ETV Bharat / state

ತಗ್ಗುತ್ತಿದೆ ನವೀಲು ತೀರ್ಥದ ಒಳಹರಿವು: ಧುಮ್ಮಿಕ್ಕುತ್ತಿವೆ ರಾಜ್ಯ ಘಟಪ್ರಭಾ, ಮಲಪ್ರಭಾ ನದಿಗಳು - belgavi flood

ಶುಕ್ರವಾರ ಬೆಳಗಾವಿ ಜಿಲ್ಲೆಯಲ್ಲಿ ವರುಣ ಕೊಂಚ ಮರೆಯಾಗಿದ್ದು, ಸವದತ್ತಿ ತಾಲೂಕಿನ ನವಿಲು ತೀರ್ಥಜಲಾಶಯ ಒಳಹರಿವು ಗಮನಾರ್ಹವಾಗಿ ಕಡಿಮೆಯಾಗಿದೆ. ಘಟಪ್ರಭಾ, ಮಲಪ್ರಭಾ, ಕೃಷ್ಣಾ ನದಿಗಳು ಮೈತುಂಬಿ ಹರಿಯುತ್ತಿವೆ.

ಧುಮ್ಮಿಕ್ಕುತ್ತಿವೆ ರಾಜ್ಯದ ಪ್ರಮುಖ ನದಿಗಳು
author img

By

Published : Aug 9, 2019, 9:30 PM IST

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದ್ದು, ಹೊರಹರಿವು 85 ಸಾವಿರ ಕ್ಯೂಸೆಕ್​​​​ನಿಂದ 10 ಸಾವಿರಕ್ಕೆ ಇಳಿದಿದೆ. ಖಾನಾಪುರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಕಡಿಮೆಯಾಗಿದ್ದು, ಒಳಹರಿವು 45 ಸಾವಿರ ಕ್ಯೂಸೆಕ್​​​ಗೆ ಇಳಿದಿದೆ. 37.7 ಟಿಎಂಸಿ ಸಾಮರ್ಥ್ಯದ ಡ್ಯಾಮಿನಲ್ಲಿ ಈಗ 35 ಟಿಎಂಸಿ ನೀರು ಸಂಗ್ರಹವಾಗಿದೆ.

water flow down in navilu theerta
ಧುಮ್ಮಿಕ್ಕುತ್ತಿವೆ ರಾಜ್ಯದ ಪ್ರಮುಖ ನದಿಗಳು

ಹೊರಹರಿವು 1 ಲಕ್ಷದವರೆಗೂ ತಲುಪಿದ್ದರಿಂದ ಮುನವಳ್ಳಿ, ಬಸರಗಿ, ಶಿಂಧೋಗಿ, ಅರಟಗಲ್, ತೊರಗಲ್ಲ, ಹಾಲೊಳ್ಳಿ, ಸುನ್ನಾಳ, ತೊರಗಲ್ಲ, ರಾಮದುರ್ಗ ನಗರದ ಭಾಗಶಃ ಪ್ರದೇಶ, ಸುರೇಬಾನ, ಹಂಪಿಹೊಳಿ, ಹಲಗತ್ತಿ, ಕಿಲಬನೂರು ಮುಂತಾದ ಹಳ್ಳಿಗಳು ಜಲಾವೃತ್ತಗೊಂಡಿವೆ.

ಮಲಪ್ರಭಾ ಹೊರಹರಿವು ಕಡಿಮೆಯಾಗಿದ್ದರಿಂದ ಶನಿವಾರ, ಭಾನುವಾರ ಪ್ರವಾಹ ಪ್ರದೇಶದ ನೀರು ಹಿಂದೆ ಸರಿಯುವ ಸಾಧ್ಯತೆ ಇದೆ.

ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಮಹಾರಾಷ್ಟ್ರದ ಪ್ರದೇಶದಿಂದ 97 ಸಾವಿರ ಕ್ಯೂಸೆಕ್​​​ ನೀರು ಹರಿದು ಬರುತ್ತಿದ್ದು. ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಧೂಪದಾಳ ವೆಯರ್​ದಿಂದ 26,500, ಬಳ್ಳಾರಿ ನಾಲಾದಿಂದ 18,000, ಹಿರಣ್ಯಕೇಶಿಯಿಂದ 45 ಸಾವಿರ ಕ್ಯೂಸೆಕ್​​ ಸೇರಿ ಒಟ್ಟು ಸುಮಾರು ಎರಡು ಲಕ್ಷ ಕ್ಯೂಸೆಕ್​​ ನೀರು ಬಾಗಲಕೋಟೆಯತ್ತ ಹರಿಯುತ್ತಿದೆ.

ಮಹಾರಾಷ್ಟ್ರದ ಅಂಬೋಲಿ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಹಿಡ್ಕಲ್ ಜಲಾಶಯದಲ್ಲಿ 87 ಸಾವಿರದಿಂದ 97 ಸಾವಿರಕ್ಕೆ ಒಳಹರಿವು ಹೆಚ್ಚಿದೆ. ಮಲಪ್ರಭಾ, ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿದ್ದು. ಬೆಳಗಾವಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆಪೀಡಿತವಾಗಿವೆ. ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ, ಗೋಕಾಕ, ರಾಮದುರ್ಗ ತಾಲೂಕುಗಳ ನೂರಾರು ಗ್ರಾಮಗಳು ಹಾಗೂ ಬಾಗಲಕೋಟೆ ಜಿಲ್ಲೆಯ ಅನೇಕ ನಗರ ಮತ್ತು ಹಳ್ಳಿಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

Intro:Body:

gdgg bsy

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.