ETV Bharat / state

ಹುಬ್ಬಳ್ಳಿ, ಬೆಳಗಾವಿಯಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದವರ ವಾಹನಗಳು ಮುಲಾಜಿಲ್ಲದೇ ಸೀಜ್​​ - ಬೆಕಾಬಿಟ್ಟಿ ಓಡಾಡುತ್ತಿದ್ದ ವಾಹನಗಳು

ಕಾರಿನ ಸವಾರನೊಬ್ಬ ನಕಲಿ ಪಾಸ್ ಹಚ್ಚಿಕೊಂಡು ಹೋಗುತ್ತಿದ್ದ. ಕಮಿಷನರ್ ಅನುಮಾನಗೊಂಡು ಸಂಬಂಧಿಸಿದ ಕಚೇರಿಗೆ ವಿಚಾರಿಸಿದಾಗ ಯಾವುದೇ ಪಾಸ್ ಕೊಟ್ಟಿಲ್ಲ ಎಂದು ತಿಳಿದಿದ್ದು, ಆ ವ್ಯಕ್ತಿಯ ಮೇಲೆ ಕಠಿಣ ಕ್ರಮ ಕೈಗೊಂಡು ಕಾರ್‌ ಸೀಜ್ ಮಾಡಿದರು.

ಹುಬ್ಬಳ್ಳಿ, ಬೆಳಗಾವಿ
ಹುಬ್ಬಳ್ಳಿ, ಬೆಳಗಾವಿ
author img

By

Published : May 10, 2021, 5:29 PM IST

Updated : May 10, 2021, 6:00 PM IST

ಹುಬ್ಬಳ್ಳಿ/ಬೆಳಗಾವಿ: ಇಂದಿನಿಂದ ಲಾಕ್ ಡೌನ್ ಜಾರಿ ಹಿನ್ನೆಲೆ ಅನಗತ್ಯವಾಗಿ ಓಡಾಡುವ ಬೈಕ್ ಸವಾರರಿಗೆ ಹುಬ್ಬಳ್ಳಿ, ಬೆಳಗಾವಿ ‌ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಬೆಳಗ್ಗೆಯಿಂದಲೆ ಫೀಲ್ಡ್​ಗೆ ಇಳಿದ ಪೊಲೀಸರು ವಾಹನ ಸವಾರರಿಗೆ ಶಾಕ್ ಕೊಟ್ಟಿದ್ದಾರೆ. ಕೊರೊನಾ ನಿಯಮ ಗಾಳಿಗೆ ತೂರಿ ಸಮಂಜಸ ಕಾರಣವಿಲ್ಲದೇ ಓಡಾಡುವರರ ಬೈಕ್ ಸೀಜ್ ಮಾಡಿದ್ದಾರೆ. ಇನ್ನು ಕೆಲವರಿಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.

ನಖಲಿ ಪಾಸ್ ಮಾಡಿಸಿದ್ದವನ ಕಾರ್ ಸೀಜ್
ಹುಬ್ಬಳ್ಳಿ-ಧಾರವಾಡ ಕಮಿಷನರ್ ಲಾಬುರಾಮ ನಗರದ ಕೇಶ್ವಾಪೂರ ಸರ್ಕಲ್​ನಲ್ಲಿ ವಾಹನಗಳ ಕಾರ್ಯಾಚರಣೆ ಮಾಡುವ ವೇಳೆ, ಕಾರಿನ ಸವಾರನೊಬ್ಬ ನಖಲಿ ಪಾಸ್ ಹಚ್ಚಿಕೊಂಡು ಹೋಗುತ್ತಿದ್ದ. ಕಮಿಷನರ್ ಅನುಮಾನಗೊಂಡು ಸಂಬಂಧಿಸಿದ ಕಚೇರಿಗೆ ವಿಚಾರಿಸಿದಾಗ ಯಾವುದೇ ಪಾಸ್ ಕೊಟ್ಟಿಲ್ಲ ಎಂದು ತಿಳಿದಿದ್ದು, ಆ ವ್ಯಕ್ತಿಯ ಮೇಲೆ ಕಠಿಣ ಕ್ರಮ ಕೈಗೊಂಡು ಕಾರ್‌ ಸೀಜ್ ಮಾಡಿದರು. ಈ ರೀತಿ ಯಾರಾದರೂ ಪೊಲೀಸರನ್ನು ಯಾಮಾರಿಸಲು ಹೋದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸೂಚನೆ ನೀಡಿದರು.

ಬೆಕಾಬಿಟ್ಟಿ ಓಡಾಡುತ್ತಿದ್ದವರ ವಾಹನಗಳು ಮುಲಾಜಿಲ್ಲದೇ ಸೀಜ್​​

ಬೆಳಗಾವಿಯಲ್ಲಿ ನಕಲಿ ವೈದ್ಯನ ಬೈಕ್ ಸೀಜ್
ಯುವಕನೊಬ್ಬ ವೈದ್ಯರ ಏಪ್ರೊನ್ ಹಾಕಿಕೊಂಡು ಹಿಂಬದಿಯಲ್ಲಿ ಮಹಿಳೆಯೊಬ್ಬರನ್ನು ಕೂರಿಸಿಕೊಂಡು ತರಕಾರಿ ತರಲು ಬಂದಿದ್ದಾನೆ. ಈ ವೇಳೆ, ಡಿಸಿಪಿ ವಿಕ್ರಮ್ ಆಮಟೆ, ಯುವಕನ ಬೈಕ್ ತಡೆದು ತಪಾಸಣೆ ನಡೆಸಿದಾಗ ಯುವಕ ಸಿಕ್ಕಿಬಿದ್ದಿದ್ದು, ಬೈಕ್ ಸೀಜ್ ಮಾಡಿದರು‌. ಈ ವೇಳೆ ಯುವಕ ನಮ್ಮ ಅಣ್ಣನ ಏಪ್ರೊನ್ ಮರೆತು ಹಾಕಿಕೊಂಡು ಬಂದಿದ್ದೇನೆ. ಬಿಟ್ಟು ಬಿಡಿ ಸರ್ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡನು‌. ಆದ್ರೆ, ಪೊಲೀಸರು ಬೈಕ್ ಬಿಡದ ಹಿನ್ನೆಲೆ ಮಹಿಳೆ ಜತೆಗೆ ಯುವಕ ನಡೆದುಕೊಂಡು ಮನೆ ದಾರಿ ಹಿಡಿದನು.

Last Updated : May 10, 2021, 6:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.