೆ.
ನಾವು ಸಾವಿರಾರು ಕಿಲೋಮೀಟರ್ ದೂರದಿಂದ ಬಂದಿದ್ದೇವೆ. ನಮಗೆ ಬೆಳಗಾವಿ ಜಿಲ್ಲಾಡಳಿತ ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ ಎಂದು ರ್ಯಾಲಿಯಲ್ಲಿ ಭಾಗವಹಿಸಲು ಬಂದ ಯುವಕರು ತಮ್ಮ ನೋವು ತೋಡಿಕೊಂಡಿದ್ದಾರೆ.