ETV Bharat / state

ನೂತನ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರ ಮುಂದಿರುವ ಸವಾಲುಗಳೇನು? - undefined

ನೂತನ ಸಂಸದರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಮುಂದೆ ಪ್ರತ್ಯೇಕ ಜಿಲ್ಲೆ ನಿರ್ಮಾಣ ಹಾಗೂ ಜಿಲ್ಲೆಗೆ ನೀರಾವರಿ ವ್ಯವಸ್ಥೆ ಒದಗಿಸಬೇಕಾದಂತಹ ಹಲವು ಸವಾಲುಗಳಿವೆ.

ಅಣ್ಣಾಸಾಹೇಬ ಜೊಲ್ಲೆ
author img

By

Published : May 26, 2019, 10:34 PM IST

ಚಿಕ್ಕೋಡಿ: ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಪ್ರಕಾಶ ಹುಕ್ಕೇರಿ ಅವರನ್ನು ಒಂದು ಲಕ್ಷಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿ, ಕ್ಷೇತ್ರದಲ್ಲಿ ನೂತನ ಸಂಸದರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಅವರ ಮುಂದಿರುವ ಪ್ರಮುಖ ಬೇಡಿಕೆಯೇ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸುವುದು.

ಹೌದು, ಬೆಳಗಾವಿ ಜಿಲ್ಲೆಯು ಭೌಗೋಳಿಕವಾಗಿ ದೊಡ್ಡ ಜಿಲ್ಲಾ ಕೇಂದ್ರವಾಗಿದ್ದು ಜಿಲ್ಲೆಯನ್ನು ವಿಭಜಿಸಿ ನೂತನ ಚಿಕ್ಕೋಡಿ ಜಿಲ್ಲೆಯನ್ನು ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆ ಚಿಕ್ಕೋಡಿ ಭಾಗದ ಜನರದ್ದಾಗಿದೆ. ಆದರೆ, ಸಂಘಟನೆಯ ಮುಖಂಡರಲ್ಲಿ ಒಮ್ಮತ ಮೂಡದ ಕಾರಣ ಜಿಲ್ಲಾ ವಿಭಜನೆ ಸಾಧ್ಯವಾಗಿಲ್ಲ. ನೂತನ ಸಂಸದರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕಿ ನೂತನ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನ ಮಾಡುತ್ತಾರಾ ಎಂದು ಕಾಯ್ದು ನೋಡಬೇಕಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಬಹುತೇಕ ನೀರಾವರಿ ವಂಚಿತ ಪ್ರದೇಶವಾಗಿದ್ದರಿಂದ ಈ ಭಾಗದ ರೈತರು ಮಳೆ ಆಶ್ರಿತ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಸರಿಯಾದ ನೀರಿನ ಸೌಲಭ್ಯವಿಲ್ಲ. ಅದಕ್ಕಾಗಿ ನೂತನ ಸಂಸದರು ನೀರಾವರಿ ಸೌಲಭ್ಯ ಮಾಡಿಕೊಡಬೇಕು ಎನ್ನುವುದು ಸಂಸದರಿಗೆ ರೈತರ ಬೇಡಿಕೆ ಆಗಿದೆ.

ಅದರ ಜೊತೆಗೆ ಕೃಷ್ಣಾ ನದಿ ಬೇಸಿಗೆಯಲ್ಲಿ ಸಂಪೂರ್ಣವಾಗಿ ಬತ್ತುತ್ತಿದೆ. ಕೊಯ್ನಾ ಜಲಾಶಯದಿಂದ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ನಿರಾಕರಿಸುತ್ತದೆ. ಅದಕ್ಕಾಗಿ ಮಳೆಗಾಲದಲ್ಲಿ ಕರ್ನಾಟಕ ಭಾಗದ ಡ್ಯಾಂಗಳಲ್ಲಿ ನೀರನ್ನು ಶೇಖರಣೆ ಮಾಡುವ ವ್ಯವಸ್ಥೆ ಮಾಡಬೇಕಿದೆ.

ಹೀಗೆ ಹಲವಾರು ಸಮಸ್ಯೆಗಳ ಸುರಿಮಳೆ ಇದ್ದು, ಐದು ವರ್ಷದ ತಮ್ಮ ಆಡಳಿತ ಅವಧಿಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿ ಮಾಡಿ ಗಡಿಭಾಗದ ಜನರಿಗೆ ನೂತನ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅನುಕೂಲ ಕಲ್ಪಿಸುತ್ತಾರೆ ಎಂಬ ಜನರ ವಿಶ್ವಾಸ ನಿಜ ಗೊಳಿಸುತ್ತಾರಾ ಎಂಬುದನ್ನು ಕಾಯ್ದು ನೋಡಬೇಕಿದೆ.

