ETV Bharat / state

ಅಂಗಡಿ ಪಾರ್ಥಿವ ಶರೀರ ಬೆಳಗಾವಿಗೆ ತರಲು ಮಾರ್ಗಸೂಚಿಗಳೇ ಅಡ್ಡಿಯಾದವು.. ಶೆಟ್ಟರ್​ ಭಾವುಕ - ಸುರೇಶ ಅಂಗಡಿ

ಅಂಗಡಿಯವರಿಗೆ ಅವರ ಆರೋಗ್ಯದ ಕಾಳಜಿಗಿಂತ ಜನರ ಸೇವೆಯೇ ಹೆಚ್ಚಾಗಿತ್ತು. ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಚಿವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದರೂ ಸಹ ಅವರಿಗೆ ಜನಸೇವೆ ಮೇಲೆಯೇ ಹೆಚ್ಚು ಆಸಕ್ತಿ ಇತ್ತು..

Jagadeesh Shettar
ಸಚಿವ ಜಗದೀಶ್​ ಶೆಟ್ಟರ್​ ಹೇಳಿಕೆ
author img

By

Published : Sep 25, 2020, 5:53 PM IST

ಬೆಳಗಾವಿ : ವಿಧಿವಶರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲು ಕೇಂದ್ರದ ಕೊರೊನಾ ಮಾರ್ಗಸೂಚಿಗಳೇ ಅಡ್ಡಿಯಾದವು ಎಂದು ಸಚಿವ ಜಗದೀಶ್ ಶೆಟ್ಟರ್ ಭಾವುಕರಾದರು.

ಸಚಿವ ಜಗದೀಶ್​ ಶೆಟ್ಟರ್​ ಹೇಳಿಕೆ

ಸುರೇಶ್‌ ಅಂಗಡಿಯವರ ನೆಂಟರಾದ ಜಗದೀಶ್‌ ಶೆಟ್ಟರ್‌ ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರೋ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸುರೇಶ್ ಅಂಗಡಿಯವರ ಪಾರ್ಥಿವ ಶರೀರ ಬೆಳಗಾವಿಗೆ ತರಲು ಸಾಕಷ್ಟು ಪ್ರಯತ್ನ ಮಾಡಿದ್ದೆವು. ಆದರೆ, ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಅಸಾಧ್ಯವಾಗಿದೆ. ಈ ಪ್ರಕಾರ ಅಂಗಡಿಯವರ ಅಂತ್ಯಕ್ರಿಯೆ ಅವರ ತವರಿನಲ್ಲಿ ಮಾಡಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುರೇಶ ಅಂಗಡಿ ನಿಧನ ನಮಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ನನ್ನ ಬೀಗರಾಗುವ ಮುನ್ನವೂ ಸಹ ನನ್ನ ಜೊತೆ ಆಪ್ತರಾಗಿದ್ದರು. ನಾನು, ಅವರು ಬೆಳಗಾವಿ ಜಿಲ್ಲೆಯಲ್ಲಿ ಹಗಲಿರುಳು ಓಡಾಡಿ ಪಕ್ಷ ಸಂಘಟನೆ ಮಾಡಿದ್ದೆವು. ಅಂಗಡಿಯವರಿಗೆ ಅವರ ಆರೋಗ್ಯದ ಕಾಳಜಿಗಿಂತ ಜನರ ಸೇವೆಯೇ ಹೆಚ್ಚಾಗಿತ್ತು. ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಚಿವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದರೂ ಸಹ ಅವರಿಗೆ ಜನಸೇವೆ ಮೇಲೆಯೇ ಹೆಚ್ಚು ಆಸಕ್ತಿ ಇತ್ತು.

ಸಚಿವರು ಆಸ್ಪತ್ರೆಗೆ ದಾಖಲಾದ ನಂತರ ನಾನು ನಿತ್ಯ ಪುತ್ರನ ಮೂಲಕ ವರದಿ ತರಿಸಿಕೊಳ್ಳುತ್ತಿದ್ದೆ. ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ಜನರಲ್ ವಾರ್ಡಿಗೆ ಶಿಫ್ಟ್ ಆಗಿದ್ದ ವೇಳೆ ಬಿಪಿ ಲೋ ಆಗಿ ಹೃದಯಾಘಾತವಾಯಿತು. ಆದರೆ, ಅವರು ಕೊರೊನಾದಿಂದ ಬಲಿಯಾಗ್ತಾರೆ ಎಂದು ಯಾರೂ ಸಹ ಊಹಿಸಿರಲಿಲ್ಲ ಎಂದು ಶೆಟ್ಟರ್​ ದುಃಖದಿಂದ ನುಡಿದರು. ಸುರೇಶ ಅಂಗಡಿ ನಮ್ಮಿಂದ ದೂರವಾಗಿದ್ದರೂ ಸಹ ಸದಾ ಜನಮಾನಸದಲ್ಲಿ ಇರುತ್ತಾರೆ. ಬೆಳಗಾವಿಯಲ್ಲಿ ಅವರ ಸ್ಮಾರಕ‌ ನಿರ್ಮಾಣದ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.