ETV Bharat / state

ಪ್ರಚೋದನಾಕಾರಿ ಸಂದೇಶ ಕಳುಹಿಸಿದರೆ ಕಠಿಣ ಕ್ರಮ: ಸಿಪಿಐ ಸತಾರೆ - ಸಿಪಿಐ ಶ್ರೀಧರ ಸತಾರೆ

ಈದ್ ಮಿಲಾದ್ ಹಾಗೂ ಟಿಪ್ಪು ಜಯಂತಿ ಮತ್ತು ಅಯೋಧ್ಯ ತೀರ್ಪು ಪ್ರಯುಕ್ತ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಪೊಲೀಸರು ಶಾಂತಿ ಸಭೆ ನಡೆಸಿದರು.

ಸಿಪಿಐ ಸತಾರೆ
author img

By

Published : Nov 8, 2019, 9:20 PM IST

ಬೆಳಗಾವಿ/ಗೋಕಾಕ್: ಗೋಕಾಕ್​ ನಗರದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಸಿಪಿಐ ಶ್ರೀಧರ್​ ಸತಾರೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿಯಾದಂತಹ ಸಂದೇಶವನ್ನು ಯಾರು ಹಾಕಬಾರದು. ಅಂತಹ ಸಂದೇಶವನ್ನು ಯಾರಾದರೂ ಹಾಕಿದರೆ ನಮ್ಮ ಗಮನಕ್ಕೆ ತರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಅವಕಾಶವಿಲ್ಲ ಎಂದರು.

ಸಿಪಿಐ ಸತಾರೆ

ಈದ್ ಮಿಲಾದ್​ನಂದು ಮೆರವಣಿಗೆ ಮಾಡಲು ನಮ್ಮ ಅಭ್ಯಂತರವಿಲ್ಲ. ಕಿಡಿಗೇಡಿಗಳು ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ಆಗುವಂತಹ ಸಂದೇಶ ಕಳುಹಿಸಿ ಶಾಂತಿ ಕೆಡಿಸಲು ನೋಡುತ್ತಾರೆ, ಅಂತವರನ್ನು ನಾವು ಬಿಡುವುದಿಲ್ಲ. ಅಯೋಧ್ಯಾ ತೀರ್ಪು ಯಾರ ಪರವಾಗಿ ಬಂದರೂ ಎಲ್ಲರೂ ಸ್ವಾಗತಿಸಬೇಕು, ಯಾರೂ ವಿಜೃಂಭಣೆ ಮಾಡಬಾರದು ಎಂದರು.

ಪ್ರಚೋದನಕಾರಿ ಸಂದೇಶ ಹಬ್ಬಿಸಿದರೆ ಶಿಸ್ತು ಕ್ರಮ:ಡಿ.ಟಿ.ಪ್ರಭು ಎಚ್ಚರಿಕೆ

ಮುಂದೆ ಬರುವ ಅಯೋಧ್ಯೆ ತೀರ್ಪಿನ ಬಗ್ಗೆ ಯಾರು ಯಾವುದೇ ತರಹದ ಸಮಾಜವನ್ನು ಕೆರಳಿಸುವ ಸಂದೇಶಗಳನ್ನು ಅಂತರ್ ಜಾಲಗಳಲ್ಲಿ ಹರಡಿಸಬಾರದು. ಅಂತಹ ಚಟುವಟಿಕೆಗಳಲ್ಲಿ ತೊಡಗಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗೋಕಾಕ್ ಡಿ.ವೈ.ಎಸ್.ಪಿ ಡಿ.ಟಿ.ಪ್ರಭು ಎಚ್ಚರಿಕೆ ನೀಡಿದ್ದಾರೆ. ತಾಲೂಕಿನ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಕರೆದ ಈದ್ ಮಿಲಾದ್ ಹಾಗೂ ಟಿಪ್ಪು ಜಯಂತಿ ಮತ್ತು ಅಯೋಧ್ಯೆ ತೀರ್ಪಿನ ಕುರಿತು ಕರೆಯಲಾದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಅಯೋಧ್ಯೆ ತೀರ್ಪಿಗಾಗಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಈ ಕುರಿತು ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸಪ್‍ಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಯುವಕರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಹೇಳಿದರು.

ಅಯೋಧ್ಯೆ ತೀರ್ಪು ಹಿನ್ನಲೆ ಬೆಳಗಾವಿಯಲ್ಲಿ ಶಾಂತಿ ಸಭೆ

ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆ ನಡೆದಿದ್ದು, ನಗರದ ವಿವಿಧ ಸಮುದಾಯದ ಮುಖಂಡರು ಭಾಗವಹಿಸಿ, ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಎಲ್ಲರೂ ಸರ್ವ ಸಮ್ಮತದಿಂದ ಸ್ವೀಕರಿಸುವುದರ ಜೊತೆಗೆ, ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಕೇಳಿಕೊಂಡಿದ್ದಾರೆ.

Intro:ಪ್ರಚೋದನಕಾರಿ ಸಂದೇಶವನ್ನು ಯಾರು ಹಾಕಬಾರದು-ಸಿಪಿಐ ಸತಾರೆBody:ಗೋಕಾಕ: ಈದ್ ಮಿಲಾದ ಹಾಗೂ ಟಿಪ್ಪು ಜಯಂತಿ ಮತ್ತು ಅಯೋಧ್ಯ ತೀರ್ಪು ಪ್ರಯುಕ್ತ ಗೋಕಾಕ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಶಾಂತಿ ಸಭೆ ಜರುಗಿತ್ತು.

ನಗರದ ಗ್ರಾಮೀಣ ಠಾಣೆಯಲ್ಲಿ ಸಿಪಿಐ ಶ್ರೀಧರ ಸತಾರೆ ಅಧ್ಯಕ್ಷತೆಯಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿಯಾದಂತಹ ಸಂದೇಶವನ್ನು ಯಾರು ಹಾಕಬಾರದು. ಅಂತಹ ಸಂದೇಶವನ್ನು ಯಾರಾದರೂ ಹಾಕಿದರೆ ನಮ್ಮ ಗಮನಕ್ಕೆ ತರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಅವಕಾಶ ಕೊಡುವುದಿಲ್ಲ. ಸರ್ಕಾರ ಈ ಬಗ್ಗೆ ನಿರ್ಬಂಧ ಮಾಡಿದೆ.

ಈದ್ ಮಿಲಾದದಂದು ಮೆರವಣಗೆ ಮಾಡಲು ನಮ್ಮ ಅಭ್ಯಂತರವಿಲ್ಲ. ಕಿಡಿಗೇಡಿಗಳು ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ಆಗುವಂತಹ ಸಂದೇಶ ಕಳುಹಿಸಿ ಶಾಂತಿ ಕೆಡಿಸಲು ನೋಡುತ್ತಾರೆ, ಅಂತವರನ್ನು ನಾವು ಬಿಡುವುದಿಲ್ಲ. ಅಯ್ಯೋಧ ತೀರ್ಪು ಯಾರ ಪರವಾಗಿ ಬಂದರು ಎಲ್ಲರೂ ಸ್ವಾಗತಿಸಿ, ಯಾರು ವಿಜೃಂಭಣೆ ಮಾಡಬಾರದು ಎಂದು ತಿಳಿಸಿದರು.

KN_GKK_03_08_SHANTIPALANA_SHABE_VISAL-1_KAC10009Conclusion:ಗೋಕಾಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.