ETV Bharat / state

ಮನೆ ದೇವರ ದರ್ಶನಕ್ಕೆ ತೆರಳಿದ ಯುವಕರಿಬ್ಬರು ಅಪಘಾತದಲ್ಲಿ ದುರ್ಮರಣ..!

ಭೀಕರ ರಸ್ತೆ ಅಪಘಾತದಿಂದ ಇಬ್ಬರು ರಸ್ತೆ ಪಕ್ಕದಲ್ಲಿ ಕೆಳಗಡೆ ಬಿದ್ದಿದ್ದು, ಸಾರ್ವಜನಿಕರ ಕಣ್ಣಿಗೆ ಬಿದ್ದಿಲ್ಲ. ಸಾಕಷ್ಟು ಸಮಯದ ನಂತರ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಅಪಘಾತ ಗಮನಿಸಿ ಆ್ಯಂಬುಲೆನ್ಸ್​​ ಕರೆಸಿ ಆಸ್ಪತ್ರೆಗೆ ರವಾನಿಸಿದ್ದಾರೆ.

youths died in Accident
ಅಪಘಾತದಲ್ಲಿ ಸಾವನ್ನಪ್ಪಿದ ಯುವಕರು
author img

By

Published : Sep 27, 2022, 4:12 PM IST

ಬೆಳಗಾವಿ: ಮಹಾನವಮಿ ನಿಮಿತ್ತ ಮನೆದೇವರ ದರ್ಶನ ಪಡೆದು ಮರಳಿ ಬರುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಹುಕ್ಕೇರಿ ತಾಲೂಕಿನ ಹೊಳೆಮ್ಮನ ದೇವಸ್ಥಾನದ ಬಳಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದ ಮಲ್ಲನಗೌಡ ಯಲ್ಲನಗೌಡ ಪಾಟೀಲ (22) ಹಾಗೂ ಸಿದ್ದಾರೂಢ ವೀರಭದ್ರ ಕರೋಶಿ ಮೃತಪಟ್ಟವರು‌. ಮೃತರು ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಮನೆ ದೇವರ ದರ್ಶನಕ್ಕೆ ತೆರಳಿದರು. ದರ್ಶನ ಪಡೆದುಕೊಂಡು ಮನೆಗೆ ವಾಪಸ್ ಬರುವಾಗ ಹೊಳೆಮ್ಮನ ದೇವಸ್ಥಾನ ಬಳಿ ಹಳ್ಳದ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ ಆಗಿದೆ.

ಭೀಕರ ರಸ್ತೆ ಅಪಘಾತದಿಂದ ಮೃತರಿಬ್ಬರು ರಸ್ತೆ ಪಕ್ಕದಲ್ಲಿ ಕೆಳಗಡೆ ಬಿದ್ದಿದ್ದು, ಸಾರ್ವಜನಿಕರ ಕಣ್ಣಿಗೆ ಬಿದ್ದಿಲ್ಲ. ಸಾಕಷ್ಟು ಸಮಯದ ನಂತರ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಅಪಘಾತ ಗಮನಿಸಿ ಆ್ಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟೊತ್ತಿಗಾಗಲೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ.. ಎಎಸ್ಐ ಪತ್ನಿ, ಪುತ್ರಿ, ಕಾರು ಚಾಲಕ, ಓರ್ವ ಅಜ್ಜಿ ಸೇರಿ ನಾಲ್ವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.