ಅಥಣಿ(ಬೆಳಗಾವಿ): ಕಬ್ಬು ಕಟಾವು ವೇಳೆ ಹಾವು ಕಚ್ಚಿ ಕಾರ್ಮಿಕ ಸಾವಿಗೀಡಾಗಿರುವ ಘಟನೆ ತಾಲೂಕಿನ ಕಟಗೇರಿ ಗ್ರಾಮದಲ್ಲಿ ನಡೆದಿದೆ. ಅಥಣಿ ತಾಲೂಕಿನ ಹಣಮಾಪುರ ಗ್ರಾಮ ನಿವಾಸಿ ನಿತೇಶ್ ಬಾಬು ಪೂಜಾರಿ(30) ಮೃತ ದುರ್ದೈವಿ. ಎಂದಿನಂತೆ ಕಬ್ಬು ಕಟಾವು ಮಾಡಲು ತೆರಳಿದ್ದ ವೇಳೆ ನಿತೇಶ್ಗೆ ಹಾವು ಕಡಿದಿದ್ದು, ಕಡಿತದ ತೀವ್ರತೆಗೆ ಹಾವಿನ ಒಂದು ಹಲ್ಲು ಮುರಿದು ನಿತೇಶ್ ಬಾಬು ಬಲಗೈಯಲ್ಲಿ ಸಿಲುಕಿ ಕೊಂಡಿದೆ.

ಇನ್ನು ತೀವ್ರ ಅಸ್ವಸ್ಥಗೊಂಡ ನಿತೇಶ್ ಅವರನ್ನು ಕಟಗೇರಿ ಗ್ರಾಮದಿಂದ ಅಥಣಿ ಪಟ್ಟಣದ ಆಸ್ಪತ್ರೆಗೆ ಸಾಗಿಸುವ ವೇಳೆ, ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೊಲಕ್ಕೆ ಊಟ ತೆಗೆದುಕೊಂಡು ಹೋಗುತ್ತಿದ್ದಾಗ ಹಾವು ಕಚ್ಚಿ ಬಾಲಕಿ ಸಾವು