ETV Bharat / state

ಬೆಳಗಾವಿಯಲ್ಲಿ ಇಂದು 7 ತಿಂಗಳ ಹೆಣ್ಣು ಮಗು ಸೇರಿ 9 ಜನರಿಗೆ ಕೊರೊನಾ: ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆ - ಬೆಳಗಾವಿಯಲ್ಲಿ 9 ಹೊಸ ಕೊರೊನಾ ಕೇಸ್​ಗಳು

7 ತಿಂಗಳ ಹೆಣ್ಣು ಮಗು ಸೇರಿ ಬೆಳಗಾವಿಯಲ್ಲಿ ಇಂದು 9 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಆತಂಕ ಹೆಚ್ಚಿಸಿದೆ.

corona cases in belagavi,ಬೆಳಗಾವಿಯಲ್ಲಿ ಕೊರೊನಾ ಸಂಖ್ಯೆ
7 ತಿಂಗಳ ಹೆಣ್ಣುಮಗು ಸೇರಿ ಬೆಳಗಾವಿ ಜಿಲ್ಲೆಯ 9 ಜನರಿಗೆ ಕೊರೊನಾ ಸೋಂಕು!.. ಸಂಖ್ಯೆ125ಕ್ಕೆ ಏರಿಕೆ
author img

By

Published : May 21, 2020, 1:59 PM IST

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಿಂದ ಮರಳಿದ್ದ 7 ತಿಂಗಳ ಹೆಣ್ಣು ಮಗು ಸೇರಿ ಗಡಿಜಿಲ್ಲೆ ಬೆಳಗಾವಿಯಲ್ಲಿ ಇಂದು 9 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ. ಮಹಾಮಾರಿ ಕೊರೊನಾ ಜಿಲ್ಲೆಯ ರಾಮದುರ್ಗ ಹಾಗೂ ಬೈಲಹೊಂಗಲ ತಾಲೂಕಿಗೂ ಕಾಲಿಟ್ಟಿದ್ದು ಆತಂಕ ಹೆಚ್ಚಿಸಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಿಂದ ಎರಡು ವಾರದ ಹಿಂದೆ ಪಾಲಕರ ಜತೆಗೆ ಆಗಮಿಸಿದ್ದ ರಾಮದುರ್ಗ ತಾಲೂಕಿನ‌ ಕಲ್ಲೂರ ಗ್ರಾಮದ 7 ತಿಂಗಳ ಹೆಣ್ಣು ಮಗುವಿನಲ್ಲಿ ಸೋಂಕು ಪತ್ತೆಯಾಗಿದೆ. ಪೋಷಕರು ಸಂಶಯಗೊಂಡು ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದು, ಪಾಲಕರಿಗೆ ನೆಗೆಟಿವ್ ಹಾಗೂ ಪುತ್ರಿಗೆ ಪಾಸಿಟಿವ್ ಬಂದಿದೆ.

ಜೊತೆಗೆ ರಾಜಸ್ಥಾನದ ಅಜ್ಮೀರದಿಂದ ಮರಳಿ ಬಂದಿದ್ದ ಇಬ್ಬರು ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಕ್ವಾರಂಟೈನ್ ಆಗಿದ್ದರು. ಇದೀಗ ಇಬ್ಬರಲ್ಲೂ ಕೊರೊನಾ ಸೋಂಕು ದೃಢಪಟ್ಟಿದೆ. ಜಾರ್ಖಾಂಡ್​ನಿಂದ ಮರಳಿದ್ದ ಮೂವರಲ್ಲಿ ಹಾಗೂ ಮಹಾರಾಷ್ಟ್ರದ ಮುಂಬೈನಿಂದ ಮರಳಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೇ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಸೋಂಕಿತನ ಜತೆಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.