ETV Bharat / state

ಸುಟ್ಟ ಗಾಯದೊಂದಿಗೆ ಕೃಷ್ಣಾ ನದಿ ದಂಡೆಯಲ್ಲಿ 2 ವರ್ಷದ ಬಾಲಕಿ ಪತ್ತೆ: ವಾಮಾಚಾರಕ್ಕೆ ಬಳಕೆ ಶಂಕೆ - ನದಿದಂಡೆಯಲ್ಲಿ ಹೆಣ್ಣು ಮಗು ಪತ್ತೆ

ಅಥಣಿ ತಾಲೂಕಿನ ಗ್ರಾಮವೊಂದರ ಬಳಿ ಕೃಷ್ಣಾ ನದಿ ದಂಡೆಯಲ್ಲಿ ಎರಡು ವರ್ಷದ ಬಾಲಕಿ ಸುಟ್ಟ ಗಾಯಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಾಮಾಚಾರಕ್ಕೆ ಬಳಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Two-year-old girl found in Krishna River with burn injuries
ಕೃಷ್ಣಾ ನದಿ ದಂಡೆಯಲ್ಲಿ ಎರಡು ವರ್ಷದ ಹೆಣ್ಣು ಮಗು ಪತ್ತೆ
author img

By

Published : Sep 23, 2021, 9:00 PM IST

ಅಥಣಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿ ದಂಡೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಗೂ ಮೈತುಂಬ ಸುಟ್ಟ ಗಾಯಗಳಾಗಿ ಬಿದ್ದಿದ್ದ ಅಪರಿಚಿತ ಬಾಲಕಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಹಲ್ಯಾಳ ಗ್ರಾಮದ ಬಳಿಯ ಕೃಷ್ಣಾನದಿಯ ಪಕ್ಕದ ತೋಟದಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಗ್ರಾಮಸ್ಥರು ಆ್ಯಂಬುಲೆನ್ಸ್​ನಲ್ಲಿ ಮಗುವನ್ನು ತಾಲೂಕು ಸಮುದಾಯ ಆಸ್ಪತ್ರೆಗೆ ರವಾನಿಸಿದ್ದಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಅಪರಿಚಿತ ವ್ಯಕ್ತಿಗಳು ಮಗುವನ್ನು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಇದುವರೆಗೆ ಬಾಲಕಿಯ ಗುರುತು ಪತ್ತೆ ಆಗಿಲ್ಲ. ಅಥಣಿ ಪೊಲೀಸರು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಾಮಾಚಾರಕ್ಕೆ ಹೆಣ್ಣು ಮಗು ಬಳಕೆ..?

ವಾಮಾಚಾರಕ್ಕೆ ಎರಡು ವರ್ಷದ ಬಾಲಕಿಯನ್ನು ಬಳಸಿಕೊಂಡು, ಈ ರೀತಿ ಸುಟ್ಟಿರಬಹುದು. ಅಥವಾ ಬೇರೆ ಕಡೆಯಿಂದ ಅಪಹರಣ ಮಾಡಿಕೊಂಡು ಬಂದು ದುಷ್ಕರ್ಮಿಗಳು ಇಲ್ಲಿ ಬಿಟ್ಟು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.