ETV Bharat / state

ಹುಡುಗಿಯರನ್ನು ಚುಡಾಯಿಸುತ್ತಿದ್ದ ಯುವಕನ ತಲೆ ಬೋಳಿಸಿದ ಗ್ರಾಮಸ್ಥರು - A man sending vulgar messages to ladies

ಮಹಿಳೆಯರಿಗೆ ವಾಟ್ಸ್​ಆಪ್ ​(WhatsApp) ಮೂಲಕ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಯುವಕನನ್ನು ಹಿಡಿದ ಗ್ರಾಮಸ್ಥರು, ಆತನ ತಲೆ ಬೋಳಿಸಿದ್ದಾರೆ.

villagers punished a man by shaving his head
ಯುವಕನ ತಲೆ ಬೋಳಿಸಿದ ಗ್ರಾಮಸ್ಥರು
author img

By

Published : Aug 23, 2021, 9:22 AM IST

ಅಥಣಿ: ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕನಿಗೆ ಗ್ರಾಮಸ್ಥರೇ ಸೇರಿ ತಲೆ, ಮೀಸೆ ಬೋಳಿಸಿದ ಘಟನೆ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ನಡೆದಿದೆ.

ಸುಧಾಕರ್ ಡುಮ್ಮನವರ್ ಎಂಬಾತ ಗ್ರಾಮದ ಕೆಲವು ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಯುವತಿಯರನ್ನು ಹಿಂಬಾಲಿಸಿ, ಮೊಬೈಲ್ ನಂಬರ್ ಪಡೆದುಕೊಂಡು ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಯುವಕನ ತಲೆ ಬೋಳಿಸಿದ ಮಹಿಷವಾಡಗಿ ಗ್ರಾಮಸ್ಥರು

ಈ ಹಿಂದೆಯೇ ಯುವಕನಿಗೆ ಗ್ರಾಮದ ಹಿರಿಯರು ಹಲವಾರು ಬಾರಿ ಬುದ್ಧಿವಾದ ಹೇಳಿದರೂ ಕೂಡ ಹಳೇ ಚಾಳಿಯನ್ನೇ ಮುಂದುವರೆಸಿದ್ದ. ಪರಿಣಾಮ ಇದೀಗ ತಲೆ ಬೋಳಿಸಿ ಗ್ರಾಮದಿಂದ ಹೊರಹಾಕಿದ್ದಾರೆ.

ತಲೆ ಬೋಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ನೆಟ್ಟಿಗರು ಅಮಾನವೀಯ ಕೃತ್ಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.