ETV Bharat / state

ಚಿಕ್ಕೋಡಿಯಲ್ಲಿ ಭೀಕರ ಅಪಘಾತ: ಓವರ್​ಟೇಕ್​ ಮಾಡುವ ಭರದಲ್ಲಿ ಹಾರಿಹೋಯ್ತು ಯುವಕರ ಪ್ರಾಣ - accident in kabburu

ಚಿಕ್ಕೋಡಿ ತಾಲೂಕಿನ ಕಬ್ಬೂರು ಪಟ್ಟಣದ ಹೊರವಲಯದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಯುವಕರಿಬ್ಬರು ಅಸುನೀಗಿದ್ದಾರೆ.

chikkodi car accident
ಚಿಕ್ಕೋಡಿ ಅಪಘಾತ
author img

By

Published : Dec 2, 2021, 9:54 PM IST

ಚಿಕ್ಕೋಡಿ: ತಾಲೂಕಿನ ಕಬ್ಬೂರು ಪಟ್ಟಣದ ಹೊರವಲಯದ ನಿಪ್ಪಾಣಿ - ಮುದೋಳ ರಾಜ್ಯ ಹೆದ್ದಾರಿ 18ರ ಟೋಲ್ ನಾಕಾ ಬಳಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕರಿಬ್ಬರು ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಚಿಕ್ಕೋಡಿಯ ಕಬ್ಬೂರು ಪಟ್ಟಣದ ಉದಯ ಪಾಪು ಶಿವಾಯಗೋಳ (23) ಹಾಗೂ ಮಾರುತಿ ನಾಗಪ್ಪ ಹುಲ್ಲೋಳಿ (23) ಸಾವನ್ನಪ್ಪಿದವರು. ವಿಶಾಲ ಕಾಂಬಳೆ ಎಂಬಾತನಿಗೆ ಗಂಭೀರ ಗಾಯಗಳಾಗಿದೆ.

car accident
ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು

ಚಿಕ್ಕೋಡಿ ತಾಲೂಕಿನ ಕಬ್ಬೂರು ಮಾರ್ಗದ ಕಡೆಯಿಂದ ಟ್ರ್ಯಾಕ್ಟರ್​ನಲ್ಲಿ ಕಬ್ಬು ತುಂಬಿಕೊಂಡು ಹೊರಟಿದ್ದ ವೇಳೆ ಯುವಕರು ಓವರ್​ಟೇಕ್ ಮಾಡಲು ಯತ್ನಿಸಿ ಅದರ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ.

ಘಟನಾ ಸ್ಥಳಕ್ಕೆ ಚಿಕ್ಕೋಡಿ ಪಿಎಸ್‌ಐ ಯಮನಪ್ಪ ಮಾಂಗ್, ಸಿಪಿಐ ಆರ್.ಆರ್. ಪಾಟೀಲ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಒಮಿಕ್ರೋನ್ ಸೋಂಕಿತನ ಸಂಪರ್ಕದಲ್ಲಿದ್ದ ಐವರಿಗೆ ಕೋವಿಡ್​​..ರೂಪಾಂತರಿ ತಗುಲಿರುವ ಆತಂಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.