ಚಿಕ್ಕೋಡಿ(ಬೆಳಗಾವಿ): ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಯುವಕರಿಬ್ಬರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್ ಬಳಿ ಸಂಭವಿಸಿದೆ.
ವಿನಾಯಕ ಚಿದಾನಂದ ಕಾವೇರಿ (22) ಹಾಗೂ ಮುತ್ತು ಮಾಳಿ (22) ಸಾವನ್ನಪ್ಪಿರುವ ಯುವಕರಾಗಿದ್ದಾರೆ. ಧಾರವಾಡದಿಂದ ಅಥಣಿಗೆ ತೆರಳುತ್ತಿದ್ದ ವೇಳೆ ಮೂಡಲಗಿಯ ಗುರ್ಲಾಪೂರ ಕ್ರಾಸ್ ಬಳಿ ಅಪಘಾತವಾಗಿದೆ. ಈರಯ್ಯ ಹಿರೇಮಠ (22) ಎಂಬಾತ ತೀವ್ರ ಗಾಯಗೊಂಡಿದ್ದು, ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
![two-killed-in-car-accident-near-mudalagi](https://etvbharatimages.akamaized.net/etvbharat/prod-images/13040729_thum.jpg)
ಈರಯ್ಯ ಅವರ ತಾಯಿಯನ್ನು ಧಾರವಾಡಕ್ಕೆ ಬಿಟ್ಟು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಮೆರಿಕದ ಯುದ್ಧ ವಿಮಾನಕ್ಕೆ ಜೋಕಾಲಿ ಕಟ್ಟಿ ಆಟವಾಡಿದ ತಾಲಿಬಾನಿಗಳು- Video Viral