ETV Bharat / state

ಕುಂದಾನಗರಿ ಬಾಲಕಿಯ ಅಪ್ರತಿಮ ಸಾಧನೆ: ಅರಸಿ ಬಂತು ಇಂಡಿಯಾ ಬುಕ್ ಆಫ್ ರೆಕಾರ್ಡ್ ಅವಾರ್ಡ್

ಬೆಳಗಾವಿಯ 2 ವರ್ಷ 11 ತಿಂಗಳ ಮಾನ್ವಿ ಭರತ್ ನಿಲಜಕರ್ ಎಂಬ ಪುಟ್ಟ ಬಾಲಕಿ ಇಂಗ್ಲಿಷ್​ ರೈಮ್ಸ್ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಮಾಡಿದ್ದಾಳೆ.

author img

By

Published : Jun 19, 2023, 1:03 PM IST

india book of record
ಮಾನ್ವಿ ಭರತ್ ನಿಲಜಕರ್
ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಮಾಡಿದ ಮಾನ್ವಿ

ಬೆಳಗಾವಿ : ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ತಂದೆ ತಾಯಿಯ ಪ್ರೋತ್ಸಾಹ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಗಾವಿಯ ಈ ಪುಟಾಣಿಯೇ ಸಾಕ್ಷಿ. ಇಂಗ್ಲಿಷ್​ ರೈಮ್ಸ್ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಬರೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.

ಹೌದು, ಬೆಳಗಾವಿಯ ಫುಲಬಾಗ ಗಲ್ಲಿಯ 2 ವರ್ಷ 11 ತಿಂಗಳ ಮಾನ್ವಿ ಭರತ್ ನಿಲಜಕರ್ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸಾಧನೆ ಮೆರೆದ ಪುಟ್ಟ ಬಾಲಕಿ. ರೈಮ್ಸ್ ಉಚ್ಛಾರಣೆಯಲ್ಲಿ ಈ ಮೊದಲು ಬೆಂಗಳೂರಿನ ಹಿಶಿತಾ ಕೆ. ಎಂಬ ಐದು ವರ್ಷದ ಮಗು 20 ಇಂಗ್ಲಿಷ್ ರೈಮ್ಸ್ ಹಾಗೂ ಮಹಾರಾಷ್ಟ್ರ ರಾಜ್ಯದ ಅದ್ವಿಕಾ ಪಾಟಣಕರ್ (4 ವರ್ಷ 3 ತಿಂಗಳು) ಎಂಬ ಮಗು 22 ಇಂಗ್ಲಿಷ್ ರೈಮ್ಸ್ ಹೇಳಿರುವುದು ಈವರೆಗಿನ ದಾಖಲೆಯಾಗಿತ್ತು. ಆದರೆ, ಇದೀಗ 2 ವರ್ಷ 11 ತಿಂಗಳ ಮಾನ್ವಿ ಈ ಹಿಂದಿನ ಇವರೆಲ್ಲರ ದಾಖಲೆಗಳನ್ನು ಬ್ರೇಕ್ ಮಾಡಿ ಬೆಳಗಾವಿಗೆ ಕೀರ್ತಿ ತಂದಿದ್ದಾಳೆ.

ಕಳೆದ ಮೇ.13 ರಂದು ಆನ್‌ಲೈನ್ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಅಧಿಕಾರಿಗಳ ಮುಂದೆ ಜಾನಿ ಜಾನಿ ಎಸ್ ಪಪ್ಪಾ, ಟ್ವಿಂಕಲ್ ಟ್ವಿಂಕಲ್, ಓಲ್ಡ್ ಮೆಗ್‌ಡಾನಲ್ಡ್ ಸೇರಿ 17 ಇಂಗ್ಲೀಷ ರೈಮ್ಸ್, ಚಾಂದೋಬಾ ಚಾಂದೋಬಾ, ಜುಕು ಜುಕು ಅಗೀನ ಗಾಡಿ ಎಂಬ 2 ಮರಾಠಿ ರೈಮ್ಸ್ ಹಾಗೂ ಮಚಲಿ ಜಲ್ ಕಿ ರಾಣಿ, ಬಾರಿಷ್ ಆಯಾ ಚಮ್ ಚಮ್ ಚಮ್ ಸೇರಿದಂತೆ ಹಿಂದಿ ಭಾಷೆಯ ಐದು ಸೇರಿ ಒಟ್ಟು 24 ನರ್ಸರಿ ರೈಮ್ಸ್‌ಗಳನ್ನು ಹೇಳುವ ಮೂಲಕ‌ ವಿನೂತನ ದಾಖಲೆಯನ್ನು ಮಾನ್ವಿ ಬರೆದಿದ್ದಾಳೆ. ಅಲ್ಲದೇ, ಕಳೆದ ಬಾರಿ ಆಗಸ್ಟ್‌ನಲ್ಲಿಯೂ ಕರ್ನಾಟಕ ಬುಕ್ ಆಫ್ ಅಚೀವರ್ಸ್ ದಾಖಲೆ ಮಾಡಿರುವುದು ಈ ಮಗುವಿನ ಮತ್ತೊಂದು ಸಾಧನೆಯಾಗಿದೆ.

ಇದನ್ನೂ ಓದಿ : Yoga: ಯೋಗದಲ್ಲಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್' ಸಾಧನೆ​ ಮಾಡಿದ ಮಂಗಳೂರಿನ ಗುರು-ಶಿಷ್ಯೆ!

