ETV Bharat / state

ಬೆಳಗಾವಿ ಡಿಸಿ ಕಚೇರಿಗೂ ತಟ್ಟಿದ ಬರದ ಎಫೆಕ್ಟ್​​​: ಟ್ಯಾಂಕರ್​ನಲ್ಲಿ ನೀರು ಪೂರೈಕೆ

ಕುಂದಾ ನಗರಿ ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಲೆದೂರಿದ್ದು, ಡಿಸಿ ಕಚೇರಿಗೆ ಟ್ಯಾಂಕರ್​ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

DC office
author img

By

Published : May 17, 2019, 5:41 PM IST

ಬೆಳಗಾವಿ: ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಾನಗರ ಪಾಲಿಕೆಯಿಂದ ಟ್ಯಾಂಕರ್ ಮ‌ೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಭೀಕರ ಬರಗಾಲದಿಂದ ಜನ ಕಂಗೆಟ್ಟಿದ್ದು, ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿವರೆಗೂ ಡಿಸಿ ಕಚೇರಿಯಲ್ಲಿ ಹಾಗೋ ಹೀಗೋ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿತ್ತು. ಆದರೆ ಬಿಸಿಲ ಧಗೆ ಹೆಚ್ಚಾಗಿದ್ದರಿಂದ ಕಚೇರಿ ಆವರಣದಲ್ಲಿರುವ ಗಿಡಗಳು ಒಣಗತೊಡಗಿದ್ದವು.

ಬೆಳಗಾವಿ ಡಿಸಿ ಕಚೇರಿ

ಮಹಾನಗರ ಪಾಲಿಕೆಯಿಂದ ನೀರು ಪೂರೈಸಲಾಗುತ್ತಿದ್ದು, ಟ್ಯಾಂಕರ್ ನೀರನ್ನೇ ಗಿಡಗಳಿಗೂ ಬಳಸಲಾಗುತ್ತಿದೆ. ಬೇಸಿಗೆ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೀರಿಗಾಗಿ ಜಿಲ್ಲೆಯ ಜನ ಪರಿತಪಿಸುವಂತಾಗಿದೆ.

ಜಿಲ್ಲಾಧಿಕಾರಿ ಕಚೇರಿಗು ತಟ್ಟಿದ ಬರಗಾಲದ ಬಿಸಿ : ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು ಬೆಳಗಾವಿ : ಭೀಕರ ಬರಗಾಲಕ್ಕೆ ಕಂಗೆಟ್ಟು ಹೋಗಿರುವ ಜನತೆ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇಂತಹ ಪರಿಸ್ತಿಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೂ ನೀರಿನ ಅಭಾವ ಕಾಡುತ್ತಿದ್ದು ಮಹಾನಗರ ಪಾಲಿಕೆಯಿಂದ ಟ್ಯಾಂಕರ್ ಮ‌ೂಲಕ ನೀರು ಹಾಕುವ ಕೆಲಸ ನಡೆಯುತ್ತಿದೆ. ಇಲ್ಲಿಯವರೆಗೂ ಜಿಲ್ಲಾಧಿಕಾರಿ ಕಚೇರಿಗೆ ನಳದ ಮೂಲಕ ನೀರು ಬಿಡುತ್ತಿದ್ದರು. ಆದರೆ ನಗರದಲ್ಲಿ ನೀರಿನ ಅಭಾವ ಕಾಡುತ್ತಿದ್ದು ಜಿಲ್ಲಾಧಿಕಾರಿ ಕಚೇರಿಗೂ ನೀರು ಬರುತ್ತಿಲ್ಲ. ಇದರಿಂದ ಡಿಸಿ ಕಚೇರು ಮುಂದಿರುವ ಗಿಡಗಳು ಒಣಗುತ್ತಿದ್ದು ಮಹಾನಗರ ಪಾಲಿಕೆ ಟ್ಯಾಂಕರ್ ಮೂಲಕ ನೀರು ಹಾಕುತ್ತಿದ್ದಾರೆ. ವಿನಾಯಕ ಮಠಪತಿ ಬೆಳಗಾವಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.