ETV Bharat / state

ಸಿನಿಮಾ ನೋಡಿ ಸ್ಕೆಚ್: ತಾಯಿ, ಪ್ರಿಯಕರನ ಜೊತೆಗೂಡಿ ತಂದೆಯನ್ನೇ ಕೊಂದ ‌ಮಗಳು

ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿ ಕಳೆದ ಒಂದು ವಾರಗಳ ಹಿಂದೆ ಸುಧೀರ್ ಕಾಂಬಳೆ(57) ಎಂಬುವವರ ಹತ್ಯೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಆರೋಪಿಗಳು
ಕೊಲೆ ಆರೋಪಿಗಳು
author img

By

Published : Sep 29, 2022, 4:45 PM IST

Updated : Sep 29, 2022, 7:11 PM IST

ಬೆಳಗಾವಿ: ನಗರದ ಕ್ಯಾಂಪ್ ಪ್ರದೇಶದಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಯುವತಿಯೊಬ್ಬಳು ತನ್ನ ತಾಯಿ, ಪ್ರಿಯಕರನ ಜೊತೆ ಸೇರಿ ತಂದೆಯನ್ನೇ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ನಗರದ ಕ್ಯಾಂಪ್ ಪ್ರದೇಶದಲ್ಲಿ ಸೆ.17 ರಂದು ರಿಯಲ್ ಎಸ್ಟೇಟ್ ಉದ್ಯಮಿ ಸುಧೀರ್ ಕಾಂಬಳೆ(57) ಎಂಬುವವರ ಹತ್ಯೆಯಾಗಿತ್ತು. ಹತ್ಯೆ ಪ್ರಕರಣದ ಸಂಬಂಧ ಕೊಲೆಯಾದವನ ಹೆಂಡತಿ ರೋಹಿಣಿ ಕಾಂಬಳೆ, ಆತನ ಮಗಳು ಸ್ನೇಹಾ ಕಾಂಬಳೆ ಹಾಗೂ ಸ್ನೇಹಾಳ ಪ್ರಿಯಕರ ಮಹಾರಾಷ್ಟ್ರದ ಪುಣಾ ಮೂಲದ ಅಕ್ಷಯ ವಿಠ್ಠಕರ್ (25) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಪುಣೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡ್ತಿದ್ದ ಸ್ನೇಹಾಗೆ ಹೋಟೆಲ್ ರಿಷಪ್ಷನ್ ಆಗಿ ಪುಣೆಯಲ್ಲಿ ಕೆಲಸ ಮಾಡ್ತಿದ್ದ ಅಕ್ಷಯ್ ಪರಿಚಯವಾಗಿತ್ತು. ಬಳಿಕ ಇಬ್ಬರೂ ಪ್ರೀತಿಸುತ್ತಿದ್ದರು.

ಡಿಸಿಪಿ ರವೀಂದ್ರ ಗಡಾದಿ ಅವರು ಮಾತನಾಡಿರುವುದು

ಪ್ರಕರಣದ ಹಿನ್ನೆಲೆ: ಮೂಲತಃ ಬೆಳಗಾವಿ ನಗರದ ನಿವಾಸಿ‌ ಆಗಿರುವ ಸುಧೀರ್ ಕಾಂಬಳೆ (57) ಕುಟುಂಬ ನಿರ್ವಹಣೆಗೆ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಸಂದರ್ಭದಲ್ಲಿ ಸುದೀರ್ ಭಾರತಕ್ಕೆ ಮರಳಿ ಬೆಳಗಾವಿಯಲ್ಲಿ ಕುಟುಂಬದ ಜೊತೆ ನೆಲೆಸಿದ್ರು. ಸುದೀರ್ ಬೆಳಗಾವಿಗೆ ಮರಳಿದ ಬಳಿಕ ಹೆಂಡತಿಗೆ ಕಿರಕುಳ ನೀಡುತ್ತಿದ್ದನಂತೆ. ಈ ಬಗ್ಗೆ ರೋಹಿಣಿ ತನ್ನ ಮಗಳಿಗೆ ಹೇಳಿಕೊಂಡಿದ್ದಳಂತೆ. ಜೊತೆಗೆ ಮಗಳ ಮತ್ತು ಆಕೆಯ ಪ್ರಿಯಕರನ ಮಧ್ಯದ ಸಂಭಾಷಣೆಗೆ ಸುಧೀರ್ ಅಡ್ಡಿಯಾಗಿದ್ದನಂತೆ. ಇದರಿಂದಾಗಿ ಅಪ್ಪನನ್ನು ಮುಗಿಸಬೇಕು ಅಂತಾ ಮಗಳ ಪ್ಲ್ಯಾನ್ ಹಾಕಿದ್ದಳು. ಈ ಬಗ್ಗೆ ತನ್ನ ಪ್ರಿಯಕರ ಅಕ್ಷಯಗೆ ತಿಳಿಸಿದ್ದಳು. ಆ ಬಳಿಕ ತಂದೆಯ ಕೊಲೆಗೆ ನಿರ್ಧರಿಸಿದ್ದರು. ಈ ವಿಷಯವನ್ನು ಮಗಳು ತನ್ನ ತಾಯಿಗೂ ಹೇಳಿದ ಬಳಿಕ ಮೂವರು ಸ್ಕೆಚ್ ಹಾಕಿದ್ದರು.