ಮೇ 23 ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಮೆಡಲ್ ಹಾಗೂ ಪ್ರಮಾಣ ಪತ್ರ ರೈಮ್ಸ್ ಕ್ವೀನ್ ಮಾನ್ವಿ ಕೈಸೇರಿದೆ. ಮಾನ್ವಿ ತಂದೆ ಭರತ್ ನಿಲಜಕರ್ ಅವರು ಬೆಳಗಾವಿಯ ಖಾಸಗಿ ಕಾಲೇಜಿನ ಪ್ರಾದ್ಯಾಪಕರಾಗಿ ಕೆಲಸ ಮಾಡುತ್ತಿದ್ದು, ತಾಯಿ ಲಕ್ಷ್ಮೀ ಸಹ ಶಿಕ್ಷಕಿಯಾಗಿದ್ದುಕೊಂಡು ಮನೆಯಲ್ಲಿ ಮಗುವಿನ ಏಳಿಗೆಗೆ ಬೆನ್ನುಲುಬಾಗಿ ನಿಂತಿದ್ದಾರೆ.

ಮಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ತಂದೆ ಭರತ್ ನಿಲಜಕರ್, ಈಟಿವಿ ಭಾರತ ಜೊತೆಗೆ ಮಾತನಾಡಿ, 'ನಮಗೆ ಬಹಳ ಖುಷಿಯಾಗುತ್ತಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಬೆಳಗಾವಿ ಮತ್ತು ಕರ್ನಾಟಕಕ್ಕೆ ಗೌರವ ತಂದು ಕೊಟ್ಟಿದ್ದಾಳೆ. ಮುಂದೆ ಆಕೆ ಇನ್ನು ಹೆಚ್ಚಿನ ಸಾಧನೆ ಮಾಡಬೇಕು. ಎಲ್ಲರೂ‌ ಆಶೀರ್ವಾದ ಮಾಡಬೇಕು. ಸಾಮಾನ್ಯವಾಗಿ ಮನೆಯಲ್ಲಿ ನಮ್ಮ ಮಗಳು ಡಾಕ್ಟರ್ ಕಿಟ್ ಇಟ್ಟುಕೊಂಡೇ ಆಟ ಆಡುತ್ತಾಳೆ. ಹೀಗಾಗಿ, ಮನೆಯಲ್ಲಿ ನಾವೆಲ್ಲಾ ಡಾಕ್ಟರ್ ಮಾನ್ವಿ ಅಂತಾನೆ ಆಕೆಯನ್ನು ಕರೆಯುತ್ತೇವೆ. ಆಕೆಯನ್ನು ವೈದ್ಯೆ ಮಾಡಬೇಕು ಎಂಬ ಆಸೆ ಇದೆ" ಎಂದು ತಿಳಿಸಿದರು.

ಇದನ್ನೂ ಓದಿ : ಬೈಲಹೊಂಗಲ ಬಾಲೆ ನೆನಪಿನ ಶಕ್ತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ

ಉಪನ್ಯಾಸಕ ಮಹಾದೇವ ಧರಿಗೌಡರ ಮಾತನಾಡಿ, "ನಾವು ತುಂಬಾ ದಿನದಿಂದ ಮಾನ್ವಿಯನ್ನು ನೋಡಿಕೊಂಡು ಬಂದಿದ್ದೇವೆ. 18 ತಿಂಗಳು ಇದ್ದಾಗಲೇ ತೊದಲು ನುಡಿಯುತ್ತಾ ರೈಮ್ಸ್ ಹೇಳಲು ಆರಂಭಿಸಿದ್ದಳು. ಟಿವಿಯಲ್ಲಿ ರೈಮ್ಸ್ ನೋಡುತ್ತಾ ಈ ಮಗು ಕಲಿತಿದೆ. ಈಗ ಇಂಡಿಯಾ ಬುಕ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿರುವುದು ನಮಗೆ ಮಾತ್ರವಲ್ಲ ಇಡೀ ಬೆಳಗಾವಿಗೆ ಖುಷಿಯ ವಿಚಾರ. ಈ ಮೊದಲು ಆಕೆ ಎರಡೂವರೇ ವರ್ಷ ಇದ್ದಾಗಲೇ‌ ಕರ್ನಾಟಕ ಬುಕ್ ಆಫ್ ಅಚೀವರ್ಸ್ ನಲ್ಲೂ ದಾಖಲೆ ಬರೆದಿದ್ದಳು. ಮುಂದೆ ಮಾನ್ವಿ ದೊಡ್ಡ ಹುದ್ದೆ ಪಡೆಯುವುದರಲ್ಲಿ ಅನುಮಾನವೇ ಇಲ್ಲ. ಮಾನ್ವಿಯ ಸಾಧನೆ ಹಿಂದೆ ಆಕೆಯ ತಂದೆ-ತಾಯಿಯ ಶ್ರಮ ಬಹಳಷ್ಟಿದೆ" ಎಂದು ತಿಳಿಸಿದರು.

ಒಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಗೈದಿರುವ ಕುಂದಾನಗರಿ ಪೋರಿ ಮಾನ್ವಿ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮೆರೆಯಲಿ ಎಂಬುದು ಎಲ್ಲರ ಆಶಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.