ETV Bharat / state

ನಕಲಿ ದಾಖಲೆ ಮೇಲೆ ವಿಧಾನಸೌಧವನ್ನೂ ಸಬ್ ರಿಜಿಸ್ಟ್ರಾರ್ ನನಗೆ ನೋಂದಣಿ ಮಾಡುತ್ತಾರಾ: ಕೃಷ್ಣ ಭೈರೇಗೌಡ ಪ್ರಶ್ನೆ

ನಕಲಿ ದಾಖಲೆ ಕೊಟ್ಟರೆ ಸಬ್ ರಿಜಿಸ್ಟ್ರಾರ್ ವಿಧಾನಸೌಧವನ್ನೂ ನನ್ನ ಹೆಸರಿಗೆ ನೋಂದಣಿ ಮಾಡಿಸಿಕೊಡುತ್ತಾರಾ ಎಂದು ಕೃಷ್ಣ ಭೈರೇಗೌಡ ಹೇಳಿದರು.

MLA Krishna Bhairegowda
ಶಾಸಕ ಕೃಷ್ಣ ಭೈರೇಗೌಡ
author img

By

Published : Dec 21, 2022, 9:25 PM IST

ವಿಧಾನಸೌಧವನ್ನೂ ನನ್ನ ಹೆಸರಿಗೆ ನೋಂದಣಿ ಮಾಡಿಸಿಕೊಡುತ್ತಾರಾ ಎಂದು ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ಪ್ರಶ್ನಿಸಿದರು.

ಬೆಂಗಳೂರು/ಬೆಳಗಾವಿ: ನಕಲಿ ದಾಖಲೆ ಕೊಟ್ಟರೆ ಸಬ್ ರಿಜಿಸ್ಟ್ರಾರ್ ವಿಧಾನಸೌಧವನ್ನೂ ನನ್ನ ಹೆಸರಿಗೆ ನೋಂದಣಿ ಮಾಡಿಸಿಕೊಡುತ್ತಾರಾ ಎಂದು ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ವಿಷಯ ಪ್ರಸ್ತಾಪಿಸಿದ ಕೃಷ್ಣ ಭೈರೇಗೌಡ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕು ಕಟ್ಟಿಗೇನಹಳ್ಳಿಯಲ್ಲಿ ಖಾಸಗಿ ಬಡಾವಣೆಯನ್ನು ನಿರ್ಮಿಸಿ ಬಿಬಿಎಂಪಿಯ ನಕಲಿ ಖಾತೆಗಳನ್ನು ಸೃಷ್ಟಿಸಿ, ನಿವೇಶನಗಳ ಪರಭಾರೆ ನೋಂದಣಿಯನ್ನು ಮಾಡಿ ಅಮಾಯಕ ಖರೀದಿದಾರರಿಗೆ ಮೋಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ನಕಲಿ ಖಾತೆ ಸೃಷ್ಟಿಸಿ, ವಿಧಾನಸೌಧದ ಮಾಲೀಕ ನಾನು ಎಂದು ಹೇಳಿ, ಪರಾಭಾರೆ ಮಾಡಿದರೆ ಅದನ್ನೂ ನೋಂದಾಣಿ ಮಾಡುತ್ತೀರಾ?. ನೋಂದಣಿ ಇಲಾಖೆಯ ನೀತಿ ಏನಿದೆ?. ಸಬ್ ರಿಜಿಸ್ಟ್ರಾರ್ ಆಸ್ತಿಗಳ ದಾಖಲೆಗಳ ನೈಜತೆ ಪರಿಶೀಲಿಸುವುದು ನಮ್ಮ ಕೆಲಸ ಅಲ್ಲ ಅಂದರೆ, ವಿಧಾನಸೌಧವನ್ನು ನಕಲಿ ದಾಖಲೆ ಆಧಾರದಲ್ಲಿ ರಿಜಿಸ್ಟರ್ ಮಾಡಿ ಕೊಡುತ್ತಾರೆ. ಕಂದಾಯ ಸಚಿವರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕಾನೂನು ದುರಪಯೋಗ ಪಡಿಸದ ರೀತಿಯಲ್ಲಿ ಸೂಕ್ತ ತಿದ್ದುಪಡಿ ತರಬೇಕು ಎಂದು ಮನವಿ ಮಾಡಿದರು.