Intro:ನೂತನ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರ ಮುಂದಿರುವ ಸವಾಲುಗಳೇನು?Body:

ಚಿಕ್ಕೋಡಿ :
ಸ್ಟೋರಿ

ತೀವ್ರ ಜಿದ್ದಾಜಿದ್ದಿನ ನಡುವೆ ನಡೆದ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಸೋಲಿಲದ ಸರದಾರ ಪ್ರಕಾಶ ಹುಕ್ಕೇರಿ ಅವರನ್ನು ಒಂದು ಲಕ್ಷಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿ ಕ್ಷೇತ್ರದಲ್ಲಿ ನೂತನ ಸಂಸದರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಅವರ ಮುಂದಿರುವ ಪ್ರಮುಖ ಬೇಡಿಕೆಯೇ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸುವುದು.

ಬೆಳಗಾವಿ ಜಿಲ್ಲೆಯು ಭೌಗೋಳಿಕವಾಗಿ ದೊಡ್ಡ ಜಿಲ್ಲಾ ಕೇಂದ್ರವಾಗಿದ್ದು ಜಿಲ್ಲೆಯನ್ನು ವಿಭಜಿಸಿ ನೂತನ ಚಿಕ್ಕೋಡಿ ಜಿಲ್ಲೆಯನ್ನು ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆ ಚಿಕ್ಕೋಡಿ ಭಾಗದ ಜನರದ್ದಾಗಿದೆ. ಆದರೆ, ಸಂಘಟನೆಯ ಮುಖಂಡರಲ್ಲಿ ಒಮ್ಮತ ಮೂಡದ ಕಾರಣ ಜಿಲ್ಲಾ ವಿಭಜನೆ ಸಾಧ್ಯವಾಗಿಲ್ಲ ನೂತನ ಸಂಸದರಾಗಿ ಆಯ್ಕೆಯಾದ ಅಣ್ಣಾಸಾಬ ಜೊಲ್ಲೆ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಲು ಸರಕಾರದ ಮೇಲೆ ಒತ್ತಡ ಹಾಕಿ ನೂತನ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನ ಮಾಡುತ್ತಾರೆ ಎಂಬುವುದು ಕಾಯ್ದು ನೋಡಬೇಕಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಾಗಿ ನೀರಾವರಿ ವಂಚಿತ ಪ್ರದೇಶವಾಗಿದ್ದರಿಂದ ಈ ಭಾಗದ ರೈತರು ಮಳೆ ಆಶ್ರಿತ ಬೆಳೆಗಳನ್ನು ಮಾತ್ರ ಬೆಳೆಗಳನ್ನು ಬೆಳೆಯುತ್ತಿದ್ದು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರಿಯಾದ ನೀರಿನ ಸೌಲಭ್ಯವಿಲ್ಲ ಇದರಿಂದ ರೈತರು ಮಳೆ ಆಶ್ರಿತ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದಾರೆ. ಅದಕ್ಕಾಗಿ ನೂತನ ಸಂಸದರು ನೀರಾವರಿ ಸೌಲಭ್ಯ ಮಾಡಿಕೊಡಬೇಕು ಎನ್ನುವುದು ಸಂಸದರಿಗೆ ರೈತರ ಬೇಡಿಕೆ ಆಗಿದೆ.

ಅದರ ಜೊತೆಗೆ ಕೃಷ್ಣಾ ನದಿ ಬೇಸಿಗೆಯಲ್ಲಿ ಸಂಪೂರ್ಣವಾಗಿ ಬತ್ತುತ್ತಿರುವುದರಿಂದ ಕೊನ್ನಾ ಜಲಾಶಯದಿಂದ ನೀರು ಬಿಡಲು ಮಹಾರಾಷ್ಟ್ರ ಸರಕಾರ ಬೇಸಿಗೆಯಲ್ಲೂ ನೀರು ಬಿಡಲು ನೀರಾಕರಿಸುತ್ತದೆ ಅದಕ್ಕಾಗಿ ಮಳೆಗಾಲದಲ್ಲಿ ಕರ್ನಾಟಕ ಭಾಗದ ಡ್ಯಾಂಗಳಲ್ಲಿ ನೀರನ್ನು ಶೇಖರಣೆ ಮಾಡುವ ವ್ಯವಸ್ಥೆ ಮಾಡಬೇಕಿದೆ.

ಹೀಗೆ ಹಲವವಾರು ಸಮಸ್ಯೆಗಳ ಸುರಿಮಳೆ ಇದ್ದು ಐದು ವರ್ಷದ ತಮ್ಮ ಆಡಳಿತ ಅವಧಿಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿ ಮಾಡಿ ಗಡಿಭಾಗದ ಜನರಿಗೆ ನೂತನ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅನುಕೂಲ ಕಲ್ಪಿಸುತ್ತಾರೆ ಎಂಬ ಜನರ ವಿಶ್ವಾಸ ನಿಜ ಗೊಳಿಸುತ್ತಾರಾ ಎಂಬುದನ್ನು ಕಾಯ್ದು ನೋಡಬೇಕಿದೆ.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.