ETV Bharat / state

ಮಂಗಗಳ ಕಾಟಕ್ಕೆ ಬೇಸತ್ತ ಸೌಂದಲಗಾ ಗ್ರಾಮಸ್ಥರು! - ಚಿಕ್ಕೋಡಿಯಲ್ಲಿ ಮಂಗಗಳ ಕಾಟ

ಚಿಕ್ಕೋಡಿ ತಾಲೂಕು ಸೌಂದಲಗಾ ಗ್ರಾಮದಲ್ಲಿ ಮಂಗಗಳ ಉಪಟಳ ಹೆಚ್ಚಾಗುತ್ತಿದ್ದು, ಮನೆಗಳಿಗೆ ನುಗ್ಗಿ ಚಿಕ್ಕ ಮಕ್ಕಳಿಗೆ, ಮಹಿಳೆಯರ ಮೇಲೆ ಹಲ್ಲೆ ನಡಸುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.

monkeys problem
ಮಂಗಗಳ ಕಾಟ
author img

By

Published : Sep 2, 2020, 12:29 AM IST

ಚಿಕ್ಕೋಡಿ: ಕಳೆದ ನಾಲ್ಕೈದು ತಿಂಗಳಿಂದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸೌಂದಲಗಾ ಗ್ರಾಮದಲ್ಲಿ ಪ್ರತಿದಿನ ಮಂಗಗಳು ಸಾರ್ವಜನಿಕರಿಗೆ ಕಾಟ ಕೊಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಂಗಗಳ ಕಾಟ

ಇದರಿಂದ ಬೇಸತ್ತ ಸಾರ್ವಜನಿಕರು ಸೌಂದಲಗಾ ಆಡಳಿತ ಅಧಿಕಾರಿ ರೇವತಿ ಮಠದ ಅವರಿಗೆ ಮಂಗಗಳನ್ನು ಹಿಡಿದುಕೊಂಡು ಹೋಗಲು‌ ಅರಣ್ಯ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಸಲ್ಲಿಸಿದರು.

ಸೌಂದಲಗಾ ಗ್ರಾಮದಲ್ಲಿ ಮಂಗಗಳು ತಂಡೋಪ ತಂಡವಾಗಿ ತಿರುಗಾಡುತ್ತಿದ್ದು ಗ್ರಾಮಸ್ಥರ ನಿದ್ದೆಕೆಡಿಸಿದೆ. ಹಾಡುಹಗಲೆ ಮನೆಗಳಿಗೆ ನುಗ್ಗಿ ಚಿಕ್ಕ ಮಕ್ಕಳಿಗೆ, ಮಹಿಳೆಯರಿಗೆ ಅಂಜಿಕೆ ಹಾಕುವುದರ ಜೊತೆಗೆ ಹಲ್ಲೆ ಮಾಡಲು ಮುಂದಾಗುತ್ತಿವೆ. ದಿನದಿಂದ ದಿನಕ್ಕೆ ಮಂಗಗಳ ಉಪಟಳ ಹೆಚ್ಚಾಗಿದ್ದು ಇದರಿಂದಾಗಿ ಗ್ರಾಮದಲ್ಲಿ ಮಂಗಗಳ ಭೀತಿ ಉಂಟಾಗಿದೆ. ಇನ್ನು ಗ್ರಾಮಸ್ಥರ ಸಮಸ್ಯೆ ಆಲಿಸಿದ ಪಂಚಾಯ್ತಿ ಆಡಳಿತಾಧಿಕಾರಿ ಸೌಂದಲಗಾ ಪಂಚಾಯತಿ ವತಿಯಿಂದ ಅರಣ್ಯ ಇಲಾಖೆಗೆ ಈ ಬಗ್ಗೆ ತಿಳಿಸಿ ಮಂಗಗಳನ್ನು ಹಿಡಿಸುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.