ಬಿಬಿಎಂಪಿಯ ಖಾತೆ ನಕಲಿ ಮಾಡಿ 16 ಎಕರೆ ಪ್ರದೇಶದಲ್ಲಿ ಅನಧಿಕೃತ ಖಾಸಗಿ ಬಡಾವಣೆ ಮಾಡಿ, 70 ಸೈಟ್ ನೋಂದಣಿ ಮಾಡಿ ಕೊಟ್ಟಿದ್ದಾರೆ. ಈ ಬಗ್ಗೆ ಬಿಬಿಎಂಪಿ ಖಾತೆ ನಕಲಿ ಮಾಡಿಸಿದ್ದಾರೆ ಎಂದು ಬಿಬಿಎಂಪಿ ಕಂದಾಯ ಅಧಿಕಾರಿಗಳೇ ದೂರು ನೀಡಿದ್ದಾರೆ. ಆದರೆ ಈಗಲೂ ನೋಂದಣಾಧಿಕಾರಿಗಳೇ ನೋಂದಣಿ ಮಾಡುತ್ತಿದ್ದಾರೆ. ಈ ಬಗ್ಗೆ ಐಜಿಆರ್ ಗಮನಕ್ಕೂ ತಂದು ಪೊಲೀಸ್ ದೂರನ್ನೂ ಕೊಟ್ಟಿದ್ದಾರೂ ಯಾವುದೇ ವಿಚಾರಣೆ ಮಾಡಿಲ್ಲ ಎಂದು ಹೇಳಿದರು.

4 ಸಬ್ ರಿಜಿಸ್ಟ್ರಾರ್ ಕಚೇರಿ ವ್ಯಾಪ್ತಿಯಲ್ಲಿ 70 ಸೈಟ್ ಗಳನ್ನು ನೋಂದಣಿ ಮಾಡಲಾಗಿದೆ. ಒಬ್ಬ ಸಬ್ ರಿಜಿಸ್ಟ್ರಾರ್, ಜಿಲ್ಲಾ ರಿಜಿಸ್ಟ್ರಾರ್ ಗೆ ಪತ್ರ ಬರೆದು ದಾಖಲೆಗಳ ಪರಿಶೀಲನೆ ನಮ್ಮ ಜವಾಬ್ದಾರಿ ಅಲ್ಲ ಎಂದಿದ್ದಾರೆ. ಬಿಬಿಎಂಪಿ ದೂರು‌ ಕೊಟ್ಟ ಮೇಲೂ ರಾಜಾರೋಷವಾಗಿ ನೋಂದಣಿ ಮಾಡಲಾಗುತ್ತಿದೆಯಲ್ಲಾ? ಎಂದು ಕಿಡಿ ಕಾರಿದರು.

ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್, ಖಾಸಗಿ ಬಡಾವಣೆ ನಿರ್ಮಾಣ ಅನಧಿಕೃತವಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಬಡಾವಣೆ ಮಾಡದ್ದು, ಕಾನೂನಾತ್ಮಕವಾಗಿ ಪಾಲಿಕೆಯವರೂ ದೂರು ನೀಡಿದ್ದಾರೆ.‌ ಆದರೂ ಸಬ್ ರಿಜಿಸ್ಟ್ರಾರ್ ಗಳು ಶಾಮಿಲಾಗಿ ನೋಂದಣಿ ಮಾಡಿದ್ದಾರೆ ಎಂದು ವಿವರಿಸಿದರು.

ಈ ಸಂಬಂಧ ಕೂಡಲೇ ಇಬ್ಬರು ಸಬ್ ರಿಜಿಸ್ಟ್ರಾರ್ ಗಳನ್ನು ಅಮಾನತು ಮಾಡಿದ್ದೇನೆ. ಅವರ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ.‌ ಈ ಬಗ್ಗೆ ಯಾವ ತನಿಖೆ ಮಾಡಲೂ ನಾನು ಸಿದ್ಧನಿದ್ದೇನೆ. ಸಿಒಡಿಗೆ ಕೊಡಲು ಹೇಳಿದರೆ ಸಿಒಡಿಗೂ ಕೊಡಲು ಸಿದ್ಧನಿದ್ದೇನೆ. ಆ ಬಿಲ್ಡರ್ ಈ ಮುಂಚೆನೂ ಈ ರೀತಿ ಮಾಡಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಂಡು ಮಟ್ಟ ಹಾಕಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಖಾಸಗಿ ಆಸ್ಪತ್ರೆಯನ್ನು ಚಿಕ್ಕಬಳ್ಳಾಪುರಕ್ಕೆ ಮಾತ್ರ ಸೀಮಿತ ಮಾಡಿದ್ದು ತಪ್ಪು: ಕೃಷ್ಣಭೈರೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.