ETV Bharat / state

ಚುಡಾಯಿಸುತ್ತಿದ್ದ ವ್ಯಕ್ತಿಗೆ ಧರ್ಮದೇಟು ಕೊಟ್ಟ ದಿಟ್ಟ ಮಹಿಳೆ - Woman slapped man who tortured her in Belagavi

ಹಲವು ಬಾರಿ ಮಹಿಳೆ ಎಚ್ಚರಿಕೆ ನೀಡಿ‌ದ್ದಾರೆ. ಆದರೂ, ಬಗ್ಗದ ಆಸಾಮಿ ಇವತ್ತೂ ಮಹಿಳೆಯನ್ನು ಹಿಂಬಾಲಿಸಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಮಹಿಳೆ ಹಾಗೂ ಆಕೆಯ ಪತಿ, ಈ ವ್ಯಕ್ತಿಗೆ ನಡುರಸ್ತೆಯಲ್ಲೇ ಚಪ್ಪಲಿ ಸೇವೆ ಮಾಡಿದ್ದಾರೆ..

ಮಹಿಳೆಗೆ ಚೂಡಾಯಿಸುತ್ತಿದ್ದ ವ್ಯಕ್ತಿಗೆ ಚಪ್ಪಲಿ ಏಟು ಕೊಟ್ಟ ಮಹಿಳೆ

author img

By

Published : Jul 3, 2021, 10:19 PM IST

Updated : Jul 3, 2021, 11:05 PM IST

ಬೆಳಗಾವಿ : ತನ್ನನ್ನು ಚುಡಾಯಿಸಿ ರಸ್ತೆಯಲ್ಲಿ ಹಿಂಬಾಲಿಸುತ್ತಿದ್ದ ಕಾಮುಕ ವ್ಯಕ್ತಿಗೆ ಮಹಿಳೆಯೊಬ್ಬರು ಚಪ್ಪಲಿ ಏಟು ನೀಡಿರುವ ಘಟನೆ ಇಲ್ಲಿನ ಎಸ್ಪಿ ಕಚೇರಿ ಮುಂದಿನ ರಸ್ತೆಯಲ್ಲಿ ಇಂದು ಸಂಜೆ ನಡೆದಿದೆ.

ತನ್ನನ್ನು ಚೂಡಾಯಿಸುತ್ತಿದ್ದ ವ್ಯಕ್ತಿಗೆ ಚಪ್ಪಲಿ ಏಟು ಕೊಟ್ಟ ಮಹಿಳೆ..

ನಗರದ ಗೋಪಾಲ ಗುರನ್ನವರ ಚಪ್ಪಲಿ ಸೇವೆ ಮಾಡಿಸಿಕೊಂಡ ವ್ಯಕ್ತಿ. ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ತೆರಳುತ್ತಿದ್ದ ವೇಳೆಯಲ್ಲಿ ಕೆಲ ತಿಂಗಳಿಂದಲೂ ಹಿಂಬಾಲಿಸುತ್ತಿದ್ದ. ಈ ವ್ಯಕ್ತಿ ಮಹಿಳೆಗೆ ಶಿಳ್ಳೆ ಹೊಡೆದು ಪ್ರತಿದಿನ ಚುಡಾಯಿಸುತ್ತಿದ್ದನಂತೆ. ಇದಲ್ಲದೇ ಕೆಲವು ಬಾರಿ ಮನೆಯವರೆಗೂ ತೆರಳಿದ್ದಾನೆ.

ಹಲವು ಬಾರಿ ಮಹಿಳೆ ಎಚ್ಚರಿಕೆ ನೀಡಿ‌ದ್ದಾರೆ. ಆದರೂ, ಬಗ್ಗದ ಆಸಾಮಿ ಇವತ್ತೂ ಮಹಿಳೆಯನ್ನು ಹಿಂಬಾಲಿಸಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಮಹಿಳೆ ಹಾಗೂ ಆಕೆಯ ಪತಿ, ಈ ವ್ಯಕ್ತಿಗೆ ನಡುರಸ್ತೆಯಲ್ಲೇ ಚಪ್ಪಲಿ ಸೇವೆ ಮಾಡಿದ್ದಾರೆ.

ಬಳಿಕ ರಸ್ತೆ ಸವಾರರು ಸಹ ಮಹಿಳೆ ಆರೋಪಿಸಿರುವುದನ್ನು ಕಂಡು ವ್ಯಕ್ತಿಗೆ ಥಳಿಸಿದ್ದಾರೆ‌. ಯಾವಾಗ ಸಾರ್ವಜನಿಕರು ಧರ್ಮದೇಟು ನೀಡುತ್ತಿದ್ದಂತೆ ಈ ಕಿಡಿಗೇಡಿ ಅಲ್ಲಿಂದ ಓಡಿ ಹೋಗಿದ್ದಾನೆ.

Last Updated : Jul 3, 2021, 11:05 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.