ಬೆಳಗಾವಿ: ಗೋಕಾಕ್ ತಾಲೂಕು ಸೇರಿದಂತೆ ವಿವಿಧಡೆ ಭಾರಿ ಮಳೆ ಸುರಿಯುತ್ತಿದೆ. ರಣಮಳೆಯಿಂದ ಹಲವೆಡೆ ಪ್ರವಾಹ ಉಂಟಾಗಿದ್ದು ಹಲವರು ಸಿಲುಕಿಕೊಂಡಿದ್ದಾರೆ. ಇಂದು ಪ್ರವಾಹದಲ್ಲಿ ಸಿಲುಕಿದ್ದ 12 ದಿನದ ಹಸುಗೂಸು ಮತ್ತು ಬಾಣಂತಿಯನ್ನು ರಕ್ಷಣೆ ಮಾಡಿದ ಪ್ರಸಂಗವೂ ಕೂಡ ಮಳೆಯ ಪ್ರಮಾಣಕ್ಕೆ ಸಾಕ್ಷಿಯಾಯಿತು. ಸ್ಥಳೀಯ ಯುವಕರೆಲ್ಲ ಸೇರಿ ಹರಸಾಹಪಟ್ಟು ಹಸುಗೂಸು ಮತ್ತು ತಾಯಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕರ ಮನಮಿಡಿಯೂವ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಗೋಕಾಕ್ ತಾಲೂಕಿನ ಮಾಣಿಕವಾಡಿ ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಜೋರು ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕೇವಲ ಒಂದು ಗಂಟೆ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಕುಟುಂಬಸ್ಥರು ಪರದಾಡುವಂತಾಗಿತ್ತು. ಏಕಾಏಕಿ ನೀರು ನುಗ್ಗಿದ್ದರಿಂದ ಮನೆಯೊಳಗೆ ಹಸುಳೆ ಮತ್ತು ಬಾಣಂತಿ ಮನೆಯೊಳಗೆ ಸಿಕ್ಕಿ ಹಾಕಿಕೊಂಡಿದ್ದರು.
ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮನೆಗಳ ಮೇಲ್ಛಾವಣಿ ಏರಿ ಕುಳಿತಿದ್ದರು. ಇದನ್ನು ಗಮಸಿದ ಸ್ಥಳೀಯ ಯುವಕರು ಮನೆಯೊಂದರಲ್ಲಿ ಸಿಲುಕಿದ್ದ ಬಾಣಂತಿ ಮತ್ತು ಕಂದಮ್ಮನನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಮೊದಲು ಮೇಲ್ಛಾವಣಿಯ ಮೇಲೇರಿ ಹಂಚು ತೆಗೆದು ರಕ್ಷಣೆಗೆ ಯತ್ನಿಸಿದ್ದಾರೆ. ಅದು ಸಾಧ್ಯವಾಗದಿದ್ದಾಗ ಮನೆಯೊಳಗಡೆ ಹೊಕ್ಕು ಮಗು ಮತ್ತು ತಾಯಿಯ ಪ್ರಾಣ ಕಾಪಾಡಿದರು.
ಇದನ್ನೂ ಓದಿ: ಬೆಣ್ಣೆಹಳ್ಳ ನೀರಿನ ರಭಸಕ್ಕೆ ಕುಸಿದ ಬ್ರಿಡ್ಜ್.. ಕೂದಳೆಲೆ ಅಂತರದಲ್ಲಿ ಪಾರಾದ ಯುವಕರು