ಅದಕ್ಕೆ ಪೂರಕವಾಗಿ ದೃಶ್ಯಂ ಸಿನಿಮಾವನ್ನು ಐದರಿಂ‌ದ ಹತ್ತು ಸಾರಿ ನೋಡಿದ್ದರಂತೆ. ಕೊಲೆ ಮಾಡಿ ಸಿನಿಮಾ ಮಾದರಿಯಲ್ಲಿ ಪಾರಾಗುವುದು ಹೇಗೆ ಎಂಬ ಉಪಾಯವನ್ನು ಮೂವರು ಕಂಡುಕೊಂಡಿದ್ದರಂತೆ. ಅದರಂತೆ ಕೊಲೆಗೆ ಎರಡು ದಿನ ಮುನ್ನ ಸೆ.15ರಂದು ಪುಣಾದಿಂದ ಅಕ್ಷಯ್ ಬಂದು ಬೆಳಗಾವಿಯ ಲಾಡ್ಜ್​ನಲ್ಲಿದ್ದ. ಸುಧೀರ್ ಕಾಂಬಳೆ ಅವರು ಸೆಪ್ಟಂಬರ್ 17ರಂದು ಮನೆಯ ಮೇಲ್ಮಹಡಿಯ ರೂಮ್‌ನಲ್ಲಿ ಮಲಗಿದ್ದರು. ಅಂದು ಬೆಳಗಿನ ಜಾವ ಹಿಂಬಾಗಿಲಿನಿಂದ ಅಕ್ಷಯ್ ಮನೆಗೆ ಬಂದಿದ್ದ. ಬಳಿಕ ಮೂವರು ಸೇರಿ ಸುಧೀರ್ ಹೊಟ್ಟೆ, ಕತ್ತು, ಕೈ, ಮುಖಕ್ಕೆ ಚಾಕುವಿನಿಂದ ಇರಿದು ಬರ್ಬರ ಹತ್ಯೆಗೈದಿದ್ದರು. ಘಟನೆಯ ಬಳಿಕ ಅಕ್ಷಯ್ ಪುಣೆಗೆ ವಾಪಸ್ ಹೋಗಿದ್ದ. ಮರುದಿನ ಬೆಳಿಗ್ಗೆ ಯಾರೋ ಕೊಲೆ ಮಾಡಿದ್ದಾರೆ ಅಂತಾ ತಾಯಿ - ಮಗಳು ಪ್ರಕರಣ ದಾಖಲಿಸಿದ್ದರು ಎಂದು ಡಿಸಿಪಿ ರವೀಂದ್ರ ಗಡಾದ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಕ್ಯಾಂಪ್ ಪೊಲೀಸರು ಡಿಸಿಪಿ ರವೀಂದ್ರ ಗಡಾದಿ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಓದಿ: ಎಸ್​ಡಿಪಿಐ ಮತ್ತು ಪಿಎಫ್​​ಐ ಕಚೇರಿಗಳ ಮೇಲೆ ಪೊಲೀಸರ ದಾಳಿ

Last Updated : Sep 29, 2022, